‘ಆರ್ಆರ್ಆರ್’ ಚಿತ್ರದ (RRR Movie) ‘ನಾಟು ನಾಟು..’ ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದೆ. ಭಾರತದಲ್ಲಿ ಸಿದ್ಧಗೊಂಡ ಹಾಡಿಗೆ ಅಕಾಡೆಮಿ ಪ್ರಶಸ್ತಿ ಸಿಕ್ಕಿದ್ದು ಇದೇ ಮೊದಲು. ಆಸ್ಕರ್ ಅವಾರ್ಡ್ ಸಿಕ್ಕ ನಂತರದಲ್ಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಹಾಗೂ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರ ಖ್ಯಾತಿ ಹೆಚ್ಚಿದೆ. ಈ ಹಾಡನ್ನು ವಿಶ್ವದ ಅನೇಕರು ಇಷ್ಟಪಟ್ಟಿದ್ದಾರೆ. ವಿಶೇಷ ಎಂದರೆ, ಟ್ವಿಟರ್ ಸಿಇಒ ಎಲಾನ್ ಮಸ್ಕ್ ಅವರಿಗೂ ಈ ಹಾಡು ಇಷ್ಟವಾಗಿದೆ. ಅವರ ಒಡೆತನದ ಟೆಸ್ಲಾ ಕಾರಿನಲ್ಲಿ ವಿಶೇಷ ಲೈಟ್ ಶೋ ಕೂಡ ಮಾಡಿದ್ದಾರೆ.
‘ಆರ್ಆರ್ಆರ್’ ಸಿನಿಮಾ ಕಳೆದ ವರ್ಷ ಮಾರ್ಚ್ 25ರಂದು ತೆರೆಗೆ ಬಂತು. ಈ ಸಿನಿಮಾ ಸೂಪರ್ಹಿಟ್ ಆಯಿತು. ಈ ಸಿನಿಮಾ ಆಸ್ಕರ್ ಅವಾರ್ಡ್ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿರಲಿಲ್ಲ. ಆದರೆ, ಫಾರ್ ಯುವರ್ ಕನ್ಸಿಡರೇಷನ್ ಕ್ಯಾಂಪೇನ್ ಮೂಲಕ ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ಗೆ ಆಯ್ಕೆ ಆಯಿತು. ನಂತರ ಶಾರ್ಟ್ಲಿಸ್ಟ್ ಕೂಡ ಆಯಿತು. ಘಟಾನುಘಟಿ ಸಾಂಗ್ ಎದುರು ‘ಆರ್ಆರ್ಆರ್’ ಚಿತ್ರದ ಹಾಡು ಗೆದ್ದು ಬೀಗಿತು.
‘ಆಸ್ಕರ್’ ಗೆದ್ದ ಬಳಿಕ ಈ ಹಾಡನ್ನು ವಿದೇಶಿಗರು ಕೇಳುತ್ತಿದ್ದಾರೆ. ಎಲಾನ್ ಮಸ್ಕ್ ಕೂಡ ಈ ಹಾಡನ್ನು ಇಷ್ಟಪಟ್ಟಿದ್ದಾರೆ. ಟೆಸ್ಲಾ ಕಾರುಗಳನ್ನು ಒಂದು ಕಡೆ ನಿಲ್ಲಿಸಿ, ‘ನಾಟು ನಾಟು..’ ಹಾಡನ್ನು ಹಾಕಲಾಗಿದೆ. ಸಾಂಗ್ನ ಬೀಟ್ಗೆ ತಕ್ಕಂತೆ ಕಾರಿನ ಲೈಟ್ ಬ್ಲಿಂಕ್ ಆಗಿದೆ. ‘ನ್ಯೂಜರ್ಸಿಯಲ್ಲಿ ನಾಟು ನಾಟು ಹಾಡಿಗೆ ಟೆಸ್ಲಾ ಲೈಟ್ ಸಿಂಕ್’ ಎಂದು ‘ಆರ್ಆರ್ಆರ್’ ಸಿನಿಮಾದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದಕ್ಕೆ ಎಲಾನ್ ಮಸ್ಕ್ ಕಮೆಂಟ್ ಮಾಡಿದ್ದು, ಹಾರ್ಟ್ ಎಮೋಜಿ ಹಾಕಿದ್ದಾರೆ.
.@Teslalightshows light sync with the beats of #Oscar Winning Song #NaatuNaatu in New Jersey ??
Thanks for all the love. #RRRMovie @Tesla @elonmusk pic.twitter.com/wCJIY4sTyr
— RRR Movie (@RRRMovie) March 20, 2023
♥️♥️
— Elon Musk (@elonmusk) March 20, 2023
ಮಾರ್ಚ್ 12ರಂದು ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಆಸ್ಕರ್ ಅವಾರ್ಡ್ ಕಾರ್ಯಕ್ರಮ ನಡೆಯಿತು. ರಾಮ್ ಚರಣ್, ಜೂ.ಎನ್ಟಿಆರ್, ರಾಜಮೌಳಿ, ಎಂಎಂ ಕೀರವಾಣಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದ ನಂತರ ರಾಜಮೌಳಿ ಅವರು ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ಅನೇಕರು ಭಾಗಿ ಆಗಿದ್ದರು. ಈಗ ಎಲ್ಲರೂ ಭಾರತಕ್ಕೆ ಮರಳಿದ್ದಾರೆ. ರಾಜಮೌಳಿ ಅವರು ಶೀಘ್ರವೇ ಹೊಸ ಸಿನಿಮಾ ಕೆಲಸಗಳಲ್ಲಿ ಭಾಗಿ ಆಗಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:55 am, Tue, 21 March 23