ಇಮ್ರಾನ್ ಹಶ್ಮಿ ಕಿಸ್ಸಿಂಗ್ ದೃಶ್ಯ ಮಾಡಿದಾಗಲೆಲ್ಲ ಪತ್ನಿಗೆ ಸಿಟ್ಟು; ಕೋಪ ಇಳಿಸಲು ಕೊಡುತ್ತಿದ್ದ ಗಿಫ್ಟ್ ಏನು?
ಪತಿ ತೆರೆ ಮೇಲೆ ಕಿಸ್ಸಿಂಗ್ ದೃಶ್ಯ ಮಾಡೋದು ಕೆಲವು ಪತ್ನಿಯರಿಗೆ ಇಷ್ಟ ಆಗುವುದಿಲ್ಲ. ಕೆಲವರು ಸಿಟ್ಟಾಗುತ್ತಾರೆ. ಇದನ್ನು ಇಮ್ರಾನ್ ಹಶ್ಮಿ ಅವರಿಗೂ ಇದೇ ರೀತಿ ಆಗುತ್ತಿತ್ತು. ಇನ್ನು, ಅವರೇ ನಟಿಸಿದ ಬೋಲ್ಡ್ ದೃಶ್ಯವನ್ನು ಪರದೆಮೇಲೆ ತೋರಿಸಲಾಯಿತು. ಇದನ್ನು ನೋಡೋಕೆ ಅವರ ಬಳಿ ಸಾಧ್ಯವಾಗಿಲ್ಲ.
ಇಮ್ರಾನ್ ಹಶ್ಮಿ ಅವರು ಸೀರಿಯಲ್ ಕಿಸ್ಸರ್ ಎಂದೇ ಫೇಮಸ್ ಆದವರು. ಬೇಕೋ-ಬೇಡವೋ ಅವರ ಸಿನಿಮಾಗಳಲ್ಲಿ ಈ ರೀತಿಯ ದೃಶ್ಯಗಳನ್ನು ನಿರ್ಮಾಪಕರು ಅಥವಾ ನಿರ್ದೇಶಕರು ಇಟ್ಟೇ ಇಡುತ್ತಿದ್ದರು. ಪ್ರೇಕ್ಷಕರು ಕೂಡ ಇದೇ ರೀತಿಯ ದೃಶ್ಯಗಳನ್ನು ನಿರೀಕ್ಷಿಸುತ್ತಿದ್ದರು. ಇಮ್ರಾನ್ ಹಶ್ಮಿ ಅವರು ಇತ್ತೀಚೆಗೆ ಬದಲಾಗಿದ್ದಾರೆ. ವಿಲನ್ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸೀರಿಯಲ್ ಕಿಸ್ಸರ್ ಎನ್ನುವ ಟ್ಯಾಗ್ನಿಂದ ದೂರ ಆಗಬೇಕು ಎಂಬುದು ಅವರ ಉದ್ದೇಶ. ಅವರು ಸಂದರ್ಶನ ಒಂದರಲ್ಲಿ ಹಳೆಯ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.
ಇಮ್ರಾನ್ ಹಶ್ಮಿ ಅವರ ಸಿನಿಮಾಗಳನ್ನು ಮಕ್ಕಳು ನೋಡುವಂತೆ ಇರಲಿಲ್ಲ. ಅಷ್ಟೊಂದು ಬೋಲ್ಡ್ ದೃಶ್ಯಗಳನ್ನು ತೋರಿಸಲಾಗುತ್ತಿತ್ತು. ಇಮ್ರಾನ್ ಹಶ್ಮಿ ಅವರು ಮಾಡೋ ಸಾಂಗ್ಗಳಂತೂ ಬೇರೆಯದೇ ರೀತಿಯಲ್ಲಿ ಇರುತ್ತಿದ್ದವು. ಹೀಗಾಗಿ, ಇಮ್ರಾನ್ ಹಶ್ಮಿಗೆ ಸೀರಿಯಲ್ ಕಿಸ್ಸರ್ ಎನ್ನುವ ಬಿರುದು ಸಿಕ್ಕಿತ್ತು. ಅವರ ಸಾಂಗ್ ಟಿವಿಯಲ್ಲಿ ಬಂದರೆ ಪಾಲಕರು ಚಾನೆಲ್ ಚೇಂಜ್ ಮಾಡುತ್ತಿದ್ದರು. ಅಚ್ಚರಿಯ ವಿಚಾರ ಎಂದರೆ ಸ್ವತಃ ಇಮ್ರಾನ್ ಹಶ್ಮಿ ಕೂಡ ಇದೇ ರೀತಿ ಮಾಡುತ್ತಾರಂತೆ. ಸ್ವತಃ ಅವರೇ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.
ಇಮ್ರಾನ್ ಹಶ್ಮಿ ಅವರು ಸಂದರ್ಶನ ಒಂದರಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಅವರಿಗೆ ಒಂದಷ್ಟು ಪ್ರಶ್ನೆಗಳು ಎದುರಾಗಿವೆ. ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಅವರು ಮುಚ್ಚುಮರೆ ಇಲ್ಲದೆ ಉತ್ತರ ನೀಡಿದ್ದಾರೆ. ‘ಬಿಗೆ ಹೋಟು ತೆರೆ.. ಹಾಡು ಬರುವಾಗ ನೀವು ಚಾನೆಲ್ ಚೇಂಜ್ ಮಾಡ್ತಾ ಇದ್ರಿ’ ಎನ್ನುವ ಪ್ರಶ್ನೆ ಅವರಿಗೆ ಎದುರಾಗಿದೆ. ಇದನ್ನು ಅವರು ಕೂಡ ಒಪ್ಪಿದ್ದಾರೆ.
View this post on Instagram
View this post on Instagram
ಪತಿ ತೆರೆ ಮೇಲೆ ಕಿಸ್ಸಿಂಗ್ ದೃಶ್ಯ ಮಾಡೋದು ಕೆಲವು ಪತ್ನಿಯರಿಗೆ ಇಷ್ಟ ಆಗುವುದಿಲ್ಲ. ಕೆಲವರು ಸಿಟ್ಟಾಗುತ್ತಾರೆ. ಇದನ್ನು ಇಮ್ರಾನ್ ಹಶ್ಮಿ ನೇರವಾಗಿ ಒಪ್ಪಿಕೊಂಡಿಲ್ಲ. ಆದರೆ, ಪ್ರತಿ ಬಾರಿ ಕಿಸ್ಸಿಂಗ್ ದಶ್ಯ ಮಾಡಿದಾಗಲೂ ಅವರು ಪತ್ನಿಗೆ ಬ್ಯಾಗ್ ಕೊಡುತ್ತಿದ್ದುದಾಗಿ ಹೇಳಿದ್ದಾರೆ. ಈ ಮೂಲಕ ಪತ್ನಿಯ ಸಿಟ್ಟನ್ನು ಅವರು ಶಮನ ಮಾಡುತ್ತಿದ್ದರು. ಇನ್ನು ಅವರೇ ನಟಿಸಿದ ಬೋಲ್ಡ್ ದೃಶ್ಯವನ್ನು ಪರದೆಮೇಲೆ ತೋರಿಸಲಾಯಿತು. ಇದನ್ನು ನೋಡೋಕೆ ಅವರ ಬಳಿ ಸಾಧ್ಯವಾಗಿಲ್ಲ.
ಇದನ್ನೂ ಓದಿ: ಮತ್ತೆ ಅನಾವರಣ ಆಯಿತು ಇಮ್ರಾನ್ ಹಷ್ಮಿ ಕಿಸ್ಸಿಂಗ್ ಅವತಾರ; ಮೌನಿ ರಾಯ್ ಜೊತೆ ಬೋಲ್ಡ್ ದೃಶ್ಯ
ಇಮ್ರಾನ್ ಹಶ್ಮಿ ಇತ್ತೀಚೆಗೆ ಬದಲಾಗಿದ್ದಾರೆ. ‘ಟೈಗರ್ 3’ ಚಿತ್ರದಲ್ಲಿ ಅವರು ವಿಲನ್ ಪಾತ್ರ ಮಾಡಿದ್ದಾರೆ. ‘ದೆ ಕಾಲ್ ಮಿ ಒಜಿ’ ಹೆಸರಿನ ತೆಲುಗು ಸಿನಿಮಾದಲ್ಲಿ ಅವರು ಪವನ್ ಕಲ್ಯಾಣ್ ವಿರುದ್ಧ ತೊಡೆ ತಟ್ಟುತ್ತಿದ್ದಾರೆ. ಇನ್ನೂ ಹಲವು ಸಿನಿಮಾಗಳಲ್ಲಿ ಅವರಿಗೆ ವಿಲನ್ ಪಾತ್ರಗಳು ಬರುತ್ತಿವೆ. ಅವರು ಅಳೆದು ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.