ಹೊಸ ಸಿನಿಮಾ ರಿಲೀಸ್ ವಿಚಾರದಲ್ಲಿ ಜೂ.ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ ಮಾಡಿದ ತಂತ್ರವೇನು?

| Updated By: ರಾಜೇಶ್ ದುಗ್ಗುಮನೆ

Updated on: Aug 10, 2024 | 1:05 PM

ಬಿಗ್ ಬಜೆಟ್ ಸಿನಿಮಾಗಳನ್ನು ಮಾಡುವಾಗ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಹೀಗಾಗಿ, ಪದೇ ಪದೇ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿಕೊಳ್ಳಬೇಕಾಗುತ್ತದೆ. ಇದು ಚಿತ್ರತಂಡಕ್ಕೂ ಮುಜುಗರ ತರುತ್ತದೆ. ಈ ರೀತಿ ಆಗಬಾರದು ಎಂದು ಜೂನಿಯರ್​ ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ ಆಲೋಚಿಸಿದಂತೆ ಇದೆ.

ಹೊಸ ಸಿನಿಮಾ ರಿಲೀಸ್ ವಿಚಾರದಲ್ಲಿ ಜೂ.ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ ಮಾಡಿದ ತಂತ್ರವೇನು?
ಪ್ರಶಾಂತ್ ನೀಲ್ ಹೊಸ ಸಿನಿಮಾದ ಮುಹೂರ್ತ
Follow us on

ಜೂನಿಯರ್​ ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್​ನಲ್ಲಿ ಸಿನಿಮಾ ಬರುತ್ತಿದೆ. ಈ ಬಗ್ಗೆ ಘೋಷಣೆ ಆಗಿ ಸಾಕಷ್ಟು ಸಮಯ ಕಳೆದಿದೆ. ಕೊನೆಗೂ ಈ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಶುಕ್ರವಾರ (ಆಗಸ್ಟ್ 9) ಹೈದರಾಬಾದ್​ನಲ್ಲಿ ‘ಮೈತ್ರಿ ಮೂವಿ ಮೇಕರ್ಸ್‌’ ನಿರ್ಮಾಣ ಸಂಸ್ಥೆ ಸಿಂಪಲ್ ಆಗಿ ಮುಹೂರ್ತ ನೆರವೇರಿಸಿದೆ. ಈ ಬಿಗ್ ಬಜೆಟ್ ಸಿನಿಮಾ 2026ರ ಜನವರಿ 9ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಜೂ. ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಮುಹೂರ್ತದ ಕುರಿತು ತಂಡ ಯಾವುದೇ ಪೂರ್ವ ಮಾಹಿತಿ ನೀಡಿರಲಿಲ್ಲ. ಜೂ.ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಚಿತ್ರದ ಉದ್ಘಾಟನಾ ಕಾರ್ಯಕ್ರಮದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.  ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಜೊತೆಗೆ ಕಲ್ಯಾಣ್ ರಾಮ್ ಮತ್ತು ಚಿತ್ರದ ನಿರ್ಮಾಪಕರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಬಿಗ್ ಬಜೆಟ್ ಸಿನಿಮಾಗಳನ್ನು ಮಾಡುವಾಗ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಹೀಗಾಗಿ, ಪದೇ ಪದೇ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿಕೊಳ್ಳಬೇಕಾಗುತ್ತದೆ. ಇದು ಚಿತ್ರತಂಡಕ್ಕೂ ಮುಜುಗರ ತರುತ್ತದೆ. ಈ ರೀತಿ ಆಗಬಾರದು ಎಂದು ಜೂನಿಯರ್​ ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ ಆಲೋಚಿಸಿದಂತೆ ಇದೆ. ಈ ಕಾರಣದಿಂದಲೇ ಸಿನಿಮಾ ಕೆಲಸಕ್ಕೆ ಒಂದೂವರೆ ವರ್ಷವನ್ನು ತಂಡ ತೆಗೆದುಕೊಳ್ಳುತ್ತಿದೆ.

ಸಂಕ್ರಾಂತಿ ಎಂದರೆ ದಕ್ಷಿಣ ಭಾರತದವರಿಗೆ ಸಖತ್ ವಿಶೇಷ. ಈ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡಿದರೆ ಸಾಕಷ್ಟು ಹೈಪ್ ಸಿಗಲಿದೆ. ಈಗ 2026ರ ಸಂಕ್ರಾತಿ ಡೇಟ್​ನ ಪ್ರಶಾಂತ್ ನೀಲ್ ತಂಡದವರು ಮೊದಲೇ ಲಾಕ್ ಮಾಡಿರುವುದರಿಂದ ಉಳಿದವರು ಸಿನಿಮಾ ರಿಲೀಸ್ ಮಾಡಲು ಆಲೋಚಿಸುತ್ತಾರೆ. ಈ ತಂತ್ರವೂ ಇದರಲ್ಲಿ ಇದೆ. ತೆಲುಗು ಜೊತೆಗೆ, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

ಇದನ್ನೂ ಓದಿ: ಜೂ ಎನ್​ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಮುಹೂರ್ತ, ಬಿಡುಗಡೆ ದಿನಾಂಕವೂ ಘೋಷಣೆ

ಈ ಚಿತ್ರವನ್ನು ಕಲ್ಯಾಣ್ ರಾಮ್ ನಂದಮೂರಿ, ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ ಮತ್ತು ಹರಿಕೃಷ್ಣ ಕೊಸರಾಜು ಅವರು ಮೈತ್ರಿ ಮೂವೀ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ‘ಕೆಜಿಎಫ್‌’, ‘ಸಲಾರ್‌’ ಖ್ಯಾತಿಯ ಭುವನ್ ಗೌಡ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದು, ರವಿ ಬಸ್ರೂರ್ ಸಂಗೀತ ಸಂಯೋಜಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.