AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಧ್ಯಾತ್ಮಿಕ ಗುರು ರವಿ ಶಂಕರ್ ಜೀವನ ಆಧರಿಸಿ ಥ್ರಿಲ್ಲರ್ ಸಿನಿಮಾ ಮಾಡಲಿದ್ದಾರೆ ‘ವಾರ್’ ಖ್ಯಾತಿಯ ನಿರ್ದೇಶಕ

ಕರ್ನಾಟಕದ ಮೂಲದ ರವಿ ಶಂಕರ್ ಗುರೂಜಿ ಅವರು ಶಾಂತಿ ಗುರು. ಎಲ್ಲ ಕಡೆ ಶಾಂತಿ ನೆಲಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಕೊಲಂಬಿಯಾದ 52 ವರ್ಷಗಳ ಅಂತರ್​ಯುದ್ಧಧಲ್ಲಿ ಅವರು ಮಧ್ಯಸ್ಥಿಕೆ ವಹಿಸಿ, ಅದನ್ನು ಪರಿಹರಿಸಿದರು. ಇದನ್ನು ಕೇಂದ್ರೀಕೃತವಾಗಿಸಿಕೊಂಡು ಸಿನಿಮಾ ಸಾಗಲಿದೆ.

ಆಧ್ಯಾತ್ಮಿಕ ಗುರು ರವಿ ಶಂಕರ್ ಜೀವನ ಆಧರಿಸಿ ಥ್ರಿಲ್ಲರ್ ಸಿನಿಮಾ ಮಾಡಲಿದ್ದಾರೆ ‘ವಾರ್’ ಖ್ಯಾತಿಯ ನಿರ್ದೇಶಕ
ಆಧ್ಯಾತ್ಮಿಕ ಗುರು ರವಿ ಶಂಕರ್ ಜೀವನ ಆಧರಿಸಿ ಥ್ರಿಲ್ಲರ್ ಸಿನಿಮಾ ಮಾಡಲಿದ್ದಾರೆ ‘ವಾರ್’ ಖ್ಯಾತಿಯ ನಿರ್ದೇಶಕ
ರಾಜೇಶ್ ದುಗ್ಗುಮನೆ
|

Updated on: Jul 15, 2024 | 7:35 AM

Share

ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ‘ವಾರ್’, ‘ಪಠಾಣ್’, ‘ಫೈಟರ್’ ಅಂತಹ ಚಿತ್ರಗಳನ್ನು ನಿರ್ದೇಶನ ಮಾಡಿದವರು. ಅವರು ನಿರ್ಮಾಣದಲ್ಲೂ ಬ್ಯುಸಿ ಇದ್ದಾರೆ. ಈಗ ಅವರು ಥ್ರಿಲ್ಲರ್ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಮಹಾವೀರ್ ಜೈನ್ ಕೂಡ ಸಿದ್ದಾರ್ಥ್ ಜೊತೆ ಕೈ ಜೋಡಿಸಿದ್ದಾರೆ. ಕರ್ನಾಟಕದ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿ ಶಂಕರ್ ಗುರೂಜಿ ಅವರ ಜೀವನದಲ್ಲಿ ನಡೆದ ನೈಜ ಘಟನೆ ಆಧರಿಸಿ ಈ ಸಿನಿಮಾ ಸಿದ್ಧಗೊಳ್ಳಲಿದೆ ಅನ್ನೋದು ವಿಶೇಷ.

ಶ್ರೀ ಶ್ರೀ ರವಿ ಶಂಕರ್ ಗುರೂಜಿ ಅವರು ಶಾಂತಿ ಗುರು. ಎಲ್ಲ ಕಡೆ ಶಾಂತಿ ನೆಲಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಅವರು ಕೊಲಂಬಿಯಾದ 52 ವರ್ಷಗಳ ಅಂತರ್​ಯುದ್ಧಧಲ್ಲಿ ಮಧ್ಯಸ್ಥಿಕೆ ವಹಿಸಿ, ಅದನ್ನು ಪರಿಹರಿಸಿದರು. ಇದನ್ನು ಕೇಂದ್ರೀಕೃತವಾಗಿಸಿಕೊಂಡು ಸಿನಿಮಾ ಸಾಗಲಿದೆ. ಇದು ಅಂತಾರಾಷ್ಟ್ರೀಯ ಕಥೆ ಆಗಿರುವುದರಿಂದ ವಿದೇಶಿ ಕಲಾವಿದರು ಕೂಡ ನಟಿಸಲಿದ್ದಾರೆ.

ಇದನ್ನೂ ಓದಿ: ‘ಫೈಟರ್’ ಸಿನಿಮಾ ಗಳಿಕೆ ಕಡಿಮೆ ಆಗಲು ಕಾರಣ ಏನು? ವಿವರಿಸಿದ ನಿರ್ದೇಶಕ ಸಿದ್ದಾರ್ಥ್

ವಾಷಿಂಗ್ಟನ್ ಡಿಸಿಯಲ್ಲಿ ನಡೆದ ‘ವಿಶ್ವ ಸಾಂಸ್ಕೃತಿಕ ಉತ್ಸವ’ದಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದೆ. 180 ರಾಷ್ಟ್ರಗಳಿಂದ ಲಕ್ಷಾಂತರ ಮಂದಿ ಈ ಉತ್ಸವಕ್ಕೆ ಬಂದಿದ್ದರು. ಈ ವೇಳೆ ಈ ಸಿನಿಮಾ ಬಗ್ಗೆ ಮಾಹಿತಿ ನೀಡಲಾಗಿದೆ. ಸಿದ್ದಾರ್ಥ್ ಆನಂದ್ ಅವರು ಆ್ಯಕ್ಷನ್ ಸಿನಿಮಾಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದಾಗ ನಿರೀಕ್ಷೆ ಹೆಚ್ಚಿರುತ್ತದೆ. ಇವರು ಒಂದಾಗಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ.

ಸಿದ್ದಾರ್ಥ್ ನಿರ್ದೇಶನದ ‘ಫೈಟರ್’ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಯಿತು. ಹೃತಿಕ್ ರೋಷನ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ, ಈ ಸಿನಿಮಾ ಅಂದುಕೊಂಡ ರೀತಿಯಲ್ಲಿ ಬಿಸ್ನೆಸ್ ಮಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.