‘ಸಿನಿಮಾ ನೋಡೋದು ಮಾತ್ರ ಜೀವನ ಅಲ್ಲ, ಬೇರೆಯೂ ಇದೆ’; ಚರ್ಚೆ ಹುಟ್ಟುಹಾಕಿದ ಫಹಾದ್ ಹೇಳಿಕೆ

ಫಹಾದ್ ಫಾಸಿಲ್ ನಟನೆಯ ‘ಆವೇಶಂ’ ಸಿನಿಮಾ ಯಶಸ್ಸು ಕಂಡಿದೆ. ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ವೇಳೆ ಅವರು ಹಲವು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾರೆ. ಅವರು ಗಲಾಟಾ ಪ್ಲಸ್​ಗೆ ನೀಡಿದ ಸಂದರ್ಶನದಲ್ಲಿ ಒಂದಷ್ಟು ವಿಚಾರ ಚರ್ಚೆ ಮಾಡಿದ್ದಾರೆ.

‘ಸಿನಿಮಾ ನೋಡೋದು ಮಾತ್ರ ಜೀವನ ಅಲ್ಲ, ಬೇರೆಯೂ ಇದೆ’; ಚರ್ಚೆ ಹುಟ್ಟುಹಾಕಿದ ಫಹಾದ್ ಹೇಳಿಕೆ
ಫಹಾದ್
Follow us
ರಾಜೇಶ್ ದುಗ್ಗುಮನೆ
|

Updated on: Apr 24, 2024 | 2:21 PM

ಫಹಾದ್ ಫಾಸಿಲ್ (Fahad Fasil) ಅವರು ನಟನೆಯ ಮೂಲಕ ಜನ ಮೆಚ್ಚುಗೆ ಪಡೆದಿದ್ದಾರೆ. ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಟಿಸೋ ಸಾಮರ್ಥ್ಯ ಅವರಿಗೆ ಇದೆ. ಈಗ ಅವರು ನೀಡಿರೋ ಒಂದು ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ‘ಸಿನಿಮಾ ನೋಡೋದು ಮಾತ್ರ ಜೀವನ ಅಲ್ಲ, ಅದನ್ನು ಹೊರತುಪಡಿಸಿ ಇನ್ನೂ ಹಲವು ವಿಚಾರಗಳು ಇವೆ’ ಎಂದು ಫಹಾದ್ ಹೇಳಿದ್ದಾರೆ. ಓರ್ವ ನಟನಾಗಿ ಈ ರೀತಿ ಹೇಳೋದು ಎಷ್ಟು ಸರಿ ಎಂದು ಕೆಲವರು ಪ್ರಶ್ನೆ ಮಾಡಿದರೆ, ಇನ್ನೂ ಕೆಲವರು ಅವರನ್ನು ಬೆಂಬಲಿಸಿದ್ದಾರೆ.

ಫಹಾದ್ ಫಾಸಿಲ್ ನಟನೆಯ ‘ಆವೇಶಂ’ ಸಿನಿಮಾ ಯಶಸ್ಸು ಕಂಡಿದೆ. ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅವರ ನಿರ್ಮಾಣದ ‘ಪ್ರೇಮಲು’ ಸಿನಿಮಾ ಗೆದ್ದ ಬೆನ್ನಲ್ಲೇ, ಅವರ ನಟನೆಯ ಚಿತ್ರ ಕೂಡ ಯಶಸ್ಸು ಕಂಡಿದೆ. ಇದು ಅವರ ಖುಷಿ ಹೆಚ್ಚಿಸಿದೆ. ಈ ವೇಳೆ ಅವರು ಹಲವು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾರೆ. ಅವರು ಗಲಾಟಾ ಪ್ಲಸ್​ಗೆ ನೀಡಿದ ಸಂದರ್ಶನದಲ್ಲಿ ಒಂದಷ್ಟು ವಿಚಾರ ಚರ್ಚೆ ಮಾಡಿದ್ದಾರೆ.

‘ಊಟ ಮಾಡುವಾಗ ಜನರು ನಟರ ಬಗ್ಗೆ ಅಥವಾ ಅವರ ನಟನೆಯ ಬಗ್ಗೆ ಮಾತನಾಡಲಿ ಎಂದು ನಾನು ಬಯಸುವುದಿಲ್ಲ. ಅವರು ಸಿನಿಮಾ ಮಂದಿರಗಳಲ್ಲಿ ಅಥವಾ ಥಿಯೇಟರ್​ನಿಂದ ಮನೆಗೆ ಹೋಗುವಾಗ ಆ ಬಗ್ಗೆ ಚರ್ಚಿಸಲಿ. ಅದಕ್ಕೂ ಹೆಚ್ಚು ಬೇಡ. ಸಿನಿಮಾ ಎಲ್ಲಕ್ಕಿಂತ ಮಿಗಿಲಾದದ್ದಲ್ಲ. ಸಿನಿಮಾಗೆ ಒಂದು ಮಿತಿ ಇದೆ’ ಎಂದಿದ್ದಾರೆ ಅವರು.

ಫಹಾದ್ ಫಾಸಿಲ್ ಮಾತು

ಇದಕ್ಕೆ ಹೋಸ್ಟ್​ ಭಾರದ್ವಾಜ್ ರಂಗನ್ ಅವರು ತಮ್ಮ ವಾದ ಮುಂದಿಟ್ಟರು. ‘ನಿಜಕ್ಕೂ ಸಿನಿಪ್ರಿಯರು ಆ ರೀತಿ ಇರುವುದಿಲ್ಲ’ ಎಂದು ವಾದಿಸಿದರು. ಇದಕ್ಕೆ ಫಹಾದ್ ಉತ್ತರ ನೀಡಿದ್ದಾರೆ. ‘ನಾನು ಅದನ್ನು ಬದಲಿಸಲು ಬಯಸುತ್ತೇನೆ. ಸಿನಿಮಾ ನೋಡುವುದು ಮಾತ್ರ ಅಲ್ಲ, ಜೀವನದಲ್ಲಿ ಮಾಡಲು ಸಾಕಷ್ಟು ಕೆಲಸಗಳು ಇವೆ’ ಎಂದು ಫಹಾದ್ ಹೇಳಿದ್ದಾರೆ.

ಇದನ್ನೂ ಓದಿ: ‘ಪ್ರೇಮಲು’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಮಾಹಿತಿ ಕೊಟ್ಟ ನಿರ್ಮಾಪಕ ಫಹಾದ್ ಫಾಸಿಲ್

ಇದನ್ನು ಕೆಲವರು ಟೀಕಿಸಿದ್ದಾರೆ. ‘ಸಿನಿಪ್ರಿಯರು ಕೆಲಸ ಇಲ್ಲದವರು ಎಂದು ಫಹಾದ್ ಹೇಳುತ್ತಿದ್ದಾರಾ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ‘ಫಹಾದ್ ಅವರೇ ಇದೇನು ನಿಮ್ಮ ವಾದ? ಸಿನಿಮಾ ನೋಡೋದನ್ನು ನಿಲ್ಲಿಸಲೇ’ ಎಂದು ಕೆಲವರು ಕೇಳಿದ್ದಾರೆ. ಫಹಾದ್ ಅಭಿಮಾನಿಗಳು ಅವರ ಪರ ಬ್ಯಾಟ್ ಬೀಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ