AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಹಾಲಿವುಡ್​ಗೆ ಹೊರಟ ಧನುಶ್, ಸಿಡ್ನಿ ಸ್ವೀನಿಗೆ ನಾಯಕ

Dhanush: ತಮಿಳಿನ ಸ್ಟಾರ್ ನಟ ಧನುಶ್​ಗೆ ಭಾಷೆಗಳ ಗಡಿಗಳಿಲ್ಲ. ಈಗಾಗಲೆ ಹಿಂದಿ, ತೆಲುಗು, ಒಂದು ಮಲಯಾಳಂ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಹಾಲಿವುಡ್​ ಸಿನಿಮಾಗಳಲ್ಲಿಯೂ ಧನುಶ್ ಈಗಾಗಲೇ ನಟಿಸಿದ್ದಾರೆ. ಇದೀಗ ಹೊಸದೊಂದು ಹಾಲಿವುಡ್ ಸಿನಿಮಾದಲ್ಲಿ ಧನುಶ್ ನಟಿಸಲಿದ್ದು, ಸಿನಿಮಾದಲ್ಲಿ ಹಾಲಿವುಡ್ ಸ್ಟಾರ್ ನಟಿ ನಾಯಕಿ.

ಮತ್ತೆ ಹಾಲಿವುಡ್​ಗೆ ಹೊರಟ ಧನುಶ್, ಸಿಡ್ನಿ ಸ್ವೀನಿಗೆ ನಾಯಕ
ಧನುಶ್
ಮಂಜುನಾಥ ಸಿ.
|

Updated on: Dec 11, 2024 | 5:34 PM

Share

ತಮಿಳಿನ ಸ್ಟಾರ್ ನಟ ಧನುಶ್​ಗೆ ಅಸಲಿಗೆ ಭಾಷೆಯ ಗಡಿಗಳಿಲ್ಲ. ತಮಿಳು ನಟರಾಗಿದ್ದರೂ ಸಹ ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಿ ದೊಡ್ಡ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಧನುಶ್ ಹಾಲಿವುಡ್​ನಲ್ಲಿ ಸ್ಟಾರ್ ನಟರುಗಳೊಟ್ಟಿಗೆ ಈಗಾಗಲೇ ನಟಿಸಿ ಬಂದಿದ್ದಾರೆ. ಹಾಲಿವುಡ್​ನಲ್ಲಿ ಒಂದು ಸೋಲೋ ಹೀರೋ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಇದೀಗ ಧನುಶ್​ ಮತ್ತೊಮ್ಮೆ ಹಾಲಿವುಡ್​ಗೆ ಹಾರಲಿದ್ದಾರೆ. ಈ ಬಾರಿ ಖ್ಯಾತ ನಟಿಯ ಎದುರು ನಾಯಕನಾಗಿ ನಟಿಸಲಿದ್ದಾರೆ ಧನುಶ್.

2019 ರಲ್ಲಿ ಬಿಡುಗಡೆ ಆದ ‘ದಿ ಎಕ್ಸಾರ್ಡಿನರಿ ಜರ್ನಿ ಆಫ್ ಎ ಫಕೀರ್’ ಹೆಸರಿನ ಇಂಗ್ಲೀಷ್ ಸಿನಿಮಾನಲ್ಲಿ ಧನುಶ್ ನಟಿಸಿದ್ದರು. ಅದಾದ ಬಳಿಕ ಮಾರ್ವೆಲ್ ಖ್ಯಾತಿಯ ರೋಸ್ಸೊ ಬ್ರದರ್ಸ್ ನಿರ್ದೇಶನ ಮಾಡಿ, ನಿರ್ಮಾಣವೂ ಮಾಡಿದ್ದ, ಹಾಲಿವುಡ್​ನ ದೊಡ್ಡ ಸ್ಟಾರ್ ನಟರು ನಟಿಸಿದ್ದ ‘ದಿ ಗ್ರೇ ಮ್ಯಾನ್’ ಸಿನಿಮಾದ ಪವರ್​ಫುಲ್ ಪಾತ್ರವೊಂದರಲ್ಲಿ ಧನುಶ್ ನಟಿಸಿದ್ದರು. ಇದೀಗ ಮೂರನೇ ಬಾರಿಗೆ ಧನುಶ್ ಹಾಲಿವುಡ್​ಗೆ ಹೊರಟಿದ್ದಾರೆ.

ಧನುಶ್, ‘ಸ್ಟ್ರೀಟ್ ಫೈಟರ್’ ಹೆಸರಿನ ಹಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾವನ್ನು ಸೋನಿ ನಿರ್ಮಾಣ ಮಾಡಲಿದ್ದು, ಹಾಲಿವುಡ್​ನ ಜನಪ್ರಿಯ ನಿರ್ದೇಶಕರೊಬ್ಬರು ನಿರ್ದೇಶನ ಮಾಡಲಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ಹಾಲಿವುಡ್ ಖ್ಯಾತ ನಟಿ ಸಿಡ್ನಿ ಸ್ವೀನಿ ನಟಿಸಲಿದ್ದಾರೆ. ಕ್ವಿಂಟನ್ ಟೆರಂಟೀನೊ ನಿರ್ದೇಶನದ ‘ಒನ್ಸ್​ ಅಪಾನ್ ಎ ಟೈಂ ಇನ್ ಹಾಲಿವುಡ್’ ಸಿನಿಮಾ ಸೇರಿದಂತೆ ಹಲವು ಜನಪ್ರಿಯ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:ನಟ ಧನುಶ್-ಐಶ್ವರ್ಯಾ ವಿಚ್ಛೇದನ, 20 ವರ್ಷದ ದಾಂಪತ್ಯ ಅಂತ್ಯ

ಧನುಶ್ ಪ್ರಸ್ತುತ ‘ಕುಬೇರ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾವನ್ನು ಶೇಖರ್ ಕಮ್ಮುಲ ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ನಾಗಾರ್ಜುನ ಮತ್ತು ರಶ್ಮಿಕಾ ಮಂದಣ್ಣ ಸಹ ಇದ್ದಾರೆ. ಧನುಶ್ ‘ಇಡ್ಲಿ ಕಡೈ’ ಹೆಸರಿನ ಸಿನಿಮಾ ನಿರ್ದೇಶನ ಸಹ ಮಾಡುತ್ತಿದ್ದಾರೆ. ಇಳಯರಾಜ ಜೀವನ ಆಧರಿಸಿದ ಸಿನಿಮಾದಲ್ಲಿಯೂ ಧನುಶ್ ನಟಿಸಲಿದ್ದು, ಸಿನಿಮಾವನ್ನು ಅರುಲ್ ಮಟ್ಟೇಶ್ವರನ್ ನಿರ್ದೇಶನ ಮಾಡಲಿದ್ದಾರೆ. ಹಿಂದಿಯಲ್ಲಿ ಸಹ ಒಂದು ಸಿನಿಮಾ ಮಾಡುತ್ತಿದ್ದು, ‘ರಾಂಝನಾ’ ಮಾಡಿದ್ದ ತಂಡವೇ ಈ ಸಿನಿಮಾಕ್ಕಾಗಿ ಮತ್ತೆ ಒಟ್ಟಿಗೆ ಸೇರಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ