ಡಿವೋರ್ಸ್ ಸೂಚನೆ ಕೊಟ್ಟ ‘ಘಜಿನಿ’ ನಟಿ ಆಸಿನ್; ಉದ್ಯಮಿ ಜೊತೆಗಿನ ದಾಂಪತ್ಯ ಅಂತ್ಯ?

Asin Thottumkal: ಆಸಿನ್ ಅವರು ಮೈಕ್ರೋಮ್ಯಾಕ್ಸ್ ಫೌಂಡರ್ ರಾಹುಲ್ ಶರ್ಮಾ ಅವರನ್ನು 2016ರಲ್ಲಿ ಮದುವೆ ಆದರು. ನಂತರ ಅವರು ಚಿತ್ರರಂಗಕ್ಕೆ ಗುಡ್​ಬೈ ಹೇಳಿದರು. ಈಗ ಇವರು ಬೇರೆ ಆಗುತ್ತಿದ್ದಾರೆ ಎನ್ನಲಾಗಿದೆ.

ಡಿವೋರ್ಸ್ ಸೂಚನೆ ಕೊಟ್ಟ ‘ಘಜಿನಿ’ ನಟಿ ಆಸಿನ್; ಉದ್ಯಮಿ ಜೊತೆಗಿನ ದಾಂಪತ್ಯ ಅಂತ್ಯ?
ಆಸಿನ್-ರಾಹುಲ್ ಶರ್ಮಾ

Updated on: Jun 28, 2023 | 10:48 AM

ಸೆಲೆಬ್ರಿಟಿಗಳ ವಲಯದಲ್ಲಿ ವಿಚ್ಛೇದನ ಅನ್ನೋದು ಸರ್ವೇ ಸಾಮಾನ್ಯ ಆಗಿದೆ. ಇತ್ತೀಚೆಗಂತೂ ಹಲವು ಸೆಲೆಬ್ರಿಟಿ ಜೋಡಿಗಳು ದಾಂಪತ್ಯ ಕೊನೆಗೊಳಿಸಿಕೊಂಡಿದ್ದಾರೆ. ಸಾಲಿಗೆ ಈ ನಟಿ ಆಸಿನ್ ಕೂಡ ಸೇರ್ಪಡೆ ಆಗುತ್ತಾರೆ ಎನ್ನುವ ಮಾತು ಜೋರಾಗಿದೆ. ಆಸಿನ್ (Asin) ಅವರು ತಮಿಳು ಹಾಗೂ ಹಿಂದಿ  ‘ಘಜಿನಿ’ (Ghajini) ಸಿನಿಮಾ ಮೂಲಕ ಜನಪ್ರಿಯತೆ ಪಡೆದರು. ಮದುವೆ ಬಳಿಕ ಸಂಪೂರ್ಣವಾಗಿ ಚಿತ್ರರಂಗದಿಂದ ದೂರವೇ ಇದ್ದ ಅವರು ಈಗ ಫ್ಯಾನ್ಸ್​ಗೆ ಬೇಸರದ ಸುದ್ದಿ ನೀಡುವ ಸನಿಹದಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅವರ ಕಡೆಯಿಂದ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಆಸಿನ್ ಅವರು ಮೈಕ್ರೋಮ್ಯಾಕ್ಸ್ ಫೌಂಡರ್ ರಾಹುಲ್ ಶರ್ಮಾ ಅವರನ್ನು 2016ರಲ್ಲಿ ಮದುವೆ ಆದರು. ನಂತರ ಅವರು ಚಿತ್ರರಂಗಕ್ಕೆ ಗುಡ್​ಬೈ ಹೇಳಿದರು. 2015ರಲ್ಲಿ ರಿಲೀಸ್ ಆದ ‘ಆಲ್ ಈಸ್ ವೆಲ್’ ಚಿತ್ರದ ಬಳಿಕ ಅವರು ನಟನೆಯತ್ತ ಮುಖ ಮಾಡಿಲ್ಲ. ಈಗ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ರಾಹುಲ್ ಶರ್ಮಾ ಜೊತೆಗಿನ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಇದು ಸಾಕಷ್ಟು ಅಚ್ಚರಿ ಮೂಡಿಸಿದೆ.

ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನಕ್ಕೂ ಮೊದಲು ಇದೇ ರೀತಿಯ ಬೆಳವಣಿಗೆ ನಡೆದಿತ್ತು. ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಸರು ಬದಲಿಸಿಕೊಂಡಿದ್ದರು. ‘ಸಮಂತಾ ಅಕ್ಕಿನೇನಿ’ ಎಂಬ ಹೆಸರನ್ನು ‘ಸಮಂತಾ ರುತ್ ಪ್ರಭು’ ಎಂದು ಬದಲಾಯಿಸಿಕೊಂಡಿದ್ದರು. ಆ ಬಳಿಕ ಪತಿ ಜೊತೆಗಿನ ಫೋಟೋ ಡಿಲೀಟ್ ಮಾಡಿದ್ದರು. ಚಿರಂಜೀವಿ ಕುಟುಂಬದ ಮಗಳು ನಿಹಾರಿಕಾ ನಡೆ ಕೂಡ ಇದೇ ರೀತಿ ಇದೆ. ಈ ಸಾಲಿಗೆ ಆಸಿನ್ ಕೂಡ ಸೇರುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ: ರಶ್ಮಿಕಾ, ಸಮಂತಾ ಅಲ್ಲ.. ದಕ್ಷಿಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ..

ಮದುವೆಯ ಫೋಟೋಗಳನ್ನು ಆಸಿನ್ ಹಂಚಿಕೊಂಡಿದ್ದರು. ಅದನ್ನೂ ಡಿಲೀಟ್ ಮಾಡಿದ್ದಾರೆ. ಈ ಕಾರಣಕ್ಕೆ ಇಬ್ಬರೂ ಬೇರೆ ಆಗುತ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.  ಆಸಿನ್ ಹಾಗೂ ರಾಹುಲ್ ಬೇರೆ ಆಗುವ ವಿಚಾರವನ್ನು ಫ್ಯಾನ್​ ಪೇಜ್​ಗಳಲ್ಲಿ ಚರ್ಚೆ ಮಾಡಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.  ಇವರು ಬೇರೆ ಆಗುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ತಿಳಿಯುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:47 am, Wed, 28 June 23