AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದ್ಮ ಪ್ರಶಸ್ತಿ: ಚಿತ್ರರಂಗದ ಯಾವೆಲ್ಲ ಸಾಧಕರಿಗೆ ಸಿಕ್ಕಿತು ಗೌರವ?

Padma Awards 2026: ಕೇಂದ್ರ ಸರ್ಕಾರವು 2026ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ, ಹಲವಾರು ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ವ್ಯಕ್ತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತೆಯೇ ಕಲಾ ವಿಭಾಗದಲ್ಲಿ ಈ ಬಾರಿ ಹಲವು ಸಿನಿಮಾ ನಟ, ನಟಿಯರಿಗೆ ಪದ್ಮ ಪ್ರಶಸ್ತಿಗಳು ದೊರಕಿವೆ, ಇಲ್ಲಿದೆ ನೋಡಿ ಪಟ್ಟಿ...

ಪದ್ಮ ಪ್ರಶಸ್ತಿ: ಚಿತ್ರರಂಗದ ಯಾವೆಲ್ಲ ಸಾಧಕರಿಗೆ ಸಿಕ್ಕಿತು ಗೌರವ?
Padma 2026
ಮಂಜುನಾಥ ಸಿ.
|

Updated on:Jan 25, 2026 | 7:15 PM

Share

ಭಾರತದ ಅತ್ಯುತ್ತಮ ನಾಗರೀಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಪದ್ಮಶ್ರೀ, ಪದ್ಮ ಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರವು ಘೋಷಣೆ ಮಾಡಿದೆ. ಕಲೆ, ಸಮಾಜ ಸೇವೆ, ಸಾಹಿತ್ಯ, ಶಿಕ್ಷಣ, ಆಡಳಿತ, ವಿಜ್ಞಾನ, ಕ್ರೀಡೆ, ಉದ್ಯಮ, ವೈದ್ಯಕೀಯ ಕ್ಷೇತ್ರ ಹೀಗೆ ಹಲವು ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡಿರುವ ವ್ಯಕ್ತಿಗೆ ಈ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ನೀಡುತ್ತಾ ಬಂದಿದೆ. 2026ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಕಲಾ ವಿಭಾಗದಲ್ಲಿ ಈ ಬಾರಿ ಹಲವು ಸಿನಿಮಾ ನಟ, ನಟಿಯರಿಗೆ ಪದ್ಮ ಪ್ರಶಸ್ತಿಗಳು ದೊರಕಿವೆ, ಇಲ್ಲಿದೆ ನೋಡಿ ಪಟ್ಟಿ…

ನಟ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಧರ್ಮೇಂದ್ರ ಅವರು 2025ರ ನವೆಂಬರ್​​ನಲ್ಲಿ ನಿಧನ ಹೊಂದಿದರು. ತಮಿಳುನಾಡು ಮೂಲಕ ವೈಯಲಿನ್ ವಾದಕಿ ಎನ್ ರಾಜನ್ ಅವರಿಗೂ ಸಹ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಪದ್ಮ ವಿಭೂಷಣ ದೊರಕಿರುವ ಐವರಲ್ಲಿ ಕಲಾ ಕ್ಷೇತ್ರಕ್ಕೆ ಎರಡು ಪ್ರಶಸ್ತಿ ಬಂದಿರುವುದು ವಿಶೇಷ.

ಇದನ್ನೂ ಓದಿ:ರಾಜ್ಯ ಕಡಲೆ ಬೆಳೆಗಾರರ ಬೆನ್ನಿಗೆ ನಿಂತ ಕೇಂದ್ರ ಸರ್ಕಾರ, ಬೆಂಬಲ ಬೆಲೆ ಎಷ್ಟು?

ಒಟ್ಟು 13 ಪದ್ಮ ಭೂಷಣ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಅವುಗಳಲ್ಲಿ ನಾಲ್ಕು ಕಲಾ ವಿಭಾಗಕ್ಕೆ ನೀಡಲಾಗಿದೆ. ಹಿಂದಿ, ಕನ್ನಡ ಸೇರಿದಂತೆ ದೇಶದ ಹಲವಾರು ಭಾಷೆಗಳಲ್ಲಿ ಹಾಡಿರುವ ಗಾಯಕಿ ಅಲ್ಕಾ ಯಾಗ್ನಿಕ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ. ದೇಶದ ಅತ್ಯುತ್ತಮ ನಟ ಮತ್ತು ಅಪರೂಪದ ಸೂಪರ್ ಸ್ಟಾರ್ ಆಗಿರುವ ಮಲಯಾಳಂನ ಖ್ಯಾತ ನಟ ಮಮ್ಮುಟಿ ಅವರಿಗೆ ಪದ್ಮ ಭೂಷಣ ಗೌರವ ಧಕ್ಕಿದೆ. ಭಾರತದ ಜಾಹೀರಾತು ಕ್ಷೇತ್ರದ ದಿಗ್ಗಜ ಪಿಯೂಷ್ ಪಾಂಡೆ ಅವರಿಗೆ ಮರಣೋತ್ತರವಾಗಿ ಪದ್ಮ ಭೂಷಣ ಗೌರವ ಧಕ್ಕಿದೆ. ಇನ್ನು ಕರ್ನಾಟಕದ ಶತಾವಧಾನಿ ಗಣೇಶ್ ಅವರಿಗೆ ಕಲಾ ಕ್ಷೇತ್ರದ ಸಾಧನೆಗಾಗಿ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಗಿದೆ.

ತೆಲುಗಿನ ಹಿರಿಯ ನಟ ರಾಜೇಂದ್ರ ಪ್ರಸಾದ್ ಹಾಗೂ ಮಾಗಂಟಿ ಮುರಳಿ ಮೋಹನ್ ಸೇರಿದಂತೆ ಇನ್ನೂ ಕೆಲವು ಕಲಾವಿದರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಕಳೆದ ವರ್ಷ ಹಠಾತ್ತಾಗಿ ನಿಧನ ಹೊಂದಿದ ಬಾಲಿವುಡ್​ನ ಖ್ಯಾತ ನಟ, ನಿರ್ದೇಶಕ ಸತೀಶ್ ಶಾ ಅವರಿಗೂ ಸಹ ಮರೋಣತ್ತರ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Sun, 25 January 26