Indiana Jones: ಸಿನಿಮಾದಲ್ಲಿ ನಾಯಕ ತೊಟ್ಟಿದ್ದ ಟೋಪಿ 5 ಕೋಟಿಗೆ ಹರಾಜು
Indiana Jones: ಭಾರತದಲ್ಲಿ ಚಿತ್ರೀಕರಣವಾದ ಹಾಲಿವುಡ್ ಸಿನಿಮಾ ಇಂಡಿಯಾನಾ ಜೋನ್ಸ್ ಸಿನಿಮಾದ ಟೋಪಿಯನ್ನು ಹರಾಜು ಹಾಕಲಾಗಿದ್ದು, ಬರೋಬ್ಬರಿ 5.28 ಕೋಟಿ ರೂಪಾಯಿಗೆ ಹರಾಜಾಗಿದೆ.
ಸಿನಿಮಾಗಳಲ್ಲಿ ಬಳಸಲಾಗುವ ವಸ್ತುಗಳನ್ನು ಹರಾಜು ಹಾಕುವ ಸಂಪ್ರದಾಯ ಹಾಲಿವುಡ್ನಲ್ಲಿದೆ. ಭಾರತದಲ್ಲಿಯೂ ಇದೆ. ಭಾರತದ ಜನಪ್ರಿಯ ಸಿನಿಮಾಗಳಲ್ಲಿ ಬಳಕೆ ಆಗಿರುವ ಹಲವು ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಆಗಾಗ್ಗೆ ಇವು ಹರಾಜು ಸಹ ಆಗಿವೆ. ಇದೀಗ ಹಾಲಿವುಡ್ನ ಜನಪ್ರಿಯ ಸಿನಿಮಾದಲ್ಲಿ ನಾಯಕ ತೊಟ್ಟಿದ್ದ ಟೋಪಿಯನ್ನು ಹರಾಜು ಹಾಕಲಾಗಿದ್ದು, ಈ ಹಳೆಯ ಟೋಪಿ ಬರೋಬ್ಬರಿ 5.28 ಕೋಟಿ ರೂಪಾಯಿಗೆ ಹರಾಜಾಗಿದೆ.
ಭಾರತದಲ್ಲಿ ಚಿತ್ರೀಕರಣವಾಗಿದ್ದ ಬ್ಲಾಕ್ ಬಸ್ಟರ್ ಹಾಲಿವುಡ್ ಸಿನಿಮಾ ‘ಇಂಡಿಯಾನಾ ಜೋನ್ಸ್ ಆಂಡ್ ದಿ ಟೆಂಪಲ್ ಆಫ್ ಡೂಮ್’ ಸಿನಿಮಾದಲ್ಲಿ ನಾಯಕ ಧರಿಸಿದ್ದ ಟೋಪಿ ಬಹಳ ಜನಪ್ರಿಯವಾಗಿತ್ತು. ಆ ಟೋಪಿ ಅಥವಾ ಹ್ಯಾಟ್ ಅನ್ನು ಇದೀಗ ಹರಾಜು ಹಾಕಲಾಗಿದ್ದು ಸಿನಿಮಾ ಪ್ರೇಮಿಯೊಬ್ಬರು ಬರೋಬ್ಬರಿ 5.28 ಕೋಟಿ ರೂಪಾಯಿ ಹಣ ಖರೀದಿ ಮಾಡಿದ್ದಾರೆ.
‘ಇಂಡಿಯಾನಾ ಜೋನ್ಸ್ ಆಂಡ್ ದಿ ಟೆಂಪಲ್ ಆಫ್ ಡೂಮ್’ ಸಿನಿಮಾದ ನಾಯಕನ ಪಾತ್ರದಲ್ಲಿ ನಟಿಸಿರುವ ಖ್ಯಾತ ನಟ ಹ್ಯಾರಿಸನ್ ಫೋರ್ಡ್, ಇಡೀ ಸಿನಿಮಾದಲ್ಲಿ ಹ್ಯಾಟ್ ಒಂದನ್ನು ತೊಟ್ಟಿರುತ್ತಾರೆ. ಯಾವುದೇ ವಿಶೇಷ ಡಿಸೈನ್ ಇಲ್ಲದ ಸಾಧಾರಣ ಹ್ಯಾಟ್ ಅದು. ಆದರೆ ಆ ಹ್ಯಾಟ್, ಸಿನಿಮಾದ ನಾಯಕ ಪಾತ್ರಕ್ಕೆ ವಿಶೇಷ ಕಳೆಯನ್ನು, ವಿಶೇಷ ವ್ಯಕ್ತಿತ್ವವನ್ನು ನೀಡುತ್ತಿತ್ತು. ಅದೇ ಕಾರಣಕ್ಕೆ ಈ ಹ್ಯಾಟ್ ಬಹಳ ಜನಪ್ರಿಯವಾಗಿತ್ತು.
ಇದನ್ನೂ ಓದಿ:Toxic: ಯಶ್ಗಾಗಿ ಕನ್ನಡಕ್ಕೆ ಬಂದ ಹಾಲಿವುಡ್ ಆಕ್ಷನ್ ನಿರ್ದೇಶಕ ಯಾರು?
ಸಿನಿಮಾದಲ್ಲಿ ಹ್ಯಾರಿಸನ್ ಫೋರ್ಡ್ ಧರಿಸಿದ್ದ ಹ್ಯಾಟ್ ಅನ್ನು ಆ ಸಿನಿಮಾದಲ್ಲಿ ಅವರ ಸ್ಟಂಟ್ ಡಬಲ್ ಆಗಿದ್ದ ಡೀನ್ ಫೆರಾಂಡಿಗೆ ನೀಡಲಾಗಿತ್ತಂತೆ. ಕಳೆದ ವರ್ಷ ಡೀನ್ ಫೆರಾಂಡಿ ನಿಧನ ಹೊಂದಿದರು. ಹಾಗಾಗಿ ಅವರ ಸಂಗ್ರಹದಲ್ಲಿದ್ದ ಈ ಹ್ಯಾಟ್ ಅನ್ನು ಹರಾಜಿಗೆ ಇಡಲಾಗಿತ್ತು. ‘ಇಂಡಿಯಾನಾ ಜೋನ್ಸ್ ಆಂಡ್ ದಿ ಟೆಂಪಲ್ ಆಫ್ ಡೂಮ್’ ಸಿನಿಮಾದ ಹ್ಯಾಟ್ನ ಜೊತೆಗೆ, ಜನಪ್ರಿಯ ಸಿನಿಮಾಗಳಾದ ‘ಸ್ಟಾರ್ ವಾರ್ಸ್’, ‘ಹ್ಯಾರಿ ಪಾಟರ್’, ‘ಜೇಮ್ಸ್ ಬಾಂಡ್’ ಸಿನಿಮಾದ ಕೆಲವು ವಸ್ತುಗಳನ್ನು ಲಾಸ್ ಏಂಜಲ್ಸ್ನಲ್ಲಿ ಹರಾಜು ಹಾಕಲಾಯ್ತು. ಈ ವಸ್ತುಗಳ ಖರೀದಿದಾರರ ಹೆಸರುಗಳನ್ನು ಬಹಿರಂಗಪಡಿಸಲಾಗಿಲ್ಲ.
‘ಇಂಡಿಯಾನಾ ಜೋನ್ಸ್ ಆಂಡ್ ದಿ ಟೆಂಪಲ್ ಆಫ್ ಡೂಮ್’ ಸಿನಿಮಾ 1984 ರಲ್ಲಿ ಬಿಡುಗಡೆ ಆಗಿತ್ತು. ಹ್ಯಾರಿಸನ್ ಫೋರ್ಡ್ ನಾಯಕನಾಗಿ ನಟಿಸಿದ್ದ ಈ ಸಿನಿಮಾವನ್ನು ಭಾರತದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಸಿನಿಮಾದ ಮುಖ್ಯ ವಿಲನ್ ಪಾತ್ರದಲ್ಲಿ ಭಾರತದ ಖ್ಯಾತ ಖಳನಟ ಅಮರೀಶ್ ಪುರಿ ನಟಿಸಿದ್ದರು. ಸಿನಿಮಾ ಆಗಿನ ಕಾಲಕ್ಕೆ 33 ಕೋಟಿ ರೂಪಾಯಿ ಹಣ ಗಳಿಸಿತ್ತು. ಈಗ ಅದು 3 ಸಾವಿರ ಕೋಟಿಗೆ ಸಮ. ಈ ಸಿನಿಮಾಕ್ಕೆ ಅತ್ಯುತ್ತಮ ವಿಷ್ಯುಲ್ ಎಫೆಟ್ಸ್ ಆಸ್ಕರ್ ಪ್ರಶಸ್ತಿ ಸಹ ಲಭಿಸಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ