Bigg Boss 8: ಬಿಗ್​ ಬಾಸ್​​​ನಿಂದ ಅರ್ಧಕ್ಕೆ ಹೊರಹೋದ ದಿವ್ಯಾ ಉರುಡುಗ ಹಿಂದಿರುಗಿ ಬರಲ್ಲ?

Divya Uruduga: ಶುಭಾ ಮನೆಯಲ್ಲಿ ಅಳುತ್ತಲೇ ದಿನ ಕಳೆದಿದ್ದಾರೆ. ದಿವ್ಯಾ ಒಬ್ಬಳೇ ನನಗೆ ಅಕ್ಕಾ ಎಂದು ಕರೆದಿದ್ದು. ಮನೆ ತುಂಬಾನೇ ಸೈಲೆಂಟ್​ ಆಗುತ್ತಿದೆ. ಈಗ ಮತ್ತೂ ಶಾಂತವಾದಂತೆ ಭಾಸವಾಗುತ್ತಿದೆ ಎಂದರು ಶುಭಾ.

Bigg Boss 8: ಬಿಗ್​ ಬಾಸ್​​​ನಿಂದ ಅರ್ಧಕ್ಕೆ ಹೊರಹೋದ ದಿವ್ಯಾ ಉರುಡುಗ ಹಿಂದಿರುಗಿ ಬರಲ್ಲ?
ದಿವ್ಯಾ ಉರುಡುಗ
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:May 07, 2021 | 9:20 AM

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಹೀಗಾಗಿ, ಅವರಿಗೆ ಚಿಕಿತ್ಸೆ ನೀಡಲು ಕರೆದುಕೊಂಡು ಹೋಗಲಾಗಿದೆ. ಈಗ ಕೇಳಿ ಬರುತ್ತಿರುವ ಮಾತೇನೆಂದರೆ ದಿವ್ಯಾ ಹಿಂದಿರುಗಿ ಬಿಗ್​ ಬಾಸ್​ ಮನೆಗೆ ಬರುವುದಿಲ್ಲವಂತೆ. ಹೀಗೆಂದು ನಾವು ಹೇಳುತ್ತಿಲ್ಲ. ಅರವಿಂದ್​ ಕೆ.ಪಿ. ಅವರೇ ಹೀಗೆ ಹೇಳಿಕೊಂಡಿದ್ದಾರೆ.

ದಿವ್ಯಾ ಸುರೇಶ್​​ಗೆ ಚಿಕಿತ್ಸೆ ನೀಡಲು ವೈದ್ಯರ ಬಳಿಗೆ ಕರೆದುಕೊಂಡು ಹೋಗಲಾಗಿದೆ. ಇದರಿಂದಾಗಿ ಅರವಿಂದ್ ಬೇಸರ ಮಾಡಿಕೊಂಡಿದ್ದಾರೆ. ಮೇ 6ರ ಎಪಿಸೋಡ್​ನಲ್ಲಿ ಬಿಗ್ ಬಾಸ್ ಕಡೆಯಿಂದ ಇನ್ನೊಂದು ಆದೇಶ ಬಂದಿದೆ. ದಿವ್ಯಾ ಉರುಡುಗ ಅವರ ಸ್ಯೂಟ್​ಕೇಸ್​ ಪ್ಯಾಕ್ ಮಾಡಿ ಕೂಡಲೇ ಸ್ಟೋರ್ ರೂಮ್​ಗೆ ತಂದು ಇರಿಸಿ ಎಂದು ಸೂಚಿಸಲಾಗಿದೆ. ಇದು ಮನೆಯವರಿಗೆ ಶಾಕ್​ ನೀಡಿದೆ.

ಬಟ್ಟೆ ಪ್ಯಾಕ್​ ಮಾಡಿ ತನ್ನಿ ಎಂದು ಹೇಳಿದ್ದನ್ನು ಮನೆಯವರಿಗೆ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅವರು ಮತ್ತೆ ಮನೆಗೆ ಬರೋದು ಅನುಮಾನ ಎನ್ನುವ ಮಾತು ಕೇಳಿ ಬಂದವು. ಇದು ಅರವಿಂದ್​ಗೂ ಮನವರಿಕೆ ಆದಂತಿದೆ. ಚಕ್ರವರ್ತಿ ಚಂದ್ರಚೂಡ್​ ಬಳಿ ಮಾತನಾಡುತ್ತಾ, ದಿವ್ಯಾ ಕಂಡೀಷನ್​ ನೋಡಿದ್ರೆ ಅವರು ಮತ್ತೆ ಬರೋದು ಡೌಟ್​ ಇದೆ ಎನ್ನುತ್ತಲೇ ಕಣ್ಣೀರಾದರು.

ಶುಭಾ ಮನೆಯಲ್ಲಿ ಅಳುತ್ತಲೇ ದಿನ ಕಳೆದಿದ್ದಾರೆ. ದಿವ್ಯಾ ಒಬ್ಬಳೇ ನನಗೆ ಅಕ್ಕಾ ಎಂದು ಕರೆದಿದ್ದು. ಮನೆ ತುಂಬಾನೇ ಸೈಲೆಂಟ್​ ಆಗುತ್ತಿದೆ. ಈಗ ಮತ್ತೂ ಶಾಂತವಾದಂತೆ ಭಾಸವಾಗುತ್ತಿದೆ ಎಂದರು ಶುಭಾ. ಒಬ್ಬರನ್ನೊಬ್ಬರು ಪರಸ್ಪರ ಸಮಾಧಾನ ಮಾಡಿಕೊಳ್ಳಲು ಪ್ರಯತ್ನಿಸಿದರು.

ಈಗ ಅವರಿಗೆ ಟ್ರೀಟ್​ಮೆಂಟ್​ ಕೊಡ್ತಿದಾರೆ. ಅವರಿಗೆ ರೆಸ್ಟ್​ ಮಾಡೋಕೆ ಹೇಳಿರಬಹುದು. ಒಂದು ವಾರ ಬಿಟ್ಟು ಬಿಗ್​ ಬಾಸ್​ ಮನೆಗೆ ಅವರು ಬಂದರೂ ಬರಬಹುದು ಎನ್ನುವ ಮಾತು ಕೂಡ ಬಿಗ್​ ಬಾಸ್​ ಮನೆಯಲ್ಲಿ ಕೇಳಿ ಬಂತು. ದಿವ್ಯಾ ಹೋದ ನಂತರದಲ್ಲಿ ಅರವಿಂದ್​ ತುಂಬಾನೇ ಸೈಲೆಂಟ್​ ಆಗಿದ್ದು ಎದ್ದು ಕಾಣುತ್ತಿದೆ.

ಇದನ್ನೂ ಒದಿ: ದಿವ್ಯಾ ಮಾಡಿದ ತಪ್ಪಿಗೆ ಮಂಜುಗೆ ಶಿಕ್ಷೆ; ಗಳಗಳನೆ ಅತ್ತ ಗೆಳತಿ

ಬಿಗ್​ ಬಾಸ್​ನಲ್ಲಿ ದಿವ್ಯಾ ಉರುಡುಗ ಲಗೇಜ್​ ಪ್ಯಾಕ್​; ಕಣ್ಣೀರು ಹಾಕುತ್ತಿರುವ ಅರವಿಂದ್​

Published On - 7:17 am, Fri, 7 May 21

ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ