Genelia Deshmukh: ಮತ್ತೆ ಕಂಬ್ಯಾಕ್​ ಮಾಡೋಕೆ ಜೆನಿಲಿಯಾ ರೆಡಿ; ಪತಿ ರಿತೇಶ್​​​ ಏನಂದ್ರು?

| Updated By: Digi Tech Desk

Updated on: May 07, 2021 | 9:22 AM

Genelia D'Souza: ಜೆನಿಲಿಯಾ ಎರಡು ಮಕ್ಕಳ ತಾಯಿ ಆದರೂ ಅವರು ಫಿಟ್​ನೆಸ್​ ಕಳೆದುಕೊಂಡಿಲ್ಲ. ನಿತ್ಯ ಜಿಮ್​ ಮಾಡುತ್ತಾರೆ. ಈ ಮೂಲಕ ತಮ್ಮ ಫಿಟ್​ನೆಸ್​ ಕಾಯ್ದುಕೊಂಡಿದ್ದಾರೆ.

Genelia Deshmukh: ಮತ್ತೆ ಕಂಬ್ಯಾಕ್​ ಮಾಡೋಕೆ ಜೆನಿಲಿಯಾ ರೆಡಿ; ಪತಿ ರಿತೇಶ್​​​ ಏನಂದ್ರು?
ಪತಿ ರಿತೇಶ್​ ಜತೆ ಜೆನೆಲಿಯಾ
Follow us on

ನಟಿ ಜೆನಿಲಿಯಾ ಡಿಸೋಜಾ 2012ರಲ್ಲಿ ಬಾಲಿವುಡ್​ ನಟ ರಿತೇಶ್​​ ದೇಶಮುಖ್​ ಅವರನ್ನು ಮದುವೆ ಆಗಿದ್ದರು. ಅದಾದ ನಂತರ ಅವರು ಕೆಲವೇ ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡಿದ್ದು ಬಿಟ್ಟರೆ ಮತ್ತಾವುದೇ ಚಿತ್ರಗಳಲ್ಲಿ ಜೆನಿಲಿಯಾ ಬಣ್ಣ ಹಚ್ಚಿಲ್ಲ. ಈಗ ಅವರು ಕಂಬ್ಯಾಕ್​ ಮಾಡೋಕೆ ರೆಡಿ ಆಗಿದ್ದಾರೆ! ಈ ವಿಚಾರ ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ.

ಜೆನಿಲಿಯಾ ಮದುವೆ ಆಗಿ ಸುಮಾರು 9 ವರ್ಷ ಕಳೆದಿದೆ. ಜೆನಿಲಿಯಾ ಹಾಗೂ ರಿತೇಶ್​ ಜೋಡಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಜೆನಿಲಿಯಾ ಹಾಗೂ ರಿತೇಶ್​ ಸಾಕಷ್ಟು ​ ವಿಡಿಯೋಗಳನ್ನು ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಿದೆ. ಈಗ ಅವರು ಸಿನಿಮಾ ಕ್ಷೇತ್ರದಲ್ಲಿ ಸೆಕೆಂಡ್​ ಇನ್ನಿಂಗ್ಸ್​ ಪ್ರಾರಂಭಿಸೋಕೆ ರೆಡಿ ಆಗಿದ್ದಾರೆ.

ಜೆನಿಲಿಯಾ ಚಿತ್ರರಂಗಕ್ಕೆ ಮರಳಬೇಕು ಎನ್ನುವ ಹಂಬಲವನ್ನು ಪತಿ ರಿತೇಶ್​ ಬಳಿ ವ್ಯಕ್ತಪಡಿಸಿದ್ದಳು. ಇದಕ್ಕೆ ರಿತೇಶ್​ ಕೂಡ ಒಕೆ ಎಂದಿದ್ದಾರೆ. ಹೀಗಾಗಿ ಉತ್ತಮ ಕಥೆ ಸಿಕ್ಕರೆ ಅವರು ಮತ್ತೆ ನಟನೆಗೆ ಕಂಬ್ಯಾಕ್​ ಮಾಡಲಿದ್ದಾರೆ.

ನಟಿ ಜೆನಿಲಿಯಾ ಹಿಂದಿ ಮಾತ್ರವಲ್ಲ ದಕ್ಷಿಣ ಭಾರತದಲ್ಲೂ ನಟಿಸಿದ್ದಾರೆ. ತೆಲುಗು ಚಿತ್ರರಂಗ ಅವರ ಸಿನೆಮಾ ಕೆರಿಯರ್​ಗೆ ದೊಡ್ಡ ಬ್ರೇಕ್​ ನೀಡಿತ್ತು. ಹೀಗಾಗಿ, ಈಗ ಅವರು ಹಿಂದಿ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಂಬ್ಯಾಕ್​ ಮಾಡುತ್ತಾರೋ ಅಥವಾ ತೆಲುಗು ಚಿತ್ರರಂಗದ ಮೂಲಕವೋ ಎನ್ನುವುದನ್ನು ಕಾದು ನೋಡಬೇಕಿದೆ.

ಜೆನಿಲಿಯಾ ಎರಡು ಮಕ್ಕಳ ತಾಯಿ ಆದರೂ ಅವರು ಫಿಟ್​ನೆಸ್​ ಕಳೆದುಕೊಂಡಿಲ್ಲ. ನಿತ್ಯ ಜಿಮ್​ ಮಾಡುತ್ತಾರೆ. ಈ ಮೂಲಕ ತಮ್ಮ ಫಿಟ್​ನೆಸ್​ ಕಾಯ್ದುಕೊಂಡಿದ್ದಾರೆ. ಹೀಗಾಗಿ, ಅವರು ಚಿತ್ರರಂಗಕ್ಕೆ ಮರಳೋಕೆ ಸಾಕಷ್ಟು ಉತ್ಸುಕರಾಗಿದ್ದಾರಂತೆ.

ಇದನ್ನೂ ಓದಿ: ನಟ ಕಿಚ್ಚ ಸುದೀಪ್ ಮನೆಯಲ್ಲಿ ಭೋಜನ ಸವಿದ ಬಾಲಿವುಡ್ ಕ್ಯೂಟ್ ಕಪಲ್

Published On - 7:44 pm, Thu, 6 May 21