‘ಪ್ರೇಕ್ಷಕರು ಸರಿ ಇಲ್ಲ ಎನ್ನಬಾರದು’: ಸಿನಿಮಾ ಸೋಲಿನ ಬಗ್ಗೆ ಚಿರಂಜೀವಿ ಮಾತು

| Updated By: ಮಂಜುನಾಥ ಸಿ.

Updated on: Nov 13, 2024 | 6:33 PM

Megastar Chiranjeevi: ಕನ್ನಡದ ಡಾಲಿ ಧನಂಜಯ್ ನಟನೆಯ ತೆಲುಗು ಸಿನಿಮಾ ‘ಜಿಬ್ರಾ’ ಇವೆಂಟ್​ಗೆ ಅತಿಥಿಯಾಗಿ ಆಗಮಿಸಿದ್ದ ನಟ ಚಿರಂಜೀವಿ, ‘ಪ್ರೇಕ್ಷಕರು ತಪ್ಪು’ ಎಂದು ಎಂದಿಗೂ ಹೇಳಬೇಡಿ, ‘ಪ್ರೇಕ್ಷರು ಯಾವಾಗಲೂ ತಪ್ಪಲ್ಲ’ ಎಂದಿದ್ದಾರೆ.

‘ಪ್ರೇಕ್ಷಕರು ಸರಿ ಇಲ್ಲ ಎನ್ನಬಾರದು’: ಸಿನಿಮಾ ಸೋಲಿನ ಬಗ್ಗೆ ಚಿರಂಜೀವಿ ಮಾತು
Follow us on

ಸಿನಿಮಾ ಸೋತ ಬಳಿಕ ಆ ತಪ್ಪನ್ನು ಅನೇಕರು ಪ್ರೇಕ್ಷಕರ ಮೇಲೆ ಹಾಕುತ್ತಾರೆ. ಪ್ರೇಕ್ಷಕರು ಬರದೆ ಇದ್ದ ಕಾರಣದಿಂದ ಸಿನಿಮಾ ಸೋತಿತು ಎನ್ನುತ್ತಾರೆ. ಆದರೆ, ಯಾರೊಬ್ಬರೂ ತಾವು ಸಿನಿಮಾನ ಚೆನ್ನಾಗಿ ಮಾಡಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಇನ್ನು, ಸಿನಿಮಾ ಸೋತ ಬಳಿಕ ಕೆಲವರು ಪ್ರೇಕ್ಷಕರನ್ನು ಬೈದಿದ್ದು ಇದೆ. ಈ ಬಗ್ಗೆ ಚಿರಂಜೀವಿ ಅವರು ಮಾತನಾಡಿದ್ದಾರೆ. ಸತ್ಯ, ಧನಂಜಯ್ ಮೊದಲಾದವರು ನಟಿಸಿರುವ ‘ಜಿಬ್ರಾ’ ಚಿತ್ರದ ಟ್ರೇಲರ್ ಈವೆಂಟ್​ಗೆ ಅತಿಥಿಯಾಗಿ ತೆರಳಿದ್ದರು. ‘ಪ್ರೇಕ್ಷರು ಯಾವಾಗಲೂ ತಪ್ಪಲ್ಲ’ ಎಂದಿದ್ದಾರೆ.

ಟಾಲಿವುಡ್​ನಲ್ಲಿ ಮಧ್ಯಮ ಬಜೆಟ್ ಸಿನಿಮಾಗಳು ಉತ್ತಮವಾಗಿ ಗೆಲುವು ಕಂಡಿದೆ. ‘ಹುನುಮಾನ್’, ‘ಮಾತು ವಡಲರ 2’, ‘ಅಮರನ್’, ‘ಕ’, ‘ಲಕ್ಕಿ ಭಾಸ್ಕರ್’ ರೀತಿಯ ಸಿನಿಮಾಗಳೇ ಇದಕ್ಕೆ ಸಾಕ್ಷಿ. ‘ಚಿತ್ರ ಚೆನ್ನಾಗಿದ್ದರೆ ಪ್ರೇಕ್ಷಕರು ಥಿಯೇಟರ್ಗೆ ಬರುತ್ತಾರೆ ಎಂಬುದಕ್ಕೆ ಈ ರೀತಿಯ ಸಿನಿಮಾಗಳೇ ಉದಾಹರಣೆ’ ಎಂದರು ಅವರು.

ಕೊವಿಡ್ ಕಾಣಿಸಿಕೊಂಡ ಬಳಿಕ ಪ್ರೇಕ್ಷಕರಲ್ಲಿ ಒಂದು ತಪ್ಪು ಕಲ್ಪನೆ ಇತ್ತು. ‘ಕೊವಿಡ್ ಕಾಣಿಸಿಕೊಂಡ ಬಳಿಕ ಬಿಗ್ ಬಜೆಟ್ ಚಿತ್ರಗಳನ್ನು ಮಾತ್ರ ಜನರು ನೋಡುತ್ತಾರೆ ಎಂಬ ನಂಬಿಕೆ ಇದೆ. ಆದರೆ, ಪ್ರೇಕ್ಷಕ ಎಂದಿಗೂ ತಪ್ಪು ಮಾಡಲಾರ. ಸಿನಿಮಾ ನೋಡಲು ಪ್ರೇಕ್ಷಕರು ಥಿಯೇಟರ್ಗೆ ಬಂದಿಲ್ಲ ಎಂದರೆ ಅದು ತಂಡದವರ ತಪ್ಪು. ಅವರು ಉತ್ತಮ ಸಿನಿಮಾ ಮಾಡಿಲ್ಲ ಎಂದರ್ಥ’ ಎಂದಿದ್ದಾರೆ ಚಿರು.

ಇದನ್ನೂ ಓದಿ:ಚಿರಂಜೀವಿ ಜೊತೆ ನಟಿಸುವ ಅವಕಾಶ ತಪ್ಪಿಸಿಕೊಂಡಿದ್ದ ಡಾಲಿ ಧನಂಜಯ್

‘ನಿರ್ದೇಶಕನಾಗಲೀ, ಹಣವಾಗಲೀ ಜನರನ್ನು ಥಿಯೇಟರ್ಗೆ ಕರೆತರುವುದಿಲ್ಲ. ಯಾವ ರೀತಿಯ ಸಿನಿಮಾ ಮಾಡಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಸಿನಿಮಾ ರಿಲೀಸ್ ಮಾಡುವುದಕ್ಕೂ ಮೊದಲು ಎರಡು ಬಾರಿ ನೋಡಬೇಕು’ ಎಂದಿದ್ದಾರೆ ಚಿರು.

ಚಿರಂಜೀವಿ ಅವರು ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಕಂಡಿದ್ದರು. ಅವರ ನಟನೆಯ ‘ಆಚಾರ್ಯ’ ಸಿನಿಮಾ ಹೀನಾಯವಾಗಿ ಸೋತಿತು. ಈ ಚಿತ್ರದ ಹಂಚಿಕೆದಾರರು ದೊಡ್ಡ ನಷ್ಟ ಅನುಭವಿಸಿದರು. ಈ ವೇಳೆ ಚಿರಂಜೀವಿ ಅವರು ಸಹಾಯ ಮಾಡಿದ್ದರು. ಇನ್ನು, ‘ಭೋಲಾ ಶಂಕರ್’ ಕೂಡ ಫ್ಲಾಪ್ ಎನಿಸಿಕೊಂಡಿತು. ‘ವಿಶ್ವಂಭರ’ ಹೆಸರಿನ ಸಿನಿಮಾದಲ್ಲಿಯೂ ಚಿರಂಜೀವಿ ನಟಿಸುತ್ತಾ ಇದ್ದಾರೆ. ಈ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ. ಈ ಚಿತ್ರಕ್ಕಾಗಿ ಪ್ರೇಕ್ಷಕ ಕಾದಿದ್ದಾನೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ