Dwarakish Death: ಸಿನಿಮಾದಲ್ಲಿ ಲಕ್ಷ ಲಕ್ಷ ಗಳಿಸಿದರೂ ದ್ವಾರಕೀಶ್ ಮನೆ ಮಾರಾಟ ಮಾಡಿದ್ದೇಕೆ? ಇಲ್ಲಿದೆ ಸತ್ಯ ಕಥೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 16, 2024 | 2:47 PM

ಖ್ಯಾತ ನಟ, ನಿರ್ದೇಶಕ ದ್ವಾರಕೀಶ್ ಅವರು ಇಂದು ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅಗಾಧ ಕೊಡುಗೆಯನ್ನು ನೀಡಿದ ಅವರು ಇಂದು ಕನ್ನಡ ಚಿತ್ರರಂಗವನ್ನು ತಬ್ಬಲಿ ಮಾಡಿದ್ದಾರೆ. ಅವರು ತನ್ನ ಜೀವನದಲ್ಲಿ ಕಂಡ ಅನೇಕ ಕಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅವರ ವಿಶೇಷ ಸಂದರ್ಶನವನ್ನು ಬಿ. ಗಣಪತಿಯವರು ತಮ್ಮ ಯೂಟ್ಯೂಬ್​​​ ಚಾನಲ್​​​ನಲ್ಲಿ ಮಾಡಿದ್ದರು. ಈ ಸಂದರ್ಶನದಲ್ಲಿ ಅವರು ಮನೆ ಮಾರಾಟದ ಬಗ್ಗೆ ದ್ವಾರಕೀಶ್ ಅವರ ಬಳಿ ಕೇಳಿದ್ದಾರೆ. ಬೆಂಗಳೂರಿನ ಎಚ್​​ಆರ್​ಎಸ್​​ ಲೇಔಟ್​​​ನಲ್ಲಿರುವ ಮನೆಯನ್ನು ಮಾರಾಟದ ಹಿಂದಿರುವ ಸತ್ಯವನ್ನು ಈ ಸಂದರ್ಶನದಲ್ಲಿ ತಿಳಿಸಿದ್ದಾರೆ.

Dwarakish Death: ಸಿನಿಮಾದಲ್ಲಿ ಲಕ್ಷ ಲಕ್ಷ ಗಳಿಸಿದರೂ ದ್ವಾರಕೀಶ್ ಮನೆ ಮಾರಾಟ ಮಾಡಿದ್ದೇಕೆ? ಇಲ್ಲಿದೆ ಸತ್ಯ ಕಥೆ
Follow us on

ಕನ್ನಡ ಚಿತ್ರರಂಗದ ಮೇರು ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ (Dwarakish) ಇಂದು ನಿಧನರಾಗಿದ್ದಾರೆ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದ ಈ ನಿರ್ದೇಶಕನ ಬದುಕಿನ ಹಿಂದೆ ಅನೇಕ ಕಹಿ ಘಟನೆಗಳು ಇದೆ. ದ್ವಾರಕೀಶ್ ಅವರು ವಿಷ್ಣುವರ್ಧನ ಅವರ ಮೆಚ್ಚಿನ ನಿರ್ದೇಶಕ ಕೂಡ ಆಗಿದ್ದರು. ಅನೇಕ ದೊಡ್ಡ ನಟರ ಜತೆಗೆ ಇವರು ಪರದೆಯನ್ನು ಕೂಡ ಹಂಚಿಕೊಂಡಿದ್ದಾರೆ. ಇದರ ಜತೆಗೆ ಕೆಲವು ಊಹಾಪೋಹಗಳು ಕೂಡ ಸೃಷ್ಟಿಯಾಗಿತ್ತು. ನಟ ದ್ವಾರಕೀಶ್ ಅವರು ಮನೆ ಮಾರಾಟದ್ದಾರೆ ಹಾಗೂ ಎರಡು ಮದುವೆಯಾಗಿದ್ದರು ಎಂಬ ವಿಚಾರ ಸಂಚಲನವನ್ನು ಮೂಡಿಸಿತ್ತು. ಆದರೆ ಹಿಂದೆ ಇರುವ ಸತ್ಯ ಏನು? ಈ ಎಲ್ಲ ಗೊಂದಲಕ್ಕೆ ದ್ವಾರಕೀಶ್ ಅವರು ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದರು.

ದ್ವಾರಕೀಶ್ ಅವರ ವಿಶೇಷ ಸಂದರ್ಶನವನ್ನು ಬಿ. ಗಣಪತಿಯವರು ತಮ್ಮ ಯೂಟ್ಯೂಬ್​​​ ಚಾನಲ್​​​ನಲ್ಲಿ ಮಾಡಿದ್ದರು. ಈ ಸಂದರ್ಶನದಲ್ಲಿ ಅವರು ಮನೆ ಮಾರಾಟದ ಬಗ್ಗೆ ದ್ವಾರಕೀಶ್ ಅವರ ಬಳಿ ಕೇಳಿದ್ದಾರೆ. ಬೆಂಗಳೂರಿನ ಎಚ್​​ಆರ್​ಎಸ್​​ ಲೇಔಟ್​​​ನಲ್ಲಿರುವ ಮನೆಯನ್ನು ಮಾರಾಟದ ಹಿಂದಿರುವ ಸತ್ಯವನ್ನು ಈ ಸಂದರ್ಶನದಲ್ಲಿ ತಿಳಿಸಿದ್ದಾರೆ. ಬೆಂಗಳೂರಿನ ಎಚ್​​ಆರ್​ಎಸ್​​ ಲೇಔಟ್​​ನಲ್ಲಿರುವ ಸೈಟ್​​​ನ್ನು ಮಾಜಿ ಮುಖ್ಯಮಂತ್ರಿ ಎಸ್​​​.ಎಮ್​​ ಕೃಷ್ಣ ಅವರ ಸರ್ಕಾರ ನೀಡಿತ್ತು. ಅಲ್ಲಿಯೇ ಮನೆ ನಿರ್ಮಾಣ ಮಾಡಲಾಗಿತ್ತು. ಆದರೆ ಅದು ತುಂಬಾ ದೊಡ್ಡದಾಗಿತ್ತು. ನಾವು ಇದ್ದೇದೆ ಮೂರು. ನಮ್ಗೆ ಮೂರು ಜನಕ್ಕೆ ಅಷ್ಟು ದೊಡ್ಡ ಮನೆ ಬೇಕಾಗಿರಲಿಲ್ಲ. ಇದರ ಜತೆಗೆ ಆ ಮನೆ ನಿರ್ಮಾಣಕ್ಕೆ ಬ್ಯಾಂಕ್​​ ಲೋನ್​​​ ಕೂಡ ಮಾಡಲಾಗಿತ್ತು. ಜತೆಗೆ ಇತರ ಸಾಲಗಳು ಇದ್ದ ಕಾರಣ ನಾನು ಆ ಮನೆಯನ್ನು ಮಾರಾಟ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ನಮಗೆ ಚಿಕ್ಕ ಮನೆ ಸಾಕಿತ್ತು, ಜತೆಗೆ ನಮಗೆ ಮನೆ ಮುಖ್ಯವಲ್ಲ ಸುಖವಾದ ನಿದ್ದೆ ಬರಬೇಕು. ಅಷ್ಟು ದೊಡ್ಡ ಮನೆಯಲ್ಲಿ ನನಗೆ ಭಯ ಆಗುತ್ತಿತ್ತು. ಅದಕ್ಕಾಗಿ ಆ ಮನೆಯನ್ನು ಮಾರಾಟ ಮಾಡಿದ್ದೇವೆ. ಆ ಬಗ್ಗೆ ಯಾವುದೇ ನೋವಿಲ್ಲ. ನಾನು ಬಗ್ಗೆ ಇಂತಹ ಗೊಂದಲಗಳು ಅಭಿಮಾನಿಗಳಿಗೆ ಬೇಡ, ನಾನು ದೇವರಲ್ಲಿ ಕೇಳಿಕೊಳ್ಳುವುದು ನನ್ನ ಒಳ್ಳೆಯ ನಿರ್ಮಾಪಕ ಮಾಡು ಎಂದು ಕೇಳಿದೆ. ಹಾಗೆ ನನಗೆ ನೀಡಿದ್ದಾನೆ.

ಇದನ್ನೂ ಓದಿ: ಹೃದಯಾಘಾತದಿಂದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ

ಅನೇಕ ನಟ, ನಟಿಯರಿಗೆ ನನ್ನ ಸಿನಿಮಾದಲ್ಲಿ ಅವಕಾಶ ನೀಡಿದೆ. ಅನೇಕ ಹಾಸ್ಯ ಚಿತ್ರಗಳಲ್ಲಿ ನಟಿಯ ಮೂಲಕ ನನ್ನ ಅಭಿಮಾನಿಗಳನ್ನು ಗಳಿಸಿದ್ದೇನೆ. ಅಂದಿನ ಸಿನಿಮಾಗಳು ನಮಗೆ ಜೀವನ ನೀಡಿದ್ದೇನೆ. ಅನೇಕ ನಿರ್ಮಾಪಕರನ್ನು, ನಟರನ್ನು ಕನ್ನಡ ಸಿನಿಮಾಕ್ಕೆ ನೀಡಿದ್ದೇನೆ ಎಂದು ಈ ಸಂದರ್ಶನದಲ್ಲಿ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:39 pm, Tue, 16 April 24