ಸಿನಿಮಾ ಚೆನ್ನಾಗಿ ಮಾಡುವುದು ಮಾತ್ರವಲ್ಲ, ಪ್ರಚಾರವನ್ನೂ ಅಷ್ಟೇ ಚೆನ್ನಾಗಿ ಮಾಡಬೇಕು. ಈ ವಿಚಾರದಲ್ಲಿ ಪ್ರಶಾಂತ್ ನೀಲ್(Prashanth Neel) ಅವರಿಗೆ ತುಂಬ ಸ್ಪಷ್ಟತೆ ಇದೆ. ಪ್ರಭಾಸ್ ಜೊತೆ ಅವರು ಮಾಡಿರುವ ‘ಸಲಾರ್’ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದೆ. ಅದಕ್ಕೆ ತಕ್ಕಂತೆಯೇ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ. ಈ ಸಿನಿಮಾ ಮೇಲೆ ಪ್ರಭಾಸ್ (Prabhas) ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಸಲಾರ್’ ಸಿನಿಮಾವನ್ನು ಮೊದಲ ದಿನ ಮೊದಲ ಶೋ ನೋಡಬೇಕು ಎಂಬ ಆಸೆ ಎಲ್ಲರಿಗೂ ಇದೆ. ಆದರೆ ಟಿಕೆಟ್ ಸಿಗುವುದು ಅಷ್ಟು ಸುಲಭವಲ್ಲ. ಹಾಗಿದ್ದರೂ ಕೂಡ ‘ಹೊಂಬಾಳೆ ಫಿಲ್ಮ್ಸ್’ (Hombale Films) ಕಡೆಯಿಂದ ಒಂದು ಸುಲಭದ ದಾರಿ ತೋರಿಸಲಾಗಿದೆ. ಏನದು? ಇಲ್ಲಿದೆ ವಿವರ..
‘ಹೊಂಬಾಳೆ ಫಿಲ್ಮ್ಸ್’ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಹೊಸ ಫೋಟೋ ಹಂಚಿಕೊಳ್ಳಲಾಗಿದೆ. ಈ ಫೋಟೋಗೆ ಚಂದದ ಕ್ಯಾಪ್ಷನ್ ನೀಡಲು ಸೂಚಿಸಲಾಗಿದೆ. ಕಮೆಂಟ್ ಮಾಡುವ ಮೂಲಕ ಎಲ್ಲರೂ ಕ್ಯಾಪ್ಷನ್ ನೀಡಬಹುದು. ಅತ್ಯುತ್ತಮ ಕ್ಯಾಪ್ಷನ್ ನೀಡುವ 5 ಮಂದಿಗೆ ‘ಸಲಾರ್’ ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಲಾಗಿದೆ. ಅದಕ್ಕಾಗಿ ಅಭಿಮಾನಿಗಳು ಮುಗಿಬಿದ್ದು ಕಮೆಂಟ್ ಮಾಡುತ್ತಿದ್ದಾರೆ. ಒಂದು ಗಂಟೆಯೊಳಗೆ ಸಾವಿರಾರು ಕಮೆಂಟ್ಗಳು ಬಂದಿವೆ.
𝐂𝐀𝐏𝐓𝐈𝐎𝐍 𝐓𝐇𝐈𝐒.
The best 5 captions will get FDFS tickets in your nearest theater and exclusive #SalaarMerchandise 🎬💬#SalaarCeaseFire Trailer out Tomorrow at 7:19 PM 🔥#Prabhas #PrashanthNeel pic.twitter.com/xSvN8e16Ka
— Salaar (@SalaarTheSaga) November 30, 2023
‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್ ಮತ್ತು ಶ್ರುತಿ ಹಾಸನ್ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಎರಡು ಪಾರ್ಟ್ನಲ್ಲಿ ಮೂಡಿಬರುತ್ತಿದೆ. ಮೊದಲ ಪಾರ್ಟ್ ಡಿಸೆಂಬರ್ 22ರಂದು ಬಿಡುಗಡೆ ಆಗಲಿದೆ. ಅತ್ತ, ಬಾಲಿವುಡ್ನಲ್ಲಿ ಇದೇ ಸಮಯಕ್ಕೆ ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಕೂಡ ರಿಲೀಸ್ ಆಗಲಿರುವುದರಿಂದ ಪೈಪೋಟಿ ಜೋರಾಗಲಿದೆ. ಹಾಗಾಗಿ ‘ಸಲಾರ್’ ತಂಡದವರು ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಸಖತ್ ಹೈಪ್ ಸೃಷ್ಟಿ ಮಾಡಿದೆ.
ಇದನ್ನೂ ಓದಿ: ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರೀಕರಣ ಪ್ರಾರಂಭ ಯಾವಾಗ? ‘ನನಗೂ ಅವಕಾಶ ಕೊಡಿ’ ಎಂದ ಬಾಲಿವುಡ್ ಸ್ಟಾರ್ ನಟ
ಡಿಸೆಂಬರ್ 1ಕ್ಕೆ ಟ್ರೇಲರ್
‘ಸಲಾರ್’ ಸಿನಿಮಾದ ಕಥೆಯ ಬಗ್ಗೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಟ್ರೇಲರ್ ಬಿಡುಗಡೆಯಾದರೆ ಕಥೆಯ ಬಗ್ಗೆ ಒಂದು ಸುಳಿವು ಸಿಗಲಿದೆ. ಡಿಸೆಂಬರ್ 1ರಂದು ಸಂಜೆ 7.19ಕ್ಕೆ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಅವರು ಒಂದು ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ‘ಕೆಜಿಎಫ್: ಚಾಪ್ಟರ್ 2’ ರೀತಿಯೇ ಈ ಸಿನಿಮಾ ಕೂಡ ಅಬ್ಬರಿಸುವ ನಿರೀಕ್ಷೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.