ಬಿಗ್​ಬಾಸ್​ನಿಂದ ಜೀವನದಲ್ಲಿ ದೊಡ್ಡ ಬದಲಾವಣೆ: ಸುದೀಪ್ ಎದುರು ತನಿಷಾ ಭಾವುಕ

Bigg Boss Kannada: ವಾರದ ಮಧ್ಯಭಾಗದಲ್ಲಿಯೇ ಎಲಿಮಿನೇಟ್ ಆಗಿದ್ದ ತನಿಷಾ, ಭಾನುವಾರದ ಎಪಿಸೋಡ್​ನಲ್ಲಿ ವೇದಿಕೆ ಬಂದರು. ಬಿಗ್​ಬಾಸ್​ನಿಂದ ತಮ್ಮ ಜೀವನದಲ್ಲಿ ಆಗಿರುವ ದೊಡ್ಡ ಬದಲಾವಣೆ ಬಗ್ಗೆ ಹೇಳುತ್ತಾ ಭಾವುಕರಾದರು. ಏನದು ಬದಲಾವಣೆ?

ಬಿಗ್​ಬಾಸ್​ನಿಂದ ಜೀವನದಲ್ಲಿ ದೊಡ್ಡ ಬದಲಾವಣೆ: ಸುದೀಪ್ ಎದುರು ತನಿಷಾ ಭಾವುಕ
Follow us
ಮಂಜುನಾಥ ಸಿ.
|

Updated on: Jan 21, 2024 | 11:40 PM

ಬಿಗ್​ಬಾಸ್ (BiggBoss) ಮನೆಯಿಂದ ಈ ವಾರ ಇಬ್ಬರು ಎಲಿಮಿನೇಟ್ ಆಗಿದ್ದಾರೆ. ವಾರಾಂತ್ಯದಲ್ಲಿ ನಮ್ರತಾ ಎಲಿಮಿನೇಟ್ ಆದರೆ ವಾರದ ಮಧ್ಯದಲ್ಲಿ ತನಿಷಾ ಎಲಿಮಿನೇಟ್ ಆಗಿದ್ದರು. ತನಿಷಾರ ಎಲಿಮಿನೇಷನ್ ಪ್ರೇಕ್ಷಕರ ಜೊತೆಗೆ ಅವರಿಗೂ ಬಹಳ ಶಾಕಿಂಗ್ ಆಗಿದ್ದಾಗಿತ್ತು. ಎಲಿಮಿನೇಷನ್​ನಿಂದ ತೀವ್ರ ದುಃಖಿತವಾಗಿದ್ದ ತನಿಷಾ, ಮನೆಯ ಸದಸ್ಯರಿಗೆ ಸರಿಯಾಗಿ ವಿದಾಯ ಹೇಳದೆ, ಎಲ್ಲರಿಗೂ ಪರೋಕ್ಷವಾಗಿ ಬೈದು ಹೊರಗೆ ಬಂದಿದ್ದರು. ವೇದಿಕೆಗೆ ಕರೆಸದೆ ಎಲಿಮಿನೇಟ್ ಮಾಡುತ್ತೀದ್ದೀರೆಂದು ಬೇಸರ ಹೊರಹಾಕಿದ್ದರು. ಇದೀಗ ಈ ವಾರಾಂತ್ಯದಲ್ಲಿ ತನಿಷಾರನ್ನು ವೇದಿಕೆ ಕರೆಸಲಾಗಿತ್ತು.

ಈ ವಾರ ನಮ್ರತಾ ಎಲಿಮಿನೇಟ್ ಆದರಾದರೂ ವೇದಿಕೆಗೆ ಬಂದಿದ್ದು ತನಿಷಾ. ವೇದಿಕೆಗೆ ಬರಮಾಡಿಕೊಂಡ ಸುದೀಪ್, ಎಲ್ಲರಿಗೂ ಬೈದು ಬಂದುಬಿಟ್ಟಿರಲ್ಲಾ ಎಂದರು. ಅದಕ್ಕೆ ತಮ್ಮದೇ ಆದ ಕಾರಣ ಕೊಟ್ಟರು ತನಿಷಾ. ಬಳಿಕ ಅವರ ಜರ್ನಿ ವಿಡಿಯೋ ತೋರಿಸಲಾಯ್ತು. ಆರಂಭದಲ್ಲಿ ತಮಾಷೆಯಾಗಿ ನಗುತ್ತಾ ಮಾತನಾಡುತ್ತಿದ್ದ ತನಿಷಾ ಬಳಿಕ ಭಾವುಕರಾಗಿಬಿಟ್ಟರು. ಬಿಗ್​ಬಾಸ್​ನಿಂದ ತಮ್ಮ ಜೀವನದಲ್ಲಿ ಆಗಿರುವ ದೊಡ್ಡ ಬದಲಾವಣೆ ಬಗ್ಗೆ ತನಿಷಾ ಹೇಳಿಕೊಂಡರು.

ಇದನ್ನೂ ಓದಿ:ಈ ಸೀಸನ್​ನಲ್ಲಿ ಬಿಗ್​ಬಾಸ್ ಮನೆಗೆ ಬಂದ ಅತಿಥಿಗಳ್ಯಾರು? ಇಲ್ಲಿದೆ ಪಟ್ಟಿ

ಮುಂಚೆ ನಾನು ಎಲ್ಲೇ ಹೋದರು ಇವಳು ವಿವಾದ ಸೃಷ್ಟಿ ಮಾಡುತ್ತಾಳೆ, ಹಣ ಕೊಟ್ಟರೆ ಎಂಥಹಾ ಪಾತ್ರವಾದರೂ ಮಾಡುತ್ತಾಳೆ. ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾಳೆ ಎಂಬ ಅಭಿಪ್ರಾಯ ನನ್ನ ಬಗ್ಗೆ ಇತ್ತು. ಇನ್​ಸ್ಟಾಗ್ರಾಂನಲ್ಲಿ ಅಂತೂ ನನಗೆ ಬಹಳ ದ್ವೇಷವೇ ಸಿಗುತ್ತಿತ್ತು, ಬಹಳ ಕೆಟ್ಟ, ನೀಚ ಕಮೆಂಟ್​ಗಳನ್ನು ಹಾಕುತ್ತಿದ್ದರು. ಒಳ್ಳೆಯ ಸೀರೆ ಉಟ್ಟುಕೊಂಡು ಫೊಟೊ ಹಾಕಿದರೂ ಸಹ ನನಗೆ ಕೆಟ್ಟ ಕಮೆಂಟ್​ಗಳೇ ಬರುತ್ತಿದ್ದವು. ಅದು ಒಂದು ರೀತಿ ಅಭ್ಯಾಸವೇ ಆಗಿ ಹೋಗಿತ್ತು. ಆದರೆ ಈಗ ಬಿಗ್​ಬಾಸ್​ನಿಂದ ಹೊರಗೆ ಬಂದು ನೋಡಿದಾಗ ನನಗೆ ಆಶ್ಚರ್ಯವಾಗಿದೆ ಎಂದರು.

ನನ್ನ ಇನ್​ಸ್ಟಾಗ್ರಾಂನಲ್ಲಿ, ಕಲರ್ಸ್ ವಾಹಿನಿಯ ಇನ್​ಸ್ಟಾಗ್ರಾಂನಲ್ಲಿ ನನ್ನ ಬಗ್ಗೆ ಅದೆಷ್ಟು ಪಾಸಿಟಿವ್ ಆದ ಕಮೆಂಟ್​ಗಳಿವೆ. ಇದು ನಿಜವಾ ಎನ್ನಿಸುವಷ್ಟು ಒಳ್ಳೆಯ ಕಮೆಂಟ್​ಗಳು ಬಂದಿವೆ. ಇಷ್ಟು ದಿನ ನನಗೆ ನಾನು ಅಂದುಕೊಂಡಿದ್ದೆ ನಾನು ಪಾಸಿಟಿವ್ ವ್ಯಕ್ತಿ ಎಂದು. ಆದರೆ ಜನರೇ ಈಗ ಹೇಳುತ್ತಿದ್ದಾರೆ ತನಿಷಾ ಪಾಸಿಟಿವ್ ವ್ಯಕ್ತಿ ಎಂದು. ಇದು ನಿಜಕ್ಕೂ ನನಗೆ ಆಶ್ಚರ್ಯ ತಂದಿದೆ. ಇದು ಬಿಗ್​ಬಾಸ್ ಗೆದ್ದಿದ್ದಕ್ಕಿಂತಲೂ ಹೆಚ್ಚಿಗೆ ಖುಷಿ ಆಗಿದೆ. ಇದಕ್ಕಾಗಿ ನಾನು ಬಿಗ್​ಬಾಸ್ ತಂಡಕ್ಕೆ ಜೀವನ ಪೂರ್ತಿ ಚಿರಋಣಿ ಆಗಿರುತ್ತೀನಿ ಎಂದರು.

ಯಾರು ಗೆಲ್ಲಬೇಕು ಎಂದು ಕೇಳಿದ್ದಕ್ಕೆ ನನ್ನ ಮನಸ್ಸಿಗೆ ಕಾರ್ತಿಕ್ ಗೆಲ್ಲಲಿ ಎಂದಿದೆ. ಆದರೆ ಸಂಗೀತಾ ಗೆಲ್ಲುತ್ತಾರೆ. ಹಾಗೂ ಫಿನಾಲೆಗೆ ವಿನಯ್ ಹಾಗೂ ಸಂಗೀತಾ ಬರುತ್ತಾರೆ ಎಂದರು ತನಿಷಾ. ಸುದೀಪ್, ತನಿಷಾರ ನಿರ್ಮಾಣ ಸಂಸ್ಥೆಗೆ ಹಾಗೂ ಅವರು ಲಾಂಚ್ ಮಾಡುತ್ತಿರುವ ಆಭರಣ ಬ್ರ್ಯಾಂಡ್​ಗೆ ಶುಭಾಶಯಗಳನ್ನು ತಿಳಿಸಿ ಬೀಳ್ಕೊಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್