AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳು ಆರಾಧ್ಯಾ ಜೊತೆ ವಿದೇಶಕ್ಕೆ ಹಾರಿದ ಐಶ್ವರ್ಯಾ; ವಿಚ್ಛೇದನ ವಿಚಾರ ನಿಜವಾಯ್ತಾ?

ಐಶ್ವರ್ಯಾ ರೈ ಮಗಳ ಜೊತೆ ವಿದೇಶಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ಅಭಿಷೇಕ್ ಬಚ್ಚನ್ ಇವರೊಂದಿಗೆ ಇಲ್ಲ. ಕೆಲವೇ ದಿನಗಳ ಹಿಂದೆ ಐಶ್ವರ್ಯಾ ರೈ ಮತ್ತು ಆರಾಧ್ಯ ಬಚ್ಚನ್ ವಿದೇಶಕ್ಕೆ ಹೋಗಿದ್ದರು. ಈಗ  ಅವರು ಮತ್ತೊಮ್ಮೆ ವಿದೇಶಕ್ಕೆ ತೆರಳಿ ಸುದ್ದಿ ಆಗಿದ್ದಾರೆ.

ಮಗಳು ಆರಾಧ್ಯಾ ಜೊತೆ ವಿದೇಶಕ್ಕೆ ಹಾರಿದ ಐಶ್ವರ್ಯಾ; ವಿಚ್ಛೇದನ ವಿಚಾರ ನಿಜವಾಯ್ತಾ?
ಐಶ್ವರ್ಯಾ-ಅಭಿಷೇಕ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jul 15, 2024 | 2:02 PM

Share

ಸದಾ ಸುದ್ದಿಯಲ್ಲಿರುವ ಹೆಸರು ಐಶ್ವರ್ಯಾ ರೈ. ಅವರು ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಐಶ್ವರ್ಯಾ ರೈ ಅಪಾರ ಸಂಪತ್ತಿನ ಒಡತಿಯೂ ಹೌದು. ಐಶ್ವರ್ಯಾ ರೈ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು. ಐಶ್ವರ್ಯಾ ರೈ ಪ್ರಸ್ತುತ ತಮ್ಮ ವೈಯಕ್ತಿಕ ಜೀವನದಿಂದ ಸುದ್ದಿಯಲ್ಲಿದ್ದಾರೆ. ಐಶ್ವರ್ಯಾ 2007ರಲ್ಲಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು. ಅದಕ್ಕೂ ಮೊದಲು ಸಲ್ಮಾನ್ ಖಾನ್ ಜೊತೆ ಅವರು ಡೇಟಿಂಗ್ ನಡೆಸಿದ್ದರು. ಆದರೆ, ಆ ಬಳಿಕ ಇಬ್ಬರೂ ಬೇರ್ಪಟ್ಟರು. ಈಗ ಅಭಿಷೇಕ್ ಜೊತೆ ಅವರು ವಿಚ್ಛೇದನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಭಿನ್ನಾಭಿಪ್ರಾಯವಿದೆ ಎನ್ನಲಾಗಿದೆ. ಐಶ್ವರ್ಯಾ ರೈ ಅಭಿಷೇಕ್ ಮನೆಯಿಂದ ಹೊರಟು ಹೋಗಿದ್ದು ಕೂಡ ಈ ನಡುವೆ ಚರ್ಚೆಯಾಗಿತ್ತು. ಆದರೆ, ಈ ಬಗ್ಗೆ ಯಾರೂ ಪ್ರತಿಕ್ರಿಯೆ ನೀಡಿಲ್ಲ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಮಗಳು ಆರಾಧ್ಯ ಬಚ್ಚನ್ ಜೊತೆ ಆಗಮಿಸಿದರು ಐಶ್ವರ್ಯಾ ರೈ. ಈ ಮೂಲಕ ಬಚ್ಚನ್ ಕುಟುಂಬದ ಜೊತೆ ಅಂತರ ಕಾಯ್ದುಕೊಂಡಿದ್ದಾರೆ. ಮದುವೆಯ ಹಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ.

ಇದೀಗ ಅನಂತ್ ಅಂಬಾನಿ ಮದುವೆಯ ನಂತರ ಐಶ್ವರ್ಯ ರೈ ನೇರವಾಗಿ ಮುಂಬೈ ವಿಮಾನ ನಿಲ್ದಾಣ ತಲುಪಿದ್ದಾರೆ. ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ಬಾರಿಯೂ ಅಭಿಷೇಕ್ ಬಚ್ಚನ್ ಇರಲಿಲ್ಲ. ಆರಾಧ್ಯ ಬಚ್ಚನ್ ಪಾಪರಾಜಿಗಳನ್ನು ನೋಡಿ ನಗು ಚೆಲ್ಲಿದ್ದಾರೆ.

ಐಶ್ವರ್ಯಾ ರೈ ಮಗಳ ಜೊತೆ ವಿದೇಶಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ಅಭಿಷೇಕ್ ಬಚ್ಚನ್ ಇವರೊಂದಿಗೆ ಇಲ್ಲ. ಕೆಲವೇ ದಿನಗಳ ಹಿಂದೆ ಐಶ್ವರ್ಯಾ ರೈ ಮತ್ತು ಆರಾಧ್ಯ ಬಚ್ಚನ್ ವಿದೇಶಕ್ಕೆ ಹೋಗಿದ್ದರು. ಈಗ  ಅವರು ಮತ್ತೊಮ್ಮೆ ವಿದೇಶಕ್ಕೆ ತೆರಳಿ ಸುದ್ದಿ ಆಗಿದ್ದಾರೆ.

ಇದನ್ನೂ ಓದಿ: ಐಶ್ವರ್ಯಾ ರೈಯಿಂದ ಸಲ್ಮಾನ್ ಖಾನ್​ವರೆಗೆ; ಜಾಹೀರಾತುಗಳಿಂದ ಬಣ್ಣದ ಬದುಕು ಆರಂಭಿಸಿದವರು..

ಅಂಬಾನಿ ಕಾರ್ಯಕ್ರಮ ಮುಗಿದ ತಕ್ಷಣ ಐಶ್ವರ್ಯಾ ರೈ ವಿದೇಶಕ್ಕೆ ತೆರಳಿದ್ದಾರೆ. ಐಶ್ವರ್ಯಾ ರೈ ಮತ್ತು ಆರಾಧ್ಯ ಬಚ್ಚನ್ ಅವರ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳಿಗೆ ಅಭಿಮಾನಿಗಳು ಕೂಡ ಭಾರೀ ಕಮೆಂಟ್ ಮಾಡುತ್ತಿರುವುದು ಕಂಡು ಬರುತ್ತಿದೆ. ವಿಚ್ಛೇದನದ ಮಾತುಕತೆಗಳ ಬಗ್ಗೆ ಐಶ್ವರ್ಯಾ ಮಾತನಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.