ಮಹಾ ಮುಷ್ಕರಕ್ಕೆ ತತ್ತರಿಸಿದ ಹಾಲಿವುಡ್​; ಬಿಗ್ ಬಜೆಟ್ ಚಿತ್ರದ ನಿರ್ಮಾಪಕರಿಗೆ ಆತಂಕ

|

Updated on: Jul 15, 2023 | 7:59 AM

ಈ ಮೊದಲು ಸಿನಿಮಾ ಬರಹಗಾರರು ಮುಷ್ಕರ ಆರಂಭಿಸಿದ್ದರು. ಇದರಿಂದ ಹಾಲಿವುಡ್ ತತ್ತರಿಸಿತ್ತು. ಈಗ ಇವರ ಜೊತೆ ನಟ, ನಟಿಯರು ಕೂಡ ಸೇರಿಕೊಂಡಿದ್ದಾರೆ.

ಮಹಾ ಮುಷ್ಕರಕ್ಕೆ ತತ್ತರಿಸಿದ ಹಾಲಿವುಡ್​; ಬಿಗ್ ಬಜೆಟ್ ಚಿತ್ರದ ನಿರ್ಮಾಪಕರಿಗೆ ಆತಂಕ
ಹಾಲಿವುಡ್ ಸ್ಟ್ರೈಕ್
Follow us on

ಹಾಲಿವುಡ್ (Hollywood)​ ಕಲಾವಿದರ ಮುಷ್ಕರ ಆರಂಭ ಆಗಿದೆ. ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಮುಷ್ಕರ ಶುರುವಾಗಿದೆ. ಇದನ್ನು ಮಹಾ ಮುಷ್ಕರ ಎಂದು ಕರೆಯಲಾಗಿದೆ. ಹಲವು ದಿನಗಳ ಕಾಲ ಈ ಮುಷ್ಕರ ಮುಂದುವರಿಯುವ ಸಾಧ್ಯತೆ ಇದೆ. ಹಾಲಿವುಡ್​ನ ಎಲ್ಲಾ ಸಿನಿಮಾಗಳ ಕೆಲಸ ವಿಳಂಬ ಆಗಲಿದೆ. ಇದರ ಪರಿಣಾಮ ಕೆಲ ತಿಂಗಳು ರಿಲೀಸ್​ಗೆ ಸಿನಿಮಾ ಇಲ್ಲದಂತೆಯೂ ಆಗಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಈ ಮೊದಲು ಸಿನಿಮಾ ಬರಹಗಾರರು ಮುಷ್ಕರ ಆರಂಭಿಸಿದ್ದರು. ಇದರಿಂದ ಹಾಲಿವುಡ್ ತತ್ತರಿಸಿತ್ತು. ಈಗ ಇವರ ಜೊತೆ ನಟ, ನಟಿಯರು ಕೂಡ ಸೇರಿಕೊಂಡಿದ್ದಾರೆ. ಇವರು ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಉತ್ತಮ ವೇತನ ನೀಡಬೇಕು, ಬಂದ ಲಾಭದಲ್ಲಿ ಸರಿಯಾದ ರೀತಿಯಲ್ಲಿ ಪಾಲು ನೀಡಬೇಕು ಎಂದು ಕೋರಿದ್ದಾರೆ. ಇದರ ಜೊತೆಗೆ ಎಐ (ಕೃತಕ ಬುದ್ಧಿಮತ್ತೆ) ತಮ್ಮ ಕೆಲಸ ಕದಿಯುತ್ತಿದ್ದು, ಅದರಿಂದ ರಕ್ಷಣೆ ನೀಡಬೇಕು ಎಂಬುದು ಕಲಾವಿದರ ಕೋರಿಕೆ ಆಗಿದೆ.

ಹಾಲಿವುಡ್​ನಲ್ಲಿ ಈ ರೀತಿ ಬೃಹತ್ ಪ್ರತಿಭಟನೆ ನಡೆಯುತ್ತಿರುವುದು ಇದೇ ಮೊದಲೇನು ಅಲ್ಲ. 1960ರಲ್ಲಿ ಬೃಹತ್ ಮುಷ್ಕರ ನಡೆದಿತ್ತು. ಈ ವೇಳೆ ಕಲಾವಿದರು ಹಾಗೂ ಬರಹಗಾರರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದ್ದರು. ಈಗ ಒಟ್ಟಾಗಿ ಮುಷ್ಕರ ಕರೆದಿದ್ದಾರೆ. ಇದರಿಂದ ಬಿಗ್ ಬಜೆಟ್ ಚಿತ್ರಗಳಿಗೆ ಆತಂಕ ಎದುರಾಗಿದೆ.

ಇದನ್ನೂ ಓದಿ: ‘ಹಾಲಿವುಡ್​ ರೇಂಜ್​ನಲ್ಲಿ ಶೂಟ್ ಮಾಡಲಾಗಿದೆ’; ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಬಗ್ಗೆ ರಕ್ಷಿತ್ ಮೆಚ್ಚುಗೆ

ಸದ್ಯ, ಶೂಟಿಂಗ್, ರೆಕಾರ್ಡಿಂಗ್ ಸೇರಿ ಎಲ್ಲಾ ಕೆಲಸಗಳನ್ನು ನಿಲ್ಲಿಸಲಾಗಿದೆ. ಯಾವುದೇ ಕಲಾವಿದರೂ ಸಿನಿಮಾ ಪ್ರಚಾರಕ್ಕೆ ತೆರಳುತ್ತಿಲ್ಲ. ಇದು ದೊಡ್ಡ ಬಜೆಟ್ ಚಿತ್ರಗಳ ಆತಂಕ ಹೆಚ್ಚಿಸಿದೆ. ‘ಡೆಡ್​ಪೂಲ್ 3’, ‘ಅವತಾರ 3’ ಸೇರಿ ಅನೇಕ ಸಿನಿಮಾಗಳ ಕೆಲಸಗಳು ಅರ್ಧಕ್ಕೆ ನಿಂತಿದೆ. ಇದರಿಂದ ಸಿನಿಮಾ ಕೆಲಸಗಳು ಮತ್ತಷ್ಟು ವಿಳಂಬ ಆಗಲಿದ್ದು, ರಿಲೀಸ್ ದಿನಾಂಕ ಮುಂದಕ್ಕೆ ಹೋದರೂ ಅಚ್ಚರಿ ಏನಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ