AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬರುತ್ತಿದ್ದಾನೆ ಬೆಂಗಳೂರು ರೌಡಿ ‘ರಂಗ’ ಈ ಬಾರಿ ಡಬಲ್ ಮ್ಯಾಡ್​​ನೆಸ್

Fahad Faasil movie: ಫಹಾದ್ ಫಾಸಿಲ್ ನಟಿಸಿದ್ದ ‘ಆವೇಶಂ’ ಸಿನಿಮಾ 2024ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಭಾರಿ ದೊಡ್ಡ ಯಶಸ್ಸು ಗಳಿಸಿತು. ಸಿನಿಮಾದಲ್ಲಿ ಫಹಾದ್ ನಿರ್ವಹಿಸಿದ್ದ ರಂಗ ಪಾತ್ರವಂತೂ ಐಕಾನಿಕ್ ಆಗಿಬಿಟ್ಟಿದೆ. ಅಭಿಮಾನಿಗಳು ಆಗಿನಿಂದಲೂ ಸಿನಿಮಾದ ಸೀಕ್ವೆಲ್​​ಗೆ ಬೇಡಿಕೆ ಇಡುತ್ತಲೇ ಇದ್ದರು. ಇದೀಗ ಸಿನಿಮಾದ ಸೀಕ್ವೆಲ್ ಘೋಷಣೆ ಆಗಿದೆ.

ಮತ್ತೆ ಬರುತ್ತಿದ್ದಾನೆ ಬೆಂಗಳೂರು ರೌಡಿ ‘ರಂಗ’ ಈ ಬಾರಿ ಡಬಲ್ ಮ್ಯಾಡ್​​ನೆಸ್
Fafa
ಮಂಜುನಾಥ ಸಿ.
|

Updated on:Feb 10, 2026 | 11:47 AM

Share

ಫಹಾದ್ ಫಾಸಿಲ್​​ಗೆ (Fahad Faasil) ದೇಶದಾದ್ಯಂತ ಅಭಿಮಾನಿಗಳಿದ್ದಾರೆ. ಯಾವ ಪಾತ್ರದಲ್ಲಿ ನಟಿಸಿದರೂ ಆ ಪಾತ್ರದ ಮೇಲೆ ತಮ್ಮ ಛಾಪು ಉಳಿಸುತ್ತಾರೆ, ಫಹಾದ್ ಹೊರತಾಗಿ ಇನ್ಯಾರನ್ನೂ ಪಾತ್ರದಲ್ಲಿ ಊಹಿಸಲಾರದಂತೆ ನಟಿಸುತ್ತಾರೆ ಈ ಮಲಯಾಳಿ ನಟ. ಫಹಾದ್ ಹಲವು ಅತ್ಯುತ್ತಮ ಪಾತ್ರಗಳಲ್ಲಿ ನಟಿಸಿದ್ದಾರೆ ಆದರೆ ಅವರ ‘ಆವೇಶಂ’ ಸಿನಿಮಾದ ರಂಗ ಪಾತ್ರಕ್ಕೆ ಇರುವಷ್ಟು ಅಭಿಮಾನಿಗಳು ಇನ್ಯಾವ ಪಾತ್ರಕ್ಕೂ ಇದ್ದಂತಿಲ್ಲ. ಬೆಂಗಳೂರಿನ ಡಾನ್ ರಂಗ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದರು ಫಹಾದ್ ಫಾಸಿಲ್. ಸಿನಿಮಾ ಬಿಡುಗಡೆ ಆಗಿ ಎರಡು ವರ್ಷವಾಗುತ್ತಾ ಬಂದಿದ್ದು ಈಗಲೂ ಸಿನಿಮಾದ ಮೀಮ್​​ಗಳು ಹರಿದಾಡುತ್ತಿರುತ್ತವೆ. ಇದೀಗ ‘ಆವೇಶಂ 2’ ಸಿನಿಮಾದ ಬಗ್ಗೆ ಅಪ್​​ಡೇಟ್ ಹೊರಬಿದ್ದಿದ್ದು ಫಹಾದ್ ಅವರು ಮತ್ತೆ ರಂಗನ ಪಾತ್ರದಲ್ಲಿ ಮಿಂಚಲಿದ್ದಾರೆ.

‘ಆವೇಶಂ’ ಸಿನಿಮಾ 2024ರ ಏಪ್ರಿಲ್ ನಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಮಲಯಾಳಂ ಮಾತ್ರವಲ್ಲ ಬಿಡುಗಡೆ ಆದ ಎಲ್ಲ ರಾಜ್ಯಗಳಲ್ಲಿಯೂ ಸೂಪರ್ ಹಿಟ್ ಆಗಿತ್ತು. ಒಟಿಟಿಯಲ್ಲಿ ಹಲವು ದಿನಗಳ ಕಾಲ ಟಾಪ್ ಟ್ರೆಂಡಿಂಗ್​​ನಲ್ಲಿತ್ತು ಸಿನಿಮಾ. ಆಗಿನಿಂದಲೂ ಸಿನಿಮಾದ ಸೀಕ್ವೆಲ್​​ಗಾಗಿ ಬೇಡಿಕೆ ಬರುತ್ತಲೇ ಇತ್ತು. ಫಹಾದ್ ಸಹ ‘ಆವೇಶಂ 2’ ಬಂದಲ್ಲಿ ನಟಿಸಲು ಉತ್ಸುಕನಾಗಿದ್ದೇನೆ ಎಂದು ಹಿಂದೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಇದೀಗ ಆ ಸಮಯ ಬಂದಿದೆ. ‘ಆವೇಶಂ 2’ ಸಿನಿಮಾ ನಿರ್ಮಾಣಗೊಳ್ಳುವುದು ಪಕ್ಕಾ ಆಗಿದ್ದು, ಫಹಾದ್ ಅವರು ಐಕಾನಿಕ್ ‘ರಂಗ’ ಪಾತ್ರದಲ್ಲಿ ಮತ್ತೊಮ್ಮೆ ಮಿಂಚಲಿದ್ದಾರೆ.

ಇದನ್ನೂ ಓದಿ:ಆಸ್ಕರ್ ವಿಜೇತ ನಿರ್ದೇಶಕನಿಗೆ ನೋ ಹೇಳಿದ ಫಹಾದ್ ಫಾಸಿಲ್

‘ಆವೇಶಂ’ ಸಿನಿಮಾ ಬಿಡುಗಡೆ ಆದಾಗ ಆ ಸಿನಿಮಾದ ತೆಲುಗು ರೀಮೇಕ್ ಬಗ್ಗೆ ಬಹಳ ಚರ್ಚೆಗಳು ನಡೆದಿದ್ದವು. ನಂದಮೂರಿ ಬಾಲಕೃಷ್ಣ ಅಥವಾ ರವಿತೇಜ ಅವರು ‘ಆವೇಶಂ’ ಸಿನಿಮಾ ರೀಮೇಕ್ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಅದು ಕೈಗೂಡಿಲ್ಲ. ಇದೀಗ ಸಿನಿಮಾದ ಎರಡನೇ ಭಾಗವನ್ನೇ ಘೋಷಣೆ ಮಾಡಲಾಗಿದೆ. ಸ್ವತಃ ಫಹಾದ್ ಫಾಸಿಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಸಿನಿಮಾದ ಚಿತ್ರೀಕರಣ 2027ರ ಅಂತ್ಯ ಅಥವಾ 2028ರ ಆರಂಭದಲ್ಲಿ ಚಿತ್ರೀಕರಣ ಪ್ರಾರಂಭ ಆಗಲಿದೆ ಎಂದಿದ್ದಾರೆ.

‘ಆವೇಶಂ’ ಸಿನಿಮಾದ ನಿರ್ದೇಶಕ ಜಿತು ಮಾಧವನ್ ಪ್ರಸ್ತುತ ತಮ್ಮ ಮೊದಲ ತಮಿಳು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಸ್ಟಾರ್ ನಟ ಸೂರ್ಯ ನಾಯಕ. ಆ ಸಿನಿಮಾದ ಕತೆಯೂ ಬೆಂಗಳೂರಿನಲ್ಲೇ ನಡೆಯಲಿದೆ ಎನ್ನಲಾಗುತ್ತಿದೆ. ಮಾತ್ರವಲ್ಲದೆ ಫಹಾದ್ ಫಾಸಿಲ್ ಕ್ಯಾಮಿಯೋ ಸಹ ಆ ಸಿನಿಮಾನಲ್ಲಿ ಇರಲಿದೆ ಎನ್ನಲಾಗುತ್ತಿದೆ. ಸೂರ್ಯ ಸಿನಿಮಾ ಬಿಡುಗಡೆ ಬಳಿಕವಷ್ಟೆ ‘ಆವೇಶಂ 2’ ಸಿನಿಮಾ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:45 am, Tue, 10 February 26

Follow Us
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್
ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ