ಈ ವರ್ಷ ‘ಪಠಾಣ್​’ ಚಿತ್ರದ ಕಲೆಕ್ಷನ್ ಬೀಟ್ ಮಾಡಲು ರೆಡಿ ಆಗಿವೆ ಈ ಸಿನಿಮಾಗಳು

‘ಪಠಾಣ್​’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರದ ಭಾರತದ ಕಲೆಕ್ಷನ್ 400 ಕೋಟಿ ರೂಪಾಯಿ ದಾಟಿದೆ. ವಿಶ್ವ ಮಟ್ಟದಲ್ಲಿ ಚಿತ್ರದ ಕಲೆಕ್ಷನ್ 700 ಕೋಟಿ ರೂಪಾಯಿ ಆಗಿದೆ.

ಈ ವರ್ಷ ‘ಪಠಾಣ್​’ ಚಿತ್ರದ ಕಲೆಕ್ಷನ್ ಬೀಟ್ ಮಾಡಲು ರೆಡಿ ಆಗಿವೆ ಈ ಸಿನಿಮಾಗಳು
ಶಾರುಖ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on:Feb 07, 2023 | 11:31 AM

ಒಟಿಟಿ ಜಗತ್ತು ವಿಸ್ತಾರಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಸಿನಿಮಾಗಳು ಒಳ್ಳೆಯ ಕಲೆಕ್ಷನ್ ಮಾಡುವುದಿಲ್ಲ ಎನ್ನುವ ನಂಬಿಕೆ ಇತ್ತು. ಆದರೆ, ಹಲವು ಚಿತ್ರಗಳು ಈ ನಂಬಿಕೆಯನ್ನು ಸುಳ್ಳು ಮಾಡುತ್ತಿವೆ. 2022 ಬಾಲಿವುಡ್​ಗೆ ಅಷ್ಟು ಉತ್ತಮವಾಗಿರಲಿಲ್ಲ. ಆದರೆ, 2023ರ ಆರಂಭದಲ್ಲೇ ಬಾಲಿವುಡ್​ಗೆ ದೊಡ್ಡ ಯಶಸ್ಸು ಸಿಕ್ಕಿದೆ. ‘ಪಠಾಣ್​’ ಚಿತ್ರದಿಂದ (Pathaan Movie) ದೊಡ್ಡ ಗೆಲುವು ಒಲಿದಿದೆ. ಈ ಬಗ್ಗೆ ಅನೇಕರಿಗೆ ಖುಷಿ ಇದೆ. ‘ಕೆಜಿಎಫ್​ 2’ (KGF 2 Movie) ಮಾಡಿದ ದಾಖಲೆಗಳನ್ನು ನೋಡಿ ಅನೇಕರು ಅಚ್ಚರಿಗೊಂಡಿದ್ದರು. ಈ ದಾಖಲೆಯನ್ನು ‘ಪಠಾಣ್​’ ಸಿನಿಮಾ ಮುರಿದಿದೆ. ಈಗ ‘ಪಠಾಣ್ ದಾಖಲೆಯನ್ನು ಮುರಿಯಲು ಹಲವು ಸಿನಿಮಾಗಳು ರೆಡಿ ಇವೆ.

‘ಪಠಾಣ್​’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರದ ಭಾರತದ ಕಲೆಕ್ಷನ್ 400 ಕೋಟಿ ರೂಪಾಯಿ ದಾಟಿದೆ. ವಿಶ್ವ ಮಟ್ಟದಲ್ಲಿ ಚಿತ್ರದ ಕಲೆಕ್ಷನ್ 700 ಕೋಟಿ ರೂಪಾಯಿ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಸಿನಿಮಾ ಭಾರತದ ಗಳಿಕೆಯಲ್ಲಿ ‘ಕೆಜಿಎಫ್ 2’ ಚಿತ್ರವನ್ನು ಹಿಂದಿಕ್ಕುವ ಸಾಧ್ಯತೆ ಇದೆ. ಈಗ ‘ಪಠಾಣ್​’ ಚಿತ್ರದ ರೆಕಾರ್ಡ್​ ಮುರಿಯಲು ಕೆಲವು ಸಿನಿಮಾಗಳು ರೆಡಿ ಆಗಿವೆ.

ಶಾರುಖ್ ಖಾನ್ ನಟನೆಯ ‘ಜವಾನ್​’ ಹಾಗೂ ‘ಡಂಕಿ’ ಚಿತ್ರಗಳು ಈ ವರ್ಷ ತೆರೆಗೆ ಬರುತ್ತಿವೆ. ‘ಪಠಾಣ್​’ ಹಿಟ್ ಆಗಿರುವುದರಿಂದ ಅವರ ನಟನೆಯ ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತದೆ. ಹೀಗಾಗಿ, ಈ ಎರಡೂ ಚಿತ್ರಗಳು ಅಬ್ಬರದ ಕಲೆಕ್ಷನ್ ಮಾಡಬಹುದು. ಸಲ್ಮಾನ್ ಖಾನ್ ಅವರು ಹಿಂದಿ ಚಿತ್ರರಂಗದ ಬಾಕ್ಸ್ ಆಫೀಸ್ ಬಾದ್​​ಶಾ. ಅವರ ನಟನೆಯ ‘ಟೈಗರ್​ 3’ ಸಿನಿಮಾ ಈ ವರ್ಷ ರಿಲೀಸ್ ಆಗುತ್ತಿದೆ. ಈ ಚಿತ್ರದ ಗಳಿಕೆ ಎಷ್ಟಾಗಬಹುದು ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ: ‘ಮೂರ್ಖರು, ಮತಾಂಧರು ಬೊಗಳುತ್ತಾರೆ, ಕಚ್ಚಲ್ಲ’; ‘ಪಠಾಣ್​’ ಟೀಕಿಸಿದವರಿಗೆ ಪ್ರಕಾಶ್ ರಾಜ್ ತಿರುಗೇಟು

ತೆಲುಗಿನಲ್ಲಿ ‘ಸಲಾರ್’ ಸಿನಿಮಾ ಸಿದ್ಧಗೊಳ್ಳುತ್ತಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಇದಕ್ಕೆ ಕಾರಣ ನಿರ್ದೇಶಕ ಪ್ರಶಾಂತ್ ನೀಲ್​. ‘ಕೆಜಿಎಫ್ 2’ ಬಳಿಕ ಅವರ ನಿರ್ದೇಶನದ ‘ಸಲಾರ್​’ ತೆರೆಗೆ ಬರುತ್ತಿದೆ. ಈ ಕಾರಣಕ್ಕೆ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾ ಕೂಡ ‘ಪಠಾಣ್​’ ಕಲೆಕ್ಷನ್ ಬೀಟ್ ಮಾಡಬಹುದು. ಇನ್ನೂ ಅನೇಕ ಸ್ಟಾರ್​ ಚಿತ್ರಗಳು ರಿಲೀಸ್​ಗೆ ರೆಡಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:29 am, Tue, 7 February 23