ಬಾಕ್ಸ್​ ಆಫೀಸ್​​ನಲ್ಲಿ ಸುನಾಮಿ ಎಬ್ಬಿಸಿದ ‘ದೃಶ್ಯಂ 3’; ಮೊದಲ ದಿನ ಭರ್ಜರಿ ಕಲೆಕ್ಷನ್

ಮೋಹನ್‌ಲಾಲ್ ನಟನೆಯ 'ದೃಶ್ಯಂ 3' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಸಿದೆ. ಮೊದಲ ದಿನವೇ ಜಾಗತಿಕವಾಗಿ ಸಾಕಷ್ಟು ಗಳಿಸುವ ಮೂಲಕ ಭರ್ಜರಿ ಓಪನಿಂಗ್ ಪಡೆದಿದೆ. ಜಾರ್ಜ್‌ಕುಟ್ಟಿ ಕಥೆ ಪ್ರೇಕ್ಷಕರ ಮನ ಗೆದ್ದಿದ್ದು, ಭಾರತದಲ್ಲಿ ಹಾಗೂ ವಿದೇಶದಲ್ಲಿ ಕೋಟಿ ಕೋಟಿ ಗಳಿಸಿದೆ. ಚಿತ್ರದ ಕ್ಲೈಮ್ಯಾಕ್ಸ್, ಮೋಹನ್‌ಲಾಲ್ ಅಭಿನಯಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದಾಖಲೆ ಬರೆದಿದೆ.

ಬಾಕ್ಸ್​ ಆಫೀಸ್​​ನಲ್ಲಿ ಸುನಾಮಿ ಎಬ್ಬಿಸಿದ ‘ದೃಶ್ಯಂ 3’; ಮೊದಲ ದಿನ ಭರ್ಜರಿ ಕಲೆಕ್ಷನ್
ದೃಶ್ಯಂ 3

Updated on: May 22, 2026 | 8:42 AM

ಮಲಯಾಳಂ ಚಿತ್ರರಂಗದಲ್ಲಿ ‘ದೃಶ್ಯಂ 3’ ಚಿತ್ರಕ್ಕೆ ಅದರದ್ದೇ ಆದ ದೊಡ್ಡ ಅಭಿಮಾನಿ ವರ್ಗ ಇದೆ. ಹಿರಿಯ ನಟ ಮೋಹನ್‌ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ದೃಶ್ಯಂ 3’ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಜಾರ್ಜ್‌ಕುಟ್ಟಿ ಮತ್ತು ಆತನ ಕುಟುಂಬದ ರಹಸ್ಯಗಳ ಸುತ್ತ ಹೆಣೆಯಲಾದ ಈ ಚಿತ್ರವನ್ನು ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ.

ಮೊದಲ ದಿನದ ಕಲೆಕ್ಷನ್ ವಿವರ:

ದೇಶಾದ್ಯಂತ ಒಟ್ಟು 5,506 ಶೋಗಳ ಪ್ರದರ್ಶನ ಕಂಡ ‘ದೃಶ್ಯಂ 3’, ಭಾರತದಲ್ಲಿ ಮೊದಲ ದಿನವೇ 15.85 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ 18.37 ಕೋಟಿ ರೂಪಾಯಿ ಆಗಿದೆ. ಕೇವಲ ದೇಶದಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲೂ ಈ ಸಿನಿಮಾದ ಮ್ಯಾಜಿಕ್ ವರ್ಕ್ ಆಗಿದ್ದು, ಬರೋಬ್ಬರಿ 25 ಕೋಟಿ ಗ್ರಾಸ್ ಕಲೆಕ್ಷನ್ ಹರಿದುಬಂದಿದೆ.

ಇದನ್ನೂ ಓದಿ: ಹಿಂದಿ ‘ದೃಶ್ಯಂ 3’ ಮಲಯಾಳಂಗಿಂತ ಸಾಕಷ್ಟು ಭಿನ್ನ: ಬಿಡುಗಡೆಯಲ್ಲಿ ಗೊಂದಲ

‘ದೃಶ್ಯಂ 3’ ಚಿತ್ರ ಭಾರತಕ್ಕಿಂತ ವಿದೇಶದಲ್ಲಿ ಹೆಚ್ಚು ಗಳಿಕೆ ಮಾಡಿದೆ. ದುಬೈ ಮೊದಲಾದ ಕಡೆಗಳಲ್ಲಿರುವ ಅನಿವಾಸಿ ಭಾರತೀಯರು ಸಿನಿಮಾ ಇಷ್ಟಪಟ್ಟು ನೋಡಿದ್ದಾರೆ. ಇದರೊಂದಿಗೆ ಸಿನಿಮಾ ಬಿಡುಗಡೆಯಾದ ಕೇವಲ ಒಂದೇ ದಿನದಲ್ಲಿ ವಿಶ್ವಾದ್ಯಂತ ಒಟ್ಟು 43.37 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ದಾಖಲೆಯ ಆರಂಭ ಪಡೆದಿದೆ.

ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆ ಅದ್ಭುತವಾಗಿದೆ ಎಂಬುದಕ್ಕೆ ಪ್ರಮುಖ ಟಿಕೆಟ್ ಬುಕಿಂಗ್ ಆ್ಯಪ್ ‘ಬುಕ್ ಮೈ ಶೋ’ ಸಾಕ್ಷಿಯಾಗಿದೆ. ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 17.8 ಸಾವಿರಕ್ಕೂ ಅಧಿಕ ವೋಟ್​​​ಗಳೊಂದಿಗೆ 8.9/10 ರೇಟಿಂಗ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಪ್ರೇಕ್ಷಕರು ಚಿತ್ರದ ಕ್ಲೈಮ್ಯಾಕ್ಸ್ ಟ್ವಿಸ್ಟ್ ಹಾಗೂ ಮೋಹನ್‌ಲಾಲ್ ಅವರ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us