ಯಶ್ (Yash) ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಯಶ್ ಅವರು ಗೆದ್ದು ಬೀಗಿದರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಹೆಸರು ಮಾಡಿದರು. ಯಶ್ ಖ್ಯಾತಿ ಸದ್ಯಕ್ಕೆ ಕಡಿಮೆ ಆಗುವಂಥದ್ದಲ್ಲ. ಈಗಾಗಲೇ ‘ಕೆಜಿಎಫ್ 3’ ಬರಲಿದೆ ಎಂದು ಘೋಷಣೆ ಆಗಿದೆ. ಆದರೆ, ಸದ್ಯಕ್ಕಂತೂ ಈ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಈ ವಿಚಾರದಲ್ಲಿ ಫ್ಯಾನ್ಸ್ ಕೂಡ ಸಾಕಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ.
‘ಕೆಜಿಎಫ್ 2’ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ‘ಕೆಜಿಎಫ್ 3’ ಬಗ್ಗೆ ಮಾಹಿತಿ ನೀಡಲಾಗಿತ್ತು. ಫೈಲ್ಗಳನ್ನು ಹುಡುಕುವಾಗ ಅಲ್ಲಿ ‘ಕೆಜಿಎಫ್ 3’ಗೆ ಸಂಬಂಧಿಸಿದ ಡ್ಯಾಕ್ಯುಮೆಂಟ್ ಸಿಗೋ ರೀತಿಯಲ್ಲಿ ತೋರಿಸಲಾಗಿತ್ತು. ತಕ್ಷಣವೇ ‘ಕೆಜಿಎಫ್ 3’ ಸಿನಿಮಾ ಬರಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿಲ್ಲ. ಪ್ರಶಾಂತ್ ನೀಲ್ ಅವರು ‘ಸಲಾರ್’ ಸಿನಿಮಾಗಳಲ್ಲಿ ಬ್ಯುಸಿ ಆದರು. ಸದ್ಯ ಅವರು ಜೂನಿಯರ್ ಎನ್ಟಿಆರ್ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಯಶ್ ಕೂಡ ಬೇರೆ ಪ್ರಾಜೆಕ್ಟ್ನಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ‘ಕೆಜಿಎಫ್’ ಸರಣಿಯಲ್ಲಿ ಮೂರನೇ ಸಿನಿಮಾ ಬರೋದು ಯಾವಾಗ ಎನ್ನುವ ಪ್ರಶ್ನೆ ಮೂಡಿದೆ.
‘ಕೆಜಿಎಫ್ 3’ ಸಿನಿಮಾಗೆ 2023ರ ಡಿಸೆಂಬರ್ನಲ್ಲಿ ಕೆಲಸ ಆರಂಭ ಆಗಲಿದೆ ಹಾಗೂ 2025ರಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಕಳೆದ ವರ್ಷ ವರದಿ ಆಗಿತ್ತು. ಆದರೆ, ಸಿನಿಮಾದ ಕೆಲಸ ಸದ್ಯಕ್ಕಂತೂ ಆರಂಭ ಆಗೋ ಸೂಚನೆ ಇಲ್ಲ. ಇನ್ನು, ಪ್ರಶಾಂತ್ ನೀಲ್ ಹೇಳಿಕೆಯೂ ಚರ್ಚೆ ಆಗುತ್ತಿದೆ.
‘ಕೆಜಿಎಫ್ಗೆ ಮೂರನೇ ಚಾಪ್ಟರ್ ಮಾಡುತ್ತೇವೆ. ನಾನು ಆ ಚಿತ್ರಕ್ಕೆ ನಿರ್ದೇಶನ ಮಾಡುತ್ತೇನೋ ಅಥವಾ ಇಲ್ಲವೋ ಗೊತ್ತಿಲ್ಲ. ಯಶ್ ಅವರು ಇದರ ಭಾಗ ಆಗಿರುತ್ತಾರೆ’ ಎಂದು ಪ್ರಶಾಂತ್ ನೀಲ್ ಹೇಳಿದ್ದರು. ಇದು ಕೂಡ ಚರ್ಚೆ ಹುಟ್ಟುಹಾಕಿತ್ತು. ಈ ಮೊದಲು ಅವರು ನೀಡಿರೋ ಹೇಳಿಕೆ ಪ್ರಕಾರ ‘ಕೆಜಿಎಫ್ 3’ ಚಿತ್ರಕ್ಕೆ ಈಗಾಗಲೇ ಸ್ಕ್ರಿಪ್ಟ್ ರೆಡಿ ಆಗಿದೆಯಂತೆ. ಸಿನಿಮಾ ಕೆಲಸ ಆರಂಭಿಸೋದು ಮಾತ್ರ ಬಾಕಿ ಇದೆ.
ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ ಸಿನಿಮಾದ ಸೆಟ್ ಫೋಟೋ ಲೀಕ್; ಸಖತ್ ಅದ್ದೂರಿ
ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಮಲಯಾಳಂನ ಗೀತು ಮೋಹನ್ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. ಇದಾದ ಬಳಿಕ ಅವರು ‘ರಾಮಾಯಣ’ ಸಿನಿಮಾಗಳಲ್ಲಿ ತೊಡಗಿಕೊಳ್ಳಬೇಕಿದೆ. ಈ ಚಿತ್ರದ ಯಶ್ ಪಾತ್ರದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಇಷ್ಟೆಲ್ಲಾ ಬ್ಯುಸಿ ಇರೋ ಯಶ್ ಅವರು ಶೀಘ್ರವೇ ‘ಕೆಜಿಎಫ್ 3’ನ ಭಾಗವಾಗುತ್ತಾರಾ ಎನ್ನುವ ಪ್ರಶ್ನೆಯನ್ನು ಫ್ಯಾನ್ಸ್ ಕೇಳಿಕೊಳ್ಳುತ್ತಿದ್ದಾರೆ. ‘ಕೆಜಿಎಫ್ 3’ ವಿಳಂಬ ಆದಂತೆಲ್ಲ ಈ ಸಿನಿಮಾ ಮೇಲಿನ ಆಸಕ್ತಿ ಕಡಿಮೆ ಆಗುತ್ತಾ ಹೋಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ