ಬೆಂಗಳೂರು: ‘ಮೀನು ಹಿಡಿದಿದ್ದಾರೆ, ತಿಮಿಂಗಿಲ ಹಿಡಿಯೋದು ಬಾಕಿ ಇದೆ’ ಎಂದು ಬೆಂಗಳೂರಿನಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಡ್ರಗ್ಸ್ ಕೇಸ್ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಇಂದ್ರಜಿತ್ ಲಂಕೇಶ್ಗೆ ನಿನ್ನೆ ಸಿಸಿಬಿ ನೋಟೀಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಇಂದ್ರಜಿತ್ ಆಗಮಿಸಿದ್ದರು. ಆದ್ರೆ ಇಂದು ವಿಚಾರಣೆ ನಡೆದಿಲ್ಲ. ಬೇರೊಂದು ದಿನ ನಿಗದಿ ಮಾಡಿ ವಿಚಾರಣೆಗೆ ಬರುವಂತೆ ಸೂಚಿಸುತ್ತೇವೆಂದು ಸಿಸಿಬಿ ತಿಳಿಸಿದೆ.
ಈ ವೇಳೆ ಮಾತನಾಡಿದ ಇಂದ್ರಜಿತ್ ಲಂಕೇಶ್ ಮೀನು ಹಿಡಿದಿದ್ದಾರೆ, ತಿಮಿಂಗಿಲ ಹಿಡಿಯೋದು ಬಾಕಿ ಇದೆ. ಸ್ಯಾಂಡಲ್ವುಡ್ನ ನಟಿಯರು ಡ್ರಗ್ ಪೆಡ್ಲರ್ಗಳಷ್ಟೇ ಅಲ್ಲ, ಡ್ರಗ್ಸ್ ದಂಧೆಯಲ್ಲಿ ಇನ್ನೂ ಹಲವರು ಇದ್ದಾರೆ ಎಂದು ಹೇಳಿದ್ರು.
ಡಿಸಿಪಿ ಬಸವರಾಜ್ ನಿನ್ನೆ ಕರೆ ಮಾಡಿ ಕರೆದ್ರು. ನಾನು ಕಳೆದ 6 ತಿಂಗಳಿನಿಂದ ಪೊಲೀಸರಿಗೆ ಸಹಕಾರ ನೀಡಿದ್ದೇನೆ. ತನಿಖೆಯಲ್ಲಿ ಕೋಟ್ಯಾಂತರ ಮೌಲ್ಯದ ಡ್ರಗ್ ವಶಪಡಿಸಿಕೊಂಡಿದ್ದಾರೆ. ಸಣ್ಣ ಮೀನನ್ನ ಹಿಡಿದಿದ್ದಾರೆ ದೊಡ್ಡ ತಿಮಿಂಗಿಲ ಹಿಡಿಯೋದು ಬಾಕಿ ಇದೆ. ಪೊಲೀಸರು ತನಿಖೆ ಮಾಡ್ತಿದ್ದಾರೆ ಇನ್ನೂ ಚುರುಕುಗೊಳಿಸ್ತಾರೆ. ನನಗೂ ಹಲವು ವಿಷಯಗಳು ಬಂದಿವೆ. ಒಬ್ಬ ವ್ಯಕ್ತಿಯಾಗಿ, ನಿರ್ದೇಶಕನಾಗಿ ನಾನು ಮಾಹಿತಿಯನ್ನ ಕೊಡಬಹುದಷ್ಟೆ.
ಸ್ಯಾಂಡಲ್ವುಡ್ನ ನಟಿಯರು ಡ್ರಗ್ ಪೆಡ್ಲರ್ಗಳಷ್ಟೇ ಅಲ್ಲ, ಡ್ರಗ್ಸ್ ದಂಧೆಯಲ್ಲಿ ಇನ್ನೂ ಹಲವರು ಇದ್ದಾರೆ. ಈ ಹಿಂದೆ ಪೊಲೀಸರ ಕೈಗೆ ಸಿಕ್ಕಿದ್ದವರು ಈಗ ಆರಾಮಾಗಿದ್ದಾರೆ. ರಾಜಕಾರಣಿಗಳು, ನಿರ್ದೇಶಕ, ನಿರ್ಮಾಪಕರ ಮಕ್ಕಳ ಹೆಸರು ಈ ಕೇಸ್ನಲ್ಲಿ ಕೇಳಿ ಬಂದಿದೆ. ಇದು ರಾಜಕೀಯ ವಿಚಾರವಲ್ಲ, ಸದನದಲ್ಲಿ ಚರ್ಚೆ ಆಗಬೇಕು. ವೈಯಕ್ತಿಕವಾಗಿ ನಾನು ಯಾರ ಮೇಲೂ ಆರೋಪ ಮಾಡ್ತಿಲ್ಲ ಎಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದ್ರಜಿತ್ ಲಂಕೇಶ್ ಹೇಳಿದ್ರು.
ಸರಿಯಾದ ರೀತಿಯಲ್ಲಿ ತನಿಖೆ ಆದರೆ ಹೆಣಗಳು ಕೂಡ ಎದ್ದು ಕೂರಲಿವೆ -ಇಂದ್ರಜಿತ್ ಲಂಕೇಶ್
Published On - 3:30 pm, Thu, 28 January 21