
ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ಜನವರಿ 16ರ ತಡರಾತ್ರಿ ಅಗಂತುಕನೊಬ್ಬ ಚಾಕು ಇರಿದ ಘಟನೆ ನಡೆದಿತ್ತು. ಆರು ಬಾರಿ ಸೈಫ್ಗೆ ಚಾಕುವಿನಿಂದ ಚುಚ್ಚಲಾಗಿತ್ತು. ಸದ್ಯ ಅವರಿಗೆ ಶಸ್ತ್ರಚಿಕಿತ್ಸೆ ಕೂಡ ಪೂರ್ಣಗೊಂಡಿದ್ದು ಇಂದು ಅಥವಾ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಇದರ ಮಧ್ಯೆ ಸೈಫ್ ಅಲಿ ಖಾನ್ ಅವರ ಎಡಿಟೆಡ್ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಚಿತ್ರದಲ್ಲಿ, ಸೈಫ್ ಅಲಿ ಖಾನ್ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವುದನ್ನು ಕಾಣಬಹುದು. ಫೋಟೋವನ್ನು ಹಂಚಿಕೊಳ್ಳುವ ಮೂಲಕ, ಇದು ಅವರ ಮೇಲಿನ ದಾಳಿಯ ನಂತರದ ಫೋಟೋ ಎಂದು ಹೇಳಲಾಗುತ್ತಿದೆ.
ವೈರಲ್ ಆಗುತ್ತಿರುವುದು ಏನು?:
ಥ್ರೆಡ್ ಹಾಗೂ ಯೂಟ್ಯೂಬ್ನಲ್ಲಿ ಇವರ ಈ ಫೋಟೋ ಹಂಚಿಕೊಂಡು, ಕಳ್ಳತನ ಮಾಡಲು ಬಂದ ವ್ಯಕ್ತಿಯಿಂದ ಸೈಫ್ಗೆ ಚೂರಿ ಇರಿತ ಎಂದು ಬರೆದಿದ್ದಾರೆ. ಹಾಗೆಯೆ ಯಾರೋ ಅಪರಿಚಿತರು ಮನೆಗೆ ನುಗ್ಗಿ ಚೂರಿ ಇರಿದಿದ್ದಾರೆ. ಸೈಫ್‌ಗಾಗಿ ಪ್ರಾರ್ಥಿಸಿ ಸಹೋದರ ಎಂದಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ವೈರಲ್ ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂಬುದು ಕಂಡುಬಂದಿದೆ. ನಿಜ ಚಿತ್ರದಲ್ಲಿ ಇರುವುದು ಸೈಫ್ ಅಲಿ ಖಾನ್ ಅಲ್ಲ, ಮತ್ತೊಬ್ಬ ವ್ಯಕ್ತಿ. ವೈರಲ್ ಕ್ಲೈಮ್‌ನ ಸತ್ಯವನ್ನು ತಿಳಿಯಲು, ನಾವು ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ಗೂಗಲ್ನಲ್ಲಿ ಹುಡುಕಿದ್ದೇವೆ. ಆದರೆ, ಕ್ಲೈಮ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನಾವು ಹುಡುಕಲಾಗಲಿಲ್ಲ. ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಯಲ್ಲಿ ಸೈಫ್ ಅಲಿ ಖಾನ್ ಅವರ ಅಂತಹ ಚಿತ್ರ ಅಥವಾ ಆಸ್ಪತ್ರೆಯಲ್ಲಿ ಅವರು ಮಲಗಿರುವ ಯಾವುದೇ ಚಿತ್ರ ನಮಗೆ ಕಂಡುಬಂದಿಲ್ಲ.
Fact Check: ಮಹಾಕುಂಭದ ಸಂದರ್ಭ ಮೋದಿ, ಆದಿತ್ಯನಾಥ್ 3 ತಿಂಗಳ ಉಚಿತ ರಿಚಾರ್ಜ್ ನೀಡುತ್ತಿದ್ದಾರೆಯೇ?
ನಾವು ಸೈಫ್ ಅಲಿ ಖಾನ್ ಮತ್ತು ಅವರ ಪತ್ನಿ ಕರೀನಾ ಕಪೂರ್ ಖಾನ್ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಹ ಪರಿಶೀಲಿಸಿದ್ದೇವೆ. ಅಲ್ಲಿಯೂ ಕ್ಲೈಮ್‌ಗೆ ಸಂಬಂಧಿಸಿದ ಯಾವುದೇ ಪೋಸ್ಟ್ ನಮಗೆ ಕಂಡುಬಂದಿಲ್ಲ.
ಚಿತ್ರದ ಸತ್ಯಾಸತ್ಯತೆಯನ್ನು ತಿಳಿಯಲು, ನಾವು ಗೂಗಲ್ ರಿವರ್ಸ್ ಇಮೇಜ್ ಮೂಲಕ ಫೋಟೋವನ್ನು ಹುಡುಕಿದೆವು. ಆಗ Pinterest ವೆಬ್‌ಸೈಟ್‌ನಲ್ಲಿ ನಾವು ಮೂಲ ಚಿತ್ರವನ್ನು ಕಂಡುಕೊಂಡಿದ್ದೇವೆ. ಮೂಲ ಚಿತ್ರದಲ್ಲಿ ಮತ್ತೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿ ಹಾಸಿಗೆಯ ಮೇಲೆ ಮಲಗಿರುವುದನ್ನು ಕಾಣಬಹುದು. ಸೈಫ್ ಅಲಿ ಖಾನ್ ಅವರ ಮುಖವನ್ನು ಅವರ ಚಿತ್ರದಲ್ಲಿ ಎಡಿಟ್ ಮಾಡಲಾಗಿದೆ.
ಹೋಲಕೆ ಮಾಡಿರುವ ಫೋಟೋ.
ಹೀಗಾಗಿ ಸೈಫ್ ಅಲಿ ಖಾನ್ ಹಾಸಿಗೆಯ ಮೇಲೆ ಮಲಗಿರುವ ಚಿತ್ರದ ಬಗ್ಗೆ ಮಾಡಲಾಗುತ್ತಿರುವ ಹಕ್ಕು ಸುಳ್ಳು ಎಂದು ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಕಂಡುಹಿಡಿದಿದೆ. ವಾಸ್ತವವಾಗಿ ವೈರಲ್ ಚಿತ್ರವನ್ನು ಎಡಿಟ್ ಮಾಡಲಾಗಿದೆ. ನಿಜ ಚಿತ್ರದಲ್ಲಿ ಇರುವುದು ಸೈಫ್ ಅಲಿ ಖಾನ್ ಅಲ್ಲ, ಮತ್ತೊಬ್ಬ ವ್ಯಕ್ತಿ.
ಮಾರಣಾಂತಿಕ ದಾಳಿಯ ನಂತರ ಮನೆ ಶಿಫ್ಟ್ ಮಾಡುವ ವಿಚಾರದಲ್ಲಿ ಸೈಫ್ ಅಲಿ ಖಾನ್ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ವರದಿ ಆಗಿದೆ. ಸೈಫ್-ಕರೀನಾ ಅವರ ಕಳೆದ ಕೆಲ ವರ್ಷಗಳಿಂದ ಬಾಂದ್ರಾದಲ್ಲಿರುವ ಸದ್ಗುರು ಶರಣ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಆದರೆ, ಇಲ್ಲಿ ಭದ್ರತೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಏಳುವಂತೆ ಆಗಿವೆ. ಈಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ, ಸೈಫ್ ಅವರು ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಫಾರ್ಚೂನ್ ಹೈಟ್ಸ್ ಕಟ್ಟಡಕ್ಕೆ ಶಿಫ್ಟ್ ಆಗಬಹುದು ಎನ್ನಲಾಗಿದೆ. ಸೈಫ್ ಅವರು ಬಾಂದ್ರಾದ ಫಾರ್ಚೂನ್ ಹೈಟ್ಸ್‌ನಲ್ಲಿ ಫ್ಲ್ಯಾಟ್ಸ್ ಹೊಂದಿದ್ದಾರೆ. ಇಲ್ಲಿಯೇ ಅವರ ಕಚೇರಿ ಕೂಡ ಇದೆ. ಇದರಲ್ಲಿ ಅವರು ಮನೆಯನ್ನು ಕೂಡ ಹೊಂದಿದ್ದಾರೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ