‘ಫರ್ಹಾನಾ’ ಸಿನಿಮಾ ವಿವಾದ: ನಟಿ ಐಶ್ವರ್ಯಾ ರಾಜೇಶ್​ಗೆ ಪೊಲೀಸ್​ ಭದ್ರತೆ

Farhana Movie: ದಿ ಕೇರಳ ಸ್ಟೋರಿ ಸಿನಿಮಾ ಬೆನ್ನಲ್ಲೆ ಇದೀಗ ತಮಿಳಿನ ಫರ್ಹಾನಾ ಸಿನಿಮಾ ಸಹ ವಿವಾದಕ್ಕೆ ಗುರಿಯಾಗಿದೆ. ಮುಸ್ಲಿಂ ಸಮುದಾಯವು ಸಿನಿಮಾಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಫರ್ಹಾನಾ ಸಿನಿಮಾದ ನಾಯಕಿ ಐಶ್ವರ್ಯಾ ರಾಜೇಶ್​ಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

'ಫರ್ಹಾನಾ' ಸಿನಿಮಾ ವಿವಾದ: ನಟಿ ಐಶ್ವರ್ಯಾ ರಾಜೇಶ್​ಗೆ ಪೊಲೀಸ್​ ಭದ್ರತೆ
ಫರ್ಹಾನಾ
Follow us
ಮಂಜುನಾಥ ಸಿ.
|

Updated on: May 16, 2023 | 10:35 PM

ದಿ ಕೇರಳ ಸ್ಟೋರಿ‘ (The Kerala Story) ಸಿನಿಮಾ ವಿವಾದ ಎಬ್ಬಿಸಿರುವ ಬೆನ್ನಲ್ಲೆ ತಮಿಳಿನ ಮತ್ತೊಂದು ಸಿನಿಮಾ ಸಹ ವಿವಾದಕ್ಕೆ ಗುರಿಯಾಗಿದೆ. ಎರಡೂ ಸಿನಿಮಾಗಳನ್ನು ಮುಸ್ಲಿಂ ಸಮುದಾಯ ವಿರೋಧಿಸುತ್ತಿದೆ. ಕೆಲವು ದಿನಗಳ ಹಿಂದಷ್ಟೆ ‘ಫರ್ಹಾನಾ‘ (Farhana) ಹೆಸರಿನ ತಮಿಳು ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾಕ್ಕೆ ಕೆಲವು ಮೂಲಭೂತವಾದಿ ವ್ಯಕ್ತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಅದರ ಬೆನ್ನಲ್ಲೆ ಸಿನಿಮಾದ ನಟಿ ಐಶ್ವರ್ಯಾ ರಾಜೇಶ್​ಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಫರ್ಹಾನಾ ಸಿನಿಮಾದಲ್ಲಿ ಐಶ್ವರ್ಯಾ ರಾಜೇಶ್ ನಾಯಕಿಯಾಗಿ ನಟಿಸಿದ್ದು, ಸಿನಿಮಾದ ವಿರುದ್ಧ ಮುಸ್ಲಿಂ ಸಮುದಾಯದ ಕೆಲ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆಯ ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ ನಟಿಗೆ ಭದ್ರತೆ ನೀಡಲಾಗಿದೆ. ‘ದಿ ಕೇರಳ ಸ್ಟೋರಿ’ ಸಿನಿಮಾದ ನಟಿ ಅದಾ ಶರ್ಮಾಗೂ ಸಹ ಪೊಲೀಸರು ಭದ್ರತೆ ಒದಗಿಸಿದ್ದಾರೆ.

ಫರ್ಹಾನಾ ಸಿನಿಮಾವು ಮುಸ್ಲಿಂ ಗೃಹಿಣಿಯೊಬ್ಬಳ ಕತೆಯನ್ನು ಒಳಗೊಂಡಿದೆ. ಬಡತನದ ಕುಟುಂಬದ ಸೊಸೆ ಫರ್ಹಾನಾ, ತನ್ನ ಪರಿಸ್ಥಿತಿ ತನ್ನ ಮಕ್ಕಳಿಗೆ ಬರಬಾರದೆಂಬ ಕಾರಣಕ್ಕೆ ಲೈಂಗಿಕತೆ ಕುರಿತಾಗಿ ಮಾತನಾಡುವ ಕಾಲ್ ಸೆಂಟರ್​ ಸೇರಿಕೊಳ್ಳುತ್ತಾಳೆ. ಅಲ್ಲಿ ಆಕೆ ಎದುರಿಸುವ ಸಮಸ್ಯೆಗಳು, ಆ ವೃತ್ತಿಯಿಂದಾಗಿ ಕುಟುಂಬದವರಿಂದ ಎದುರಿಸುವ ಸಮಸ್ಯೆ, ಬ್ಲಾಕ್​ಮೇಲರ್ ಒಬ್ಬನಿಗೆ ಎದುರಿಸುವ ಸಮಸ್ಯೆಗಳನ್ನು ಫರ್ಹಾನಾ ಹೇಗೆ ನಿಭಾಯಿಸುತ್ತಾಳೆ ಎಂಬುದೇ ಸಿನಿಮಾದ ಕತೆ. ಸಿನಿಮಾವು ಮೇ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿದೆ.

ಇಂಡಿಯನ್ ನ್ಯಾಷನಲ್ ಲೀಗ್ ಮತ್ತು ಇನ್ನು ಕೆಲವು ಮುಸ್ಲಿಂ ಸಂಘಟನೆಗಳು ಸಿನಿಮಾದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಿನಿಮಾವು ಮುಸ್ಲಿಂ ಮಹಿಳೆಯರನ್ನು ಕೆಟ್ಟದಾಗಿ ಚಿತ್ರಿಸಿದೆ ಹಾಗೂ ಸಿನಿಮಾದಿಂದ ಮುಸ್ಲಿಂ ಮಹಿಳೆಯರ ಬಗ್ಗೆ ಕೆಟ್ಟ ಸಂದೇಶ ಸಮಾಜಕ್ಕೆ ರವಾನೆ ಆಗುತ್ತದೆ ಎಂದು ಆರೋಪಿಸಿದ್ದಾರೆ.

ಫರ್ಹಾನಾ ಸಿನಿಮಾ ನಿರ್ಮಾಪಕರು ಸಹ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದು, “ಸಿಬಿಎಫ್​ಸಿಯಿಂದ ಸೆನ್ಸಾರ್ ಮಾಡಲಾದ ಫರ್ಹಾನಾ ಬಗ್ಗೆ ಕೆಲವು ಜನರು ಸೃಷ್ಟಿಸಿದ ವಿವಾದಗಳು ನಮಗೆ ತುಂಬಾ ನೋವನ್ನುಂಟುಮಾಡಿದೆ. ಫರ್ಹಾನಾ ಸಿನಿಮಾವು ಯಾವುದೇ ಧರ್ಮ ಅಥವಾ ಅವರ ಭಾವನೆಗಳಿಗೆ ವಿರುದ್ಧವಾಗಿಲ್ಲ. ನಮ್ಮ ಗುರಿ ಉತ್ತಮ ಚಲನಚಿತ್ರಗಳನ್ನು ನೀಡುವುದಷ್ಟೆ, ನಿರ್ದಿಷ್ಟ ಧಾರ್ಮಿಕ ಭಾವನೆಗಳಿಗೆ ಮತ್ತು ನಂಬಿಕೆಗಳಿಗೆ ವಿರುದ್ಧವಾದ ವಿಷಯಗಳಿಗೆ ನಾವು ಎಂದಿಗೂ ಘಾಸಿ ಉಂಟು ಮಾಡಿಲ್ಲ. ಮಾನವೀಯತೆ ಮತ್ತು ಮಾನವೀಯತೆಗೆ ವಿರುದ್ಧವಾದ ಕಥೆಗಳನ್ನು ನಾವು ಹೇಳುವುದಿಲ್ಲ. ನಮ್ಮ ಸಿನಿಮಾದ ಬಗ್ಗೆ ವಿವಾದಗಳನ್ನು ಸೃಷ್ಟಿಸುತ್ತಿರುವ ನಮ್ಮ ಸಹೋದರ ಸಹೋದರಿಯರು ಇದನ್ನು ಅರ್ಥಮಾಡಿಕೊಳ್ಳಬೇಕು. ನಮ್ಮ ತಮಿಳುನಾಡು ಧಾರ್ಮಿಕ ಸೌಹಾರ್ದತೆಯ ಸ್ವರ್ಗ, ಕಲಾಕೃತಿಗಳನ್ನು ಪೋಷಿಸುತ್ತಿರುವ ನಾಡು, ಸೆನ್ಸಾರ್ ಆದ ಚಿತ್ರವನ್ನು ಅಪಾರ್ಥಗಳಿಂದ ವಿರೋಧಿಸಿ ವಿವಾದ ಸೃಷ್ಟಿಸುವುದು ಸರಿಯಲ್ಲ, ವಿರೋಧಿಸುವವರಿಗೆ ಸರಿಯಾದ ತಿಳುವಳಿಕೆ ಇಲ್ಲ ಎನಿಸುತ್ತದೆ. ನೂರಾರು ಜನರ ಶ್ರಮದಿಂದ ಚಿತ್ರ ನಿರ್ಮಿಸಲಾಗಿದೆ. ಯಾವುದೇ ದೋಷವಿಲ್ಲದ ಚಿತ್ರವನ್ನು ತಮಿಳು ಅಭಿಮಾನಿಗಳು ಬೆಂಬಲಿಸುತ್ತಾರೆ ಎಂಬ ಭರವಸೆ ಇದೆ” ಎಂದಿದ್ದಾರೆ.

ಫರ್ಹಾನಾ ಸಿನಿಮಾವನ್ನು ನೆಲ್ಸನ್ ವೆಂಕಟೇಸನ್ ನಿರ್ದೇಶನ ಮಾಡಿದ್ದಾರೆ. ಪ್ರಕಾಶ್ ಬಾಬು ಹಾಗೂ ಎಸ್​ಆರ್ ಬಾಬು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಐಶ್ವರ್ಯಾ ರಾಜೇಶ್ ಜೊತೆಗೆ ಸೆಲ್ವ ರಾಘವನ್, ಜಿತಿನ್ ರಮೇಶ್, ಅನುಮೋಲ್, ಐಶ್ವರ್ಯಾ ದತ್ತ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ