ಬಿಗ್ ಬಜೆಟ್ ನಿರ್ಮಾಣ ಸಂಸ್ಥೆ ಮೇಲೆ ಇಡಿ ದಾಳಿ, ಕೋಟ್ಯಂತರ ಹಣ ವಶ

Lyca Productions: ಲೈಗರ್ ಸಿನಿಮಾತಂಡ, ಮೈತ್ರಿ ಮೂವಿ ಮೇಕರ್ಸ್ ಬಳಿಕ ಈಗ ಕೇಂದ್ರ ತನಿಖಾ ತಂಡ ಇಡಿ, ತಮಿಳಿನ ಬಿಗ್ ಬಜೆಟ್ ನಿರ್ಮಾಣ ಸಂಸ್ಥೆ ಲೈಕಾ ಮೇಲೆ ದಾಳಿ ಮಾಡಿದೆ.

ಬಿಗ್ ಬಜೆಟ್ ನಿರ್ಮಾಣ ಸಂಸ್ಥೆ ಮೇಲೆ ಇಡಿ ದಾಳಿ, ಕೋಟ್ಯಂತರ ಹಣ ವಶ
ಲೈಕಾ ಪ್ರೊಡಕ್ಷನ್ಸ್
Follow us
ಮಂಜುನಾಥ ಸಿ.
|

Updated on: May 16, 2023 | 7:36 PM

ಸಿನಿಮಾ ರಂಗದ (Movie Industry) ಮೇಲೆ ಕೇಂದ್ರ ತನಿಖಾ ಸಂಸ್ಥೆ ಇಡಿ (ಜಾರಿ ನಿರ್ದೇಶನಾಲಯ) (Enforcement Directorate) ಇತ್ತೀಚೆಗೆ ಕಣ್ಣು ಹಾಕಿದಂತೆ. ಲೈಗರ್ ಸಿನಿಮಾ ತಂಡವನ್ನು ವಿಚಾರಣೆಗೊಳಿಸಿದ್ದ ಇಡಿ ಅದಾದ ಬಳಿಕ ಇತ್ತೀಚೆಗೆ ತೆಲುಗಿನ ದೊಡ್ಡ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ (Mytri Movie Makers) ಕಚೇರಿ ಹಾಗೂ ನಿರ್ಮಾಪಕರ ನಿವಾಸಗಳ ಮೇಲೆ ದಾಳಿ ನಡೆಸಿದ್ದರು. ಇದೀಗ ತಮಿಳಿನ ದೊಡ್ಡ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ (Lyca Productions) ಹೌಸ್​ ಮೇಲೆ ದಾಳಿ ಮಾಡಿದ್ದಾರೆ. ಮಾತ್ರವಲ್ಲ ದೊಡ್ಡ ಮೊತ್ತದ ಹಣ ವಶಪಡಿಸಿಕೊಂಡಿದ್ದಾರೆ.

ಇತ್ತೀಚೆಗಿನ ಪೊನ್ನಿಯಿನ್ ಸೆಲ್ವನ್ ಸೇರಿದಂತೆ, ಸೂಪರ್ ಡೂಪರ್ ಹಿಟ್ ಸಿನಿಮಾಗಳಾದ ರೋಬೋ 2.0, ಖೈದಿ, ವಡ ಚೆನ್ನೈ ಇನ್ನೂ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಲೈಕಾ ಪ್ರೊಡಕ್ಷನ್ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದ್ದೆ. ಚೆನ್ನೈ ಒಂದರಲ್ಲೇ ಸುಮಾರು 20 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು ಪರಿಶೀಲನೆ ನಡೆಸಿದ್ದಾರೆ.

ಸಿನಿಮಾ ನಿರ್ಮಾಣದ ಜೊತೆಗೆ ಮೊಬೈಲ್ ನಿರ್ಮಾಣ ಮತ್ತು ಮಾರಾಟ ಹಾಗೂ ಇನ್ನಿತರೆ ಉದ್ಯಮಗಳಲ್ಲಿ ಲೈಕಾ ಪ್ರೊಡಕ್ಷನ್ ತೊಡಗಿಕೊಂಡಿದ್ದು ಇಡಿಯು, ಲೈಕಾ ವಿರುದ್ಧ ಅಕ್ರಮ ಹಣ ಸಾಗಣೆ, ಕಾನೂನು ಬಾಹಿರ ಬಂಡವಾಳ ತೊಡಗಿಸಿಕೊಳ್ಳುವಿಕೆಯ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಿದೆ. ಸುಭಾಸ್ಕರನ್ ಅಲಿರಾಜಾ ಎಂಬುವರು ಲೈಕಾ ಪ್ರೊಡಕ್ಷನ್ ಮಾಲೀಕರಾಗಿದ್ದು, ಲೈಕಾ ಪ್ರೊಡಕ್ಷನ್ ಮೇಲೆ ದಾಳಿ ನಡಿಸಿದ ಇಡಿ ಅಧಿಕಾರಿ 26 ಕೋಟಿ ನಗದು ಹಣ ಹಾಗೂ 3 ಕೋಟಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಲೈಕಾ ಪ್ರೊಡಕ್ಷನ್ ಭಾರತದ ಟಾಪ್ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ. ರೋಬೊ 2.0 ಸಿನಿಮಾಕ್ಕೆ ಭಾರಿ ಬಜೆಟ್ ಅನ್ನು ಈ ನಿರ್ಮಾಣ ಸಂಸ್ಥೆ ಹೂಡಿತ್ತು. ರಜನೀಕಾಂತ್-ಅಕ್ಷಯ್ ಕುಮಾರ್ ನಟಿಸಿದ್ದ ಈ ಸಿನಿಮಾಕ್ಕೆ ಹಾಲಿವುಡ್​ನ ಡೆಡ್​ಪೂಲ್ ಸಿನಿಮಾಕ್ಕಿಂತಲೂ ಹೆಚ್ಚಿನ ಬಂಡವಾಳ ಹೂಡಲಾಗಿತ್ತು. ಕೆಲ ವಾರಗಳ ಹಿಂದೆ ಬಿಡುಗಡೆ ಆಗಿರುವ ಪೊನ್ನಿಯಿನ್ ಸೆಲ್ವನ್ 2 ಹಾಗೂ ಕಳೆದ ವರ್ಷ ಬಿಡುಗಡೆ ಆಗಿದ್ದ ಪೊನ್ನಿಯಿನ್ ಸೆಲ್ವನ್ 1 ಸಿನಿಮಾಕ್ಕೂ ಇದೇ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ.

ಇದನ್ನೂ ಓದಿ:ಅಲ್ಲು ಅರ್ಜುನ್​ ಮತ್ತು ಮಹೇಶ್​ ಬಾಬುಗೆ ಕಾಡುತ್ತಿದೆ ಒಂದೇ ಸಮಸ್ಯೆ; ಪೊಲೀಸ್​ ಠಾಣೆಯಲ್ಲಿ ದಾಖಲಾಯ್ತು ದೂರು

ಬ್ರಿಟೀಷ್ ಹಾಗೂ ತಮಿಳು ಪೋಷಕರಿಗೆ ಶ್ರೀಲಂಕಾದಲ್ಲಿ ಜನಿಸಿದ ಸುಭಾಸ್ಕರನ್ ಅಲಿರಾಜಾ 2014 ರಲ್ಲಿ ವಿಜಯ್ ನಟಿಸಿದ್ದ ಖೈದಿ ಸಿನಿಮಾ ಮೂಲಕ ಸಿನಿಮಾ ನಿರ್ಮಾಣಕ್ಕೆ ಕಾಲಿಟ್ಟರು. ಆ ಸಿನಿಮಾ ಸೂಪರ್-ಡೂಪರ್ ಹಿಟ್ ಆಯಿತು. ಆ ಬಳಿಕ ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುತ್ತಲೇ ಬಂದಿದ್ದಾರೆ. ಅದರಲ್ಲಿಯೂ ಭಾರಿ ಬಜೆಟ್ ಸಿನಿಮಾಗಳು ಲೈಕಾ ಪ್ರೊಡಕ್ಷನ್​ನ ವಿಶೇಷ. ಇದೀಗ ಕಮಲ್ ಹಾಸನ್ ನಟನೆಯ ಶಂಕರ್ ನಿರ್ದೇಶಿಸುತ್ತಿರುವ ಇಂಡಿಯನ್ 2 ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇದರ ಜೊತೆಗೆ ಮಿಷನ್ ಚಾಪ್ಟರ್ 1, ರಜನೀಕಾಂತ್ ನಟನೆಯ ಲಾಲ್ ಸಲಾಮ್, ವಿಧಾ ಮುಯಾರ್ಚಿ ಸಿನಿಮಾಗಳನ್ನು ಸಹ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ