Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲಯಾಳಂ ಚಿತ್ರರಂಗದ ಕರಾಳ ಮುಖ ತೆರೆದಿಟ್ಟ ಹೇಮಾ ಸಮಿತಿ ವರದಿ

Malayalam Cinema: ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿ-ಗತಿ ಅರಿಯಲು ರಚಿಸಲಾಗಿದ್ದ ಹೇಮಾ ಸಮಿತಿಯ ವರದಿಯನ್ನು ಕೊನೆಗೂ ಕೇರಳ ಸರ್ಕಾರ ಪ್ರಕಟಿಸಿದ್ದು, ಕೆಲವು ಆಘಾತಕಾರಿ ಅಂಶಗಳು ಹೊರಬಂದಿವೆ.

ಮಲಯಾಳಂ ಚಿತ್ರರಂಗದ ಕರಾಳ ಮುಖ ತೆರೆದಿಟ್ಟ ಹೇಮಾ ಸಮಿತಿ ವರದಿ
Follow us
ಮಂಜುನಾಥ ಸಿ.
|

Updated on:Aug 20, 2024 | 8:08 AM

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿ ಗತಿ ಬಗ್ಗೆ ಅಧ್ಯಯನ ನಡೆಸಿರುವ ಹೇಮಾ ವರದಿಯನ್ನು ಇತ್ತೀಚೆಗಷ್ಟೆ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಲ್ಲಿಸಲಾಯ್ತು. 2017ರಲ್ಲಿ ಮಲಯಾಳಂ ನಟಿಯೊಬ್ಬರ ಮೇಲೆ ಸ್ಟಾರ್ ನಟನೊಬ್ಬನ ಚೇಲಾಗಳಿಂದ ಅತ್ಯಾಚಾರ ಯತ್ನ ನಡೆದ ಬಳಿಕ ಹೇಮಾ ನಿಗಮವನ್ನು ರಚಿಸಲಾಗಿತ್ತು. ಮಾಜಿ ಹೈಕೋರ್ಟ್ ಜಡ್ಜ್ ಹೇಮಾ, ನಿವೃತ್ತ ಐಎಎಸ್ ಅಧಿಕಾರಿ, ಹಿರಿಯ ನಟಿ ಶಾರದಾ ಇನ್ನಿತರರನ್ನು ಈ ಸಮಿತಿ ಒಳಗೊಂಡಿತ್ತು. 2019ರಲ್ಲಿಯೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತಾದರೂ ಸೂಕ್ಷ್ಮ ಅಂಶಗಳನ್ನು ವರದಿ ಒಳಗೊಂಡಿದ್ದರಿಂದ ಸರ್ಕಾರ ಅದನ್ನು ಬಹಿರಂಗಪಡಿಸಿರಲಿಲ್ಲ. ಬಳಿಕ ಹಲವು ಆರ್​ಟಿಐ ಅರ್ಜಿಗಳು ಹಾಗೂ ನ್ಯಾಯಾಲಯದ ಸೂಚನೆ ಮೇರೆಗೆ ಈಗ ಬಹಿರಂಗಪಡಿಸಲಾಗಿದೆ.

ಹೇಮಾ ವರದಿಯಲ್ಲಿ ಮಲಯಾಳಂ ಚಿತ್ರರಂಗದ ಕರಾಳ ಮುಖ ಬಯಲಾಗಿದೆ. ಹಲವು ಸಿನಿಮಾ ನಟಿಯರು ಅನುಭವಿಸಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಹಿಂದಿನ ರಾತ್ರಿ ಯಾವ ನಟನಿಂದ ಲೈಂಗಿಕ ದೌರ್ಜನ್ಯ ಎದುರಿಸಿದ್ದರೋ ಅದೇ ನಟನ ಜೊತೆಗೆ ಬೆಳೆಗೆದ್ದು ಪತಿ-ಪತ್ನಿಯಾಗಿ ನಟಿಸಬೇಕಿತ್ತು. ನನಗೆ ಪ್ರೀತಿಯಿಂದ ನಟಿಸಲು ಸಾಧ್ಯವಾಗದೆ 17 ಟೇಕ್ ತೆಗೆದುಕೊಂಡೆ ಕೊನೆಗೆ ಸಿನಿಮಾದ ನಿರ್ದೇಶಕ ಹಾಗೂ ನಟನಿಂದ ಬೈಸಿಕೊಂಡೆ’ ಎಂದು ನಟಿಯೊಬ್ಬರು ಹೇಮಾ ಸಮಿತಿಯ ಮುಂದೆ ಹೇಳಿಕೊಂಡಿದ್ದಾರೆ.

ಶೂಟಿಂಗ್ ಗೆ ಹೋದಾಗ ನಟಿಯರು ಇರುವ ಹೋಟೆಲ್​ ಕೊಠಡಿಗಳ ಬಾಗಿಲುಗಳನ್ನು ಪುರುಷರು ಬಡಿಯುತ್ತಾರೆ. ಆ ವೇಳೆಗೆ ಅವರೆಲ್ಲ ಚೆನ್ನಾಗಿ ಕುಡಿದಿರುತ್ತಾರೆ. ಒಮ್ಮೊಮ್ಮೆಯಂತೂ ಬಾಗಿಲು ಕಿತ್ತು ಬರುತ್ತದೇನೋ ಎಂಬಂತೆ ಬಾಗಿಲು ಬಡಿಯುತ್ತಾರೆ. ಇದೇ ಕಾರಣಕ್ಕೆ ನಾವು ಹೊರಗಡೆ ಶೂಟಿಂಗ್​ಗೆ ಹೋಗುವುದಿಲ್ಲ ಹೋದರೂ ನಮ್ಮ ಕುಟುಂಬದವರನ್ನು ಜೊತೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಕೆಲ ನಟಿಯರು ಹೇಳಿದ್ದಾರೆ.

ಇದನ್ನೂ ಓದಿ:ದಳಪತಿ ವಿಜಯ್ ಕೊನೆಯ ಚಿತ್ರಕ್ಕೆ ಮಲಯಾಳಂ ಸುಂದರಿ ಎಂಟ್ರಿ

ವರದಿಯಲ್ಲಿ ಉಲ್ಲೇಖಿಸಿರುವಂತೆ ಇಡೀ ಮಲಯಾಳಂ ಚಿತ್ರರಂಗ ಕೆಲ ಪುರುಷರ ಕೈಯಲ್ಲಿದೆ. ಕೆಲ ಸ್ಟಾರ್ ನಟರು, ನಿರ್ಮಾಪಕರು, ವಿತರಕರು ಚಿತ್ರರಂಗವನ್ನು ನಡೆಸುತ್ತಿದ್ದಾರೆ. ಇದು ಒಂದು ರೀತಿ ಪವರ್ ಹೌಸ್ ಸಿಸ್ಟಂ. ಇವರು ಹೇಳಿದವರಿಗೆ ಅವಕಾಶ ಸಿಗುತ್ತದೆ, ಇವರೊಟ್ಟಿಗೆ ‘ಚೆನ್ನಾಗಿದ್ದರೆ’ ಹೊಸ ಸಿನಿಮಾಗಳು, ಒಳ್ಳೆಯ ಸಂಭಾವನೆ ಸಿಗುತ್ತದೆ ಎಂದು ನಟಿಯರು ಹೇಳಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

ನಟಿಯರು ಸಾಕಷ್ಟು ಟೀಕೆ, ಮೂದಲಿಕೆಗಳನ್ನು ಚಿತ್ರರಂಗದಲ್ಲಿ ಎದುರಿಸುತ್ತಿದ್ದಾರಂತೆ. ಅನವಶ್ಯಕವಾಗಿ ಅಡ್ವಾನ್ಸ್ ಹಣ ನೀಡುವುದು, ಪರೋಕ್ಷವಾಗಿ ‘ಅಡ್ಜಸ್ಟ್​ಮೆಂಟ್​’ಗೆ ಕೇಳುವುದು. ಮಾತು ಕೇಳದಿದ್ದರೆ ಅವಕಾಶ ಸಿಗದಂತೆ ಮಾಡುವುದು ಇಂಥಹಾ ಹಲವು ಕೆಲಸಗಳು ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತವಂತೆ. ಇನ್ನೂ ಹಲವು ಅಂಶಗಳು ಈ ವರದಿಯಲ್ಲಿವೆ. ಹೇಮಾ ವರದಿ ಪ್ರಕಟವಾದ ಬಳಿಕ ಇದೀಗ ಭಾರತದ ಎಲ್ಲ ಚಿತ್ರರಂಗಗಳಲ್ಲಿಯೂ ಇಂಥಹಾ ಒಂದು ಸಮಿತಿ ರಚನೆಯಾಗಿ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಅಧ್ಯಯನ ಆಗಬೇಕೆಂಬ ಕೂಗು ಕೇಳಿ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:07 am, Tue, 20 August 24

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​