ಖ್ಯಾತ ಕಿರುತೆರೆ ನಟ ಜೇಮ್ಸ್ ಮೈಕೆಲ್ ಟೈಲರ್ ನಿಧನರಾಗಿದ್ದಾರೆ. ಅಮೆರಿಕ ಕಿರುತೆರೆಯ ಕಾಮಿಡಿ ಸೀರಿಯಲ್ ‘ಫ್ರೆಂಡ್ಸ್’ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದ ಅವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಜೇಮ್ಸ್ ಮೈಕೆಲ್ ಟೈಲರ್ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅವರಿಗೆ 59 ವರ್ಷ ವಯಸ್ಸಾಗಿತ್ತು. ಲಾಸ್ ಏಂಜಲಿಸ್ನ ತಮ್ಮ ನಿವಾಸದಲ್ಲಿ ಭಾನುವಾರ (ಅ.24) ಅವರು ಕೊನೆಯುಸಿರೆಳೆದರು. ಈ ಸುದ್ದಿ ಅವರ ಅಭಿಮಾನಿಗ ಬಳಗಕ್ಕೆ ತೀವ್ರ ನೋವು ಉಂಟುಮಾಡಿದೆ. ಆಪ್ತರು, ಸೆಲೆಬ್ರಿಟಿಗಳು ಜೇಮ್ಸ್ ಮೈಕೆಲ್ ಟೈಲರ್ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.
1994ರಿಂದ 2004ರವರೆಗೆ 10 ಸೀಸನ್ಗಳಲ್ಲಿ ‘ಫ್ರೆಂಡ್ಸ್’ ಸೀರಿಯಲ್ ಪ್ರಸಾರವಾಯಿತು. 150ಕ್ಕೂ ಹೆಚ್ಚು ಎಪಿಸೋಡ್ಗಳಲ್ಲಿ ಜೇಮ್ಸ್ ಮೈಕೆಲ್ ಟೈಲರ್ ಕಾಣಿಸಿಕೊಂಡಿದ್ದರು. ಅವರು ನಿಭಾಯಿಸಿದ್ದ ಕಾಫಿ ಶಾಪ್ ಮ್ಯಾನೇಜರ್ ಗಂತರ್ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿತ್ತು.
ಜೇಮ್ಸ್ ಮೈಕೆಲ್ ಟೈಲರ್ ಅವರಿಗೆ ಕ್ಯಾನ್ಸರ್ ಇರುವುದು 2018ರಲ್ಲಿ ತಿಳಿದು ಬಂದಿತ್ತು. ಅಂದಿನಿಂದಲೂ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಕಡೆಗೂ ಅವರು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ನಟನಾಗಿ ಮಾತ್ರವಲ್ಲದೇ, ಸಂಗೀತಗಾರನಾಗಿ, ಕ್ಯಾನ್ಸರ್ ಅಡ್ವಕೇಟ್ ಆಗಿಯೂ ಗುರುತಿಸಿಕೊಂಡಿದ್ದರು.
ಇದನ್ನೂ ಓದಿ:
ಪಬ್ನಲ್ಲಿ ಪಾತ್ರೆ ತೊಳೆಯುತ್ತಿದ್ದ ಯುವಕ ‘ಸ್ಪೈಡರ್ ಮ್ಯಾನ್’ ಆದ; ನಟ ಟಾಮ್ ಹಾಲೆಂಡ್ ಲೈಫ್ ಸ್ಟೋರಿ