‘ಚಿರಂಜೀವಿ ಡ್ಯಾನ್ಸ್ ಮಾಡುತ್ತಿದ್ದರೆ ನಮ್ಮ ಕಣ್ಣು ಬೇರೆಲ್ಲೂ ಹೋಗಲ್ಲ’; ಹೊಗಳಿದ ಆಮಿರ್ ಖಾನ್

ಚಿರಂಜೀವಿ ಅವರಿಗೆ ‘ಭಾರತೀಯ ಚಿತ್ರರಂಗದ ಮೋಸ್ಟ್​ ಪ್ರೊಫೈಲಿಕ್ ಸ್ಟಾರ್​’ ಎಂದು ಪ್ರಮಾಣಪತ್ರ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಬಾಲಿವುಡ್​ ನಟ ಆಮಿರ್ ಖಾನ್​ ಕೂಡ ಹಾಜರಿದ್ದರು. ಈ ವೇದಿಕೆ ಮೇಲೆ ಇದ್ದ ಆಮಿರ್ ಖಾನ್ ಅವರು ಚಿರಂಜೀವಿಯನ್ನು ಹೊಗಳಿದರು.

‘ಚಿರಂಜೀವಿ ಡ್ಯಾನ್ಸ್ ಮಾಡುತ್ತಿದ್ದರೆ ನಮ್ಮ ಕಣ್ಣು ಬೇರೆಲ್ಲೂ ಹೋಗಲ್ಲ’; ಹೊಗಳಿದ ಆಮಿರ್ ಖಾನ್
ಚಿರಂಜೀವಿ-ಆಮಿರ್
Updated By: ರಾಜೇಶ್ ದುಗ್ಗುಮನೆ

Updated on: Sep 23, 2024 | 7:00 AM

ನಟ ಚಿರಂಜೀವಿ ಅವರು ಗಿನ್ನೆಸ್ ದಾಖಲೆ ಬರೆದಿದ್ದಾರೆ. ಭಾರತೀಯ ಚಿತ್ರರಂಗದ ಮೋಸ್ಟ್​ ಪ್ರೊಫೈಲಿಕ್ ಸ್ಟಾರ್​’ ಎಂಬ ಪ್ರಮಾಣಪತ್ರವನ್ನು ಅವರಿಗೆ ನೀಡಲಾಗಿದೆ. ಚಿರಂಜೀವಿ ಅವರು 537 ಹಾಡುಗಳಲ್ಲಿ ಬರೋಬ್ಬರಿ 24 ಸಾವಿರ ಡ್ಯಾನ್ಸ್ ಸ್ಟೆಪ್​ಗಳನ್ನು ಮಾಡಿದ್ದು, ಇದು ದಾಖಲೆ ಆಗಿದೆ. ಅವರು ಚಿತ್ರರಂಗದಲ್ಲಿ 45 ವರ್ಷಗಳನ್ನು ಕಳೆದಿದ್ದು, 156 ಸಿನಿಮಾ ಮಾಡಿದ್ದಾರೆ. ಅವರಿಗೆ ಭಾನುವಾರ (ಸೆಪ್ಟೆಂಬರ್ 23) ಈ ಅವಾರ್ಡ್ ನೀಡಲಾಗಿದೆ. ಈ ವೇದಿಕೆ ಮೇಲೆ ಇದ್ದ ಆಮಿರ್ ಖಾನ್ ಅವರು ಚಿರಂಜೀವಿಯನ್ನು ಹೊಗಳಿದರು.

ಈ ವಾರ್ಡ್​ನ ನೀಡಿದ್ದು ಆಮಿರ್ ಖಾನ್. ಅವರು ಮುಂಬೈಗೆ ಈ ಪ್ರಶಸ್ತಿ ನೀಡಲು ಆಗಮಿಸಿದ್ದರು. ಅವಾರ್ಡ್ ನೀಡಿದ ಬಳಿಕ ಅವರು ಚಿರಂಜೀವಿ ಬಗ್ಗೆ ಮಾತನಾಡಿದರು. ‘ಚಿರಂಜೀವಿ ಅವರನ್ನು ನನ್ನ ಅಣ್ಣ ಎಂದು ನಾನು ಪರಿಗಣಿಸುತ್ತೇನೆ. ನಾನು ಅವರ ಅಭಿಮಾನಿ ಕೂಡ ಹೌದು. ಚಿರಂಜೀವಿ ಅವರಿಗೆ ಈ ಗೌರವ ಸಿಗುತ್ತಿರುವುದಕ್ಕೆ ಖುಷಿ ಇದೆ. ಅವರು ಕರೆ ಮಾಡಿ ಈ ಕಾರ್ಯಕ್ರಮಕ್ಕೆ ಬರುವಂತೆ ಕೋರಿದರು. ನೀವು ಕೇಳೋದಲ್ಲ ನನಗೆ ಆದೇಶ ನೀಡಬೇಕು ಎಂದು ಅವರ ಬಳಿ ಹೇಳಿಕೊಂಡಿದ್ದೆ’ ಎಂದಿದ್ದಾರೆ ಆಮಿರ್ ಖಾನ್.

ಚಿರಂಜೀವಿ ಅವರ ಡ್ಯಾನ್ಸ್ ಸ್ಟೆಪ್​ಗೆ ಅನೇಕರು ಫಿದಾ ಆಗಿದ್ದಾರೆ. ಆಮಿರ್ ಖಾನ್ ಕೂಡ ಇದಕ್ಕೆ ಹೊರತಾಗಿಲ್ಲ. ‘ಪ್ರತಿ ಬಾರಿ ಚಿರಂಜೀವಿ ಡ್ಯಾನ್ಸ್ ಮಾಡುವಾಗ ಅವರು ಅದನ್ನು ಎಂಜಾಯ್ ಮಾಡುತ್ತಾರೆ. ಹೀಗಾಗಿ, ನಾವು ಅದರಿಂದ ಪ್ರಭಾವಿತರಾಗಿದ್ದೇವೆ. ಹೀಗಾಗಿ, ಅವರು ಡ್ಯಾನ್ಸ್ ಮಾಡುವಾಗ ನಾವು ಕಣ್ಣನ್ನು ಬೇರೆ ಕಡೆ ಹೊರಳಿಸಲು ಸಾಧ್ಯವೇ ಇಲ್ಲ. ಚಿರಂಜೀವಿ ಅವರ ಸಾಧನೆ ಹಲವು. ಅವರಿಂದ ಮನರಂಜನೆ ಪಡೆಯಲು ನಾವು ಸದಾ ಇರುತ್ತೇವೆ’ ಎಂದರು ಆಮಿರ್ ಖಾನ್.

ಇದನ್ನೂ ಓದಿ: ಡ್ಯಾನ್ಸ್ ವಿಚಾರದಲ್ಲಿ ಗಿನ್ನಿಸ್​ ದಾಖಲೆ ಬರೆದ ಮೆಗಾ ಸ್ಟಾರ್​ ಚಿರಂಜೀವಿ

ಆಮಿರ್ ಖಾನ್ ಅವರಿಗೆ ದಕ್ಷಿಣದ ಅನೇಕ ಹೀರೋಗಳ ಜೊತೆ ಒಳ್ಳೆಯ ಬಾಂಧವ್ಯ ಇದೆ. ಅಕ್ಕಿನೇನಿ ಕುಟುಂಬದ ಜೊತೆ ಆಮಿರ್​ ಖಾನ್​ ಒಳ್ಳೆಯ ನಂಟು ಬೆಳೆಸಿಕೊಂಡಿದ್ದಾರೆ. ಈ ಮೊದಲು ತೆರೆಕಂಡ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ನಾಗ ಚೈತನ್ಯ ನಟಿಸಿದ್ದರು. ಆ ಸಂದರ್ಭದಲ್ಲಿ ಆಮಿರ್ ಖಾನ್ ಅವರು ನಾಗ ಚೈತನ್ಯ ಮನೆಯಲ್ಲಿ ಊಟ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.