ಕೊನೆಯ ಹಂತದಲ್ಲಿ ಎಡವಿದ ನಮ್ರತಾ ಗೌಡ;  ಎಲಿಮಿನೇಷನ್​ಗೆ ಕಾರಣವಾದ ವಿಚಾರಗಳೇನು?

ನಮ್ರತಾ ಗೌಡ ಆರಂಭದಲ್ಲಿ ವಿನಯ್ ಅವರ ನೆರಳಿನಲ್ಲಿದ್ದರು. ಹೀಗಾಗಿ ಅವರಿಗೆ ಚಮಚ ಎನ್ನುವ ಕುಖ್ಯಾತಿ ಸಿಕ್ಕಿತು. ಇದಾದ ಬಳಿಕ ಅವರು ವಿನಯ್ ಅವರಿಂದ ಅಂತರ ಕಾಯ್ದುಕೊಂಡರು. ಈ ಕಾರಣಕ್ಕೇ ಅವರು ಶೈನ್ ಆದರು.

ಕೊನೆಯ ಹಂತದಲ್ಲಿ ಎಡವಿದ ನಮ್ರತಾ ಗೌಡ;  ಎಲಿಮಿನೇಷನ್​ಗೆ ಕಾರಣವಾದ ವಿಚಾರಗಳೇನು?
ನಮ್ರತಾ

Updated on: Jan 22, 2024 | 7:15 AM

ನಟಿ ನಮ್ರತಾ ಗೌಡ (Namratha Gowda) ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಫಿನಾಲೆ ವಾರಕ್ಕೆ ಒಂದು ದಿನ ಇರುವಾಗ ಅವರು ಔಟ್ ಆಗಿದ್ದಾರೆ. ಇದು ಅವರಿಗೆ ಸಾಕಷ್ಟು ಬೇಸರ ಮೂಡಿಸಿದೆ. ಅವರ ಅಭಿಮಾನಿಗಳು ಕೂಡ ಇದರಿಂದ ಬೇಸರ ಮಾಡಿಕೊಂಡಿದ್ದಾರೆ. ಅವರು ಎಲಿಮಿನೇಷನ್ ಆಗಲು ಸಾಕಷ್ಟು ಕಾರಣಗಳಿವೆ. ಕೊನೆಯ ವಾರದಲ್ಲಿ ಅವರು ಎಡವಿದ್ದು, ಫಿನಾಲೆ ಕನಸು ನುಚ್ಚು ನೂರಾಗಿದೆ.

ನಮ್ರತಾ ಗೌಡ ಆರಂಭದಲ್ಲಿ ವಿನಯ್ ಅವರ ನೆರಳಿನಲ್ಲಿದ್ದರು. ಹೀಗಾಗಿ ಅವರಿಗೆ ಚಮಚ ಎನ್ನುವ ಕುಖ್ಯಾತಿ ಸಿಕ್ಕಿತು. ಇದಾದ ಬಳಿಕ ಅವರು ವಿನಯ್ ಅವರಿಂದ ಅಂತರ ಕಾಯ್ದುಕೊಂಡರು. ಈ ಕಾರಣಕ್ಕೇ ಅವರು ಶೈನ್ ಆದರು. ಅವರಿಗೆ ಉತ್ತಮ, ಕಿಚ್ಚನ ಚಪ್ಪಾಳೆ ಹಾಗೂ ಕ್ಯಾಪ್ಟನ್ ಆಗುವ ಅವಕಾಶ ಸಿಕ್ಕಿತು. ಆದರೆ, ಇತ್ತೀಚೆಗೆ ಕಾರ್ತಿಕ್ ಜೊತೆ ನಡೆದ ಜಗಳ ಅವರಿಗೆ ಹಿನ್ನಡೆ ತಂದಿದೆ ಎನ್ನಲಾಗಿದೆ.

ಕಾರ್ತಿಕ್ ಜೊತೆಗಿನ ಫ್ರೆಂಡ್​​ಶಿಪ್ ಕೆಟ್ಟದಾಗಿ ಕಾಣುತ್ತಿದೆ ಎಂದು ಅನೇಕರು ಹೇಳಿದ್ದರು. ಇದನ್ನು ನಮ್ರತಾ ಗಂಭೀರವಾಗಿ ಪರಿಗಣಿಸಿದರು. ಕಾರ್ತಿಕ್ ಜೊತೆ ಅವರು ಜಗಳಕ್ಕೆ ಇಳಿದರು. ಇದು ಅವರ ಬಿಗ್ ಬಾಸ್ ಜರ್ನಿಗೆ ಹಿನ್ನಡೆ ಉಂಟು ಮಾಡಿತು. ಇತ್ತೀಚಿಗೆ ಅವರು ಸೇಫ್ ಆಟ ಆಡುತ್ತಿದ್ದಾರೆ ಎಂದು ಕೂಡ ಕೆಲವರು ಹೇಳಿದ್ದರು. ಇದು ಸುಳ್ಳು ಎಂದು ಸಾಬೀತು ಮಾಡಿಕೊಳ್ಳೋಕೆ ಅವರಿಗೆ ಸಾಧ್ಯವಾಗಿಲ್ಲ.

ಇದನ್ನೂ ಓದಿ: ಬಿಗ್ ಬಾಸ್ ಎಲಿಮಿನೇಷನ್​ನಲ್ಲಿ ಇರಲಿದೆ ಟ್ವಿಸ್ಟ್; ಯಾವಾಗ ಹೊರ ಹೋಗಲಿದ್ದಾರೆ ಇಬ್ಬರು ಸ್ಪರ್ಧಿಗಳು?

ನಮ್ರತಾ ಗೌಡ ಅವರು ಹೋಗುವಾಗ ಕಣ್ಣೀರು ಹಾಕಿದ್ದಾರೆ. ಸಂಗೀತಾ ಹಾಗೂ ವಿನಯ್​ನ ಹಗ್ ಮಾಡಿ ದುಃಖ ತೋಡಿಕೊಂಡಿದ್ದಾರೆ. ಎಲ್ಲರಿಗೂ ಆಲ್​ ದಿ ಬೆಸ್ಟ್ ಹೇಳಿ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ನಮ್ರತಾ ಅವರಿಗೆ ‘ಬಿಗ್ ಬಾಸ್​’ನಿಂದ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರ ಹಿಂಬಾಲಕರ ಸಂಖ್ಯೆಯೂ ಹೆಚ್ಚಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 7:03 am, Mon, 22 January 24