‘ದೃಶ್ಯಂ 3’ ಚಿತ್ರದಲ್ಲಿ ಭಾರೀ ಬದಲಾವಣೆ; ಕನ್ನಡ ವರ್ಷನ್ ಕಥೆ ಏನು?

‘ದೃಶ್ಯಂ 3’ ಚಿತ್ರದಲ್ಲಿ ಭಾರೀ ಬದಲಾವಣೆಗಳಾಗಲಿವೆ. ಹಿಂದಿ ಮತ್ತು ಮಲಯಾಳಂ ಆವೃತ್ತಿಗಳ ಕಥಾವಸ್ತು, ಥ್ರಿಲ್ಲರ್ ಅಂಶಗಳು ಭಿನ್ನವಾಗಿರುತ್ತವೆ. ಹಿಂದಿ ಆವೃತ್ತಿಯ ಚಿತ್ರೀಕರಣ ಬಹುತೇಕ ಮುಗಿದಿದ್ದು, ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ. ಕನ್ನಡದಲ್ಲಿಯೂ ‘ದೃಶ್ಯ 3’ ಬರಲಿದೆ. ಆದರೆ ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ.

‘ದೃಶ್ಯಂ 3’ ಚಿತ್ರದಲ್ಲಿ ಭಾರೀ ಬದಲಾವಣೆ; ಕನ್ನಡ ವರ್ಷನ್ ಕಥೆ ಏನು?
ರವಿಚಂದ್ರನ್-ಮೋಹನ್​ಲಾಲ್

Updated on: May 12, 2026 | 7:25 AM

‘ದೃಶ್ಯಂ’ ಚಿತ್ರದ ಸರಣಿಗೆ ಭಾರತ ಚಿತ್ರರಂಗದಲ್ಲಿ ಭಾರೀ ಬೇಡಿಕೆ ಇದೆ. ಈಗ ಎಲ್ಲರ ಕಣ್ಣು ‘ದೃಶ್ಯಂ 3’ ಮೇಲಿದೆ. ಈ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ ಪನೋರಮಾ ಸ್ಟುಡಿಯೋಸ್‌ನ ಅಭಿಷೇಕ್ ಪಾಠಕ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಅಜಯ್ ದೇವಗನ್ ಅಭಿನಯದ ಹಿಂದಿ ಆವೃತ್ತಿಯು ಮೋಹನ್‌ಲಾಲ್ ಅವರ ಮಲಯಾಳಂ ಆವೃತ್ತಿಗಿಂತ ಭಿನ್ನವಾಗಿರಲಿದೆ ಎಂದು ರಿವೀಲ್ ಮಾಡಿದ್ದಾರೆ. ಈ ಚಿತ್ರವನ್ನು ಅವರು ನಿರ್ಮಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.

1. ದೃಶ್ಯಂ 3 ಚಿತ್ರದ ಬಗ್ಗೆ ದೊಡ್ಡ ಅಪ್​​ಡೇಟ್

2. ಮಲಯಾಳಂಗಿಂತ ಹಿಂದಿಯಲ್ಲಿ ಬೇರೆ ರೀತಿಯ ಕಥೆ

3. ಕನ್ನಡದಲ್ಲಿ ಮೂಲ ಚಿತ್ರದ ಕಥೆ ಫಾಲೋ ಸಾಧ್ಯತೆ 

ಹಿಂದಿ ‘ದೃಶ್ಯಂ 3’ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆಯಂತೆ. ಸಣ್ಣಪುಟ್ಟ ಪ್ಯಾಚ್‌ವರ್ಕ್ ಕೆಲಸಗಳು ನಡೆಯುತ್ತಿವೆ. ಈ ಚಿತ್ರವನ್ನು ಅಕ್ಟೋಬರ್ 2ರಂದು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಮಲಯಾಳಂನಲ್ಲಿ ಮೇ 21ಕ್ಕೆ ತೆರೆಗೆ ಬರಲಿದೆ. ವಿಶೇಷವೆಂದರೆ, ಮಲಯಾಳಂ ಆವೃತ್ತಿಯು ಕೌಟುಂಬಿಕ ಡ್ರಾಮಾಕ್ಕೆ ಹೆಚ್ಚು ಒತ್ತು ನೀಡಿದರೆ, ಹಿಂದಿ ಆವೃತ್ತಿಯನ್ನು ಪಕ್ಕಾ ‘ಫ್ಯಾಮಿಲಿ ಥ್ರಿಲ್ಲರ್’ ಆಗಿ ರೂಪಿಸಲಾಗಿದೆ. ಹಿಂದಿ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕಥೆಯ ಹಾದಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಕ್ಲೈಮ್ಯಾಕ್ಸ್ ಕೂಡ ಪ್ರೇಕ್ಷಕರಿಗೆ ದೊಡ್ಡ ಶಾಕ್ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ದೃಶ್ಯಂ 3’ ಟೀಸರ್: ಜಾರ್ಜ್ ಕುಟ್ಟಿಗೆ ಮೊದಲ ಬಾರಿ ಭಯವಾಗಿದೆ

‘ದೃಶ್ಯಂ’ ಅಂತಹ ಸಿನಿಮಾಗಳನ್ನು ಬರೆಯುವಾಗ ಮೊದಲು ಕ್ಲೈಮ್ಯಾಕ್ಸ್ ಸಿದ್ಧಪಡಿಸಿಕೊಳ್ಳಬೇಕು ಎಂದು ಅಭಿಷೇಕ್ ಹೇಳಿದ್ದಾರೆ. ಜೀತು ಜೋಸೆಫ್ ಅವರ ಮಲಯಾಳಂ ಡ್ರಾಫ್ಟ್ ಮತ್ತು ತಮ್ಮ ಹಿಂದಿ ಡ್ರಾಫ್ಟ್ ನಡುವೆ ಸಾಕಷ್ಟು ಚರ್ಚೆಗಳು ನಡೆದಿದ್ದು, ಅಂತಿಮವಾಗಿ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವಂತಹ ಚಿತ್ರಕಥೆಯನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕನ್ನಡದ ‘ದೃಶ್ಯ 3’ ಕಥೆ ಏನು?:

ಹಿಂದಿ ಮತ್ತು ಮಲಯಾಳಂನಲ್ಲಿ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿದ್ದರೆ, ಕನ್ನಡದ ಪ್ರೇಕ್ಷಕರಿಗೂ ಒಂದು ಸಿಹಿ ಸುದ್ದಿಯಿದೆ. ಕನ್ನಡದಲ್ಲೂ ‘ದೃಶ್ಯ 3’ ಬರಲಿದೆ. ಆದರೆ, ಅದು ಸದ್ಯಕ್ಕಂತೂ ಸೆಟ್ಟೇರುವುದಿಲ್ಲ. ಮೂಲಗಳ ಪ್ರಕಾರ, ಕನ್ನಡ ಆವೃತ್ತಿಯಲ್ಲಿ ಯಾವುದೇ ದೊಡ್ಡ ಬದಲಾವಣೆಗಳನ್ನು ಮಾಡದೆ, ಮಲಯಾಳಂನ ಮೂಲ ಕಥೆಯನ್ನೇ ಅನುಸರಿಸುವ ಸಾಧ್ಯತೆ ಹೆಚ್ಚಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿಮಾನಿಗಳು ಈ ಚಿತ್ರಕ್ಕಾಗಿ ಸ್ವಲ್ಪ ಸಮಯ ಕಾಯಲೇಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:00 am, Tue, 12 May 26

Follow Us