Anurag Kashyap: ‘ಕಾಂತಾರ’ ಚಿತ್ರದ ಯಶಸ್ಸಿನ ಬಳಿಕ ಆ ಒಂದು ತಪ್ಪು ಮಾಡಬೇಡಿ; ರಿಷಬ್​ ಶೆಟ್ಟಿಗೆ ಸಲಹೆ ನೀಡಿದ ಅನುರಾಗ್ ಕಶ್ಯಪ್

ಬಾಲಿವುಡ್​ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಕಾಂತಾರ ಚಿತ್ರದ ಕುರಿತು ಮಾತನಾಡಿದ್ದು, ನಟ, ನಿರ್ದೇಶಕ ರಿಷಬ್​ ಶೆಟ್ಟಿಗೆ ಸಲಹೆ ನೀಡಿದ್ದಾರೆ.

Anurag Kashyap: 'ಕಾಂತಾರ' ಚಿತ್ರದ ಯಶಸ್ಸಿನ ಬಳಿಕ ಆ ಒಂದು ತಪ್ಪು ಮಾಡಬೇಡಿ; ರಿಷಬ್​ ಶೆಟ್ಟಿಗೆ ಸಲಹೆ ನೀಡಿದ ಅನುರಾಗ್ ಕಶ್ಯಪ್
ರಿಷಬ್​ ಶೆಟ್ಟಿ, ಅನುರಾಗ್ ಕಶ್ಯಪ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 10, 2022 | 11:05 PM

ಬಾಲಿವುಡ್​ ನಿರ್ಮಾಪಕ ಅನುರಾಗ್ ಕಶ್ಯಪ್ (Anurag Kashyap)​ ಇತ್ತೀಚೆಗೆ ‘ಗಲಟ್ಟಾ ಪ್ಲಸ್’ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಚಲನಚಿತ್ರೋದ್ಯಮವನ್ನು ಬಾಧಿಸುತ್ತಿರುವ ಕೆಲ ಸಮಸ್ಯೆಗಳ ಕುರಿತಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನಾಗರಾಜ ಮಂಜುಳೆ ನಿರ್ದೇಶನದಲ್ಲಿ ತೆರೆಗೆ ಬಂದು ಸೂಪರ್​ ಹಿಟ್​ ಆದ ಚಿತ್ರ ‘ಸೈರಾಟ್’. ಈ ಚಿತ್ರದ ಯಶಸ್ಸು ಬಹುಶಃ ಮರಾಠಿ ಸಿನಿಮಾವನ್ನು ನಾಶಗೊಳಿಸಬಹುದು ಎಂದು ಈ ಹಿಂದೆ ತಾವು ಹೇಳಿದ್ದನ್ನು  ಅನುರಾಗ್ ಕಶ್ಯಪ್​ ನೆನಪಿಸಿಕೊಂಡರು. ಸದ್ಯ ಸ್ಯಾಂಡಲ್​ವುಡ್​ನಲ್ಲಿ ‘ಕಾಂತಾರ’ (Kantara) ಚಿತ್ರ ಹಿಟ್​ ಆಗಿದೆ. ಹಾಗಾಗಿ ನಟ, ನಿರ್ದೇಶಕ ರಿಷಬ್​ ಶೆಟ್ಟಿ ಅವರಿಗೆ ಅನುರಾಗ್ ಕಶ್ಯಪ್ ಸಲಹೆ ನೀಡಿದ್ದಾರೆ.

ದಕ್ಷಿಣ ಭಾರತದ ಹಿಟ್ ಚಿತ್ರಗಳಾದ ‘ಕಾಂತಾರ’, ‘ಪುಷ್ಪ: ದಿ ರೈಸ್’ ಮತ್ತು ‘ಕೆಜಿಎಫ್’ ಚಿತ್ರಗಳ ಯಶಸ್ಸಿನ ಬಗ್ಗೆ ಮಾತನಾಡಿದ ಅನುರಾಗ್ ಕಶ್ಯಪ್, ‘ಒಂದು ಚಿತ್ರದ ಯಶಸ್ಸಿನಿಂದ ನಿರ್ಮಾಪಕರು ಏನು ಕಲಿಯುತ್ತಾರೆ ಎಂಬುವುದು ಬಹಳ ಮುಖ್ಯವಾಗುತ್ತದೆ’ ಎಂದು ಹೇಳಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರಗಳನ್ನು ಮಾಡುವುದರಿಂದ ಇದೀಗ ಏನಾಗುತ್ತಿದೆ ಎಂದರೆ ಎಲ್ಲರೂ ಪ್ಯಾನ್-ಇಂಡಿಯನ್ ಚಲನಚಿತ್ರವನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವುಗಳಲ್ಲಿ 5% ಅಥವಾ 10% ಯಶಸ್ಸು ಗಳಿಸುತ್ತವೆ.

ಇದನ್ನೂ ಓದಿ: Kantara: ಎಲ್ಲಾ ಭಾಷೆಗಳಲ್ಲಿ ಬರುವ ದೈವದ ಧ್ವನಿ ನನ್ನದೆ: ‘ಕಾಂತಾರ’ ಚಿತ್ರದ ಕ್ಲೈಮ್ಯಾಕ್ಸ್‌ ರಹಸ್ಯ ಬಿಚ್ಚಿಟ್ಟ ರಿಷಬ್​ ಶೆಟ್ಟಿ

‘ಕಾಂತಾರ, ಪುಷ್ಪದಂತಹ ಚಿತ್ರವು ಹೊರಗಿನ ಪ್ರಪಂಚಕ್ಕೆ ನಿಮ್ಮ ಕಥೆಯನ್ನು ಹೇಳಲು ನಿಮಗೆ ಧೈರ್ಯವನ್ನು ನೀಡುತ್ತದೆ. ಆದರೆ ಕೆಜಿಎಫ್​ನಂತಹ ಎಷ್ಟೇ ದೊಡ್ಡ ಯಶಸ್ಸು ಪಡೆಯಲು ನೀವು ಯೋಜನೆಯನ್ನು ಹೊಂದಿ ಪ್ರಯತ್ನಿಸಿದರೆ, ಅದು ಅವನತಿಯತ್ತ ಸಾಗಲು ಪ್ರಾರಂಭಿಸುತ್ತದೆ. ಈ ರೀತಿಯಾಗಿಯೇ ಬಾಲಿವುಡ್​ ತನ್ನನ್ನು ತಾನೇ ನಾಶಪಡಿಸಿಕೊಂಡಿದೆ’ ಎಂದರು.

‘ನಟ ರಿಷಬ್ ಶೆಟ್ಟಿ ಅವರು ತಮ್ಮ ಸೊಗಡಿಗೆ ತಕ್ಕಂತೆ ಚಿತ್ರವನ್ನು ಮಾಡಿ ಗೆದಿದ್ದಾರೆ. ಅದೇ ಒಂದು ವೇಳೆ ಸಿನಿಮಾ ವೈಖರಿಯನ್ನು ಬದಲಾಯಿಸದೆ ಮತ್ತು ಬಾಕ್ಸ್‌ ಆಫೀಸ್‌ನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಬಜೆಟ್ ಚಿತ್ರಗಳನ್ನು ಮಾಡಲು ಪ್ರಾರಂಭಿಸಿದರೆ ಅದು ಸರಿಯಲ್ಲ. ಅದು ಅವರಿಗೆ ಸಂಕಷ್ಟ ತಂದೊಡ್ಡಬಹುದು. ಸಿನಿಮಾ ಮಾಡುವ ಅವರ ವಿಧಾನ ಮೊದಲಿನಂತೆಯೇ ಇದ್ದರೆ ಉತ್ತಮ’ ಎಂದು ರಿಷಬ್‌ ಶೆಟ್ಟಿಗೆ ಸಲಹಾ ನೀಡಿದ್ದಾರೆ.

‘ಗಲಟ್ಟಾ ಪ್ಲಸ್’ ಕಾರ್ಯಕ್ರಮದಲ್ಲಿ ಅನುರಾಗ್ ಕಶ್ಯಪ್, ನಿಪುನ್ ಧರ್ಮಾಧಿಕಾರಿ, ಶ್ರೀನಿಧಿ ಶೆಟ್ಟಿ, ಪೂಜಾ ಹೆಗ್ಡೆ, ಕರಣ್ ಜೋಹರ್, ಕಾರ್ತಿ, ದುಲ್ಕರ್ ಸಲ್ಮಾನ್ ಮತ್ತು ವರುಣ್ ಧವನ್ ಮುಂತಾದವರು ಉಪಸ್ಥಿತರಿದ್ದರು.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:59 pm, Sat, 10 December 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್