ಎಮ್ಮಿ 2025: ದಿಲ್ಜೀತ್ ದುಸ್ಸಾಂಜ್ಗೆ ನಿರಾಸೆ, ಇಲ್ಲಿದೆ ಪೂರ್ಣ ಪಟ್ಟಿ
Emmys 2025 awards: ಈ ಸಾಲಿನ ಎಮ್ಮಿ ಪ್ರಶಸ್ತಿ ಘೋಷಣೆ ಆಗಿದೆ. ಅತ್ಯುತ್ತಮ ನಟ ವಿಭಾಗದಲ್ಲಿ ಭಾರತದ ನಟ ದಿಲ್ಜೀತ್ ದೊಸ್ಸಾಂಜ್ ಸಹ ಇದ್ದರು. ಆದರೆ ಅವರಿಗೆ ಪ್ರಶಸ್ತಿ ಕೈತಪ್ಪಿದೆ. ‘ಚಮ್ಕೀಲ’ ಸಿನಿಮಾದ ನಟನೆಗೆ ದಿಲ್ಜೀತ್ ದೊಸ್ಸಾಂಜ್ ಅವರು ಅಂತಿಮ ಹಂತಕ್ಕೆ ಆಯ್ಕೆ ಆಗಿದ್ದರು. ಮಾತ್ರವಲ್ಲದೆ ಅತ್ಯುತ್ತಮ ಟಿವಿ/ಒಟಿಟಿ ಸಿನಿಮಾ ವಿಭಾಗದಲ್ಲಿ ಅಮರ್ಸಿಂಗ್ ಚಮ್ಕೀಲ ಸಿನಿಮಾ ಅಂತಿಮ ಹಂತಕ್ಕೆ ಆಯ್ಕೆ ಆಗಿತ್ತು. ಆದರೆ ಸಿನಿಮಾಕ್ಕೂ ಸಹ ಪ್ರಶಸ್ತಿ ಕೈತಪ್ಪಿದೆ. ಎಮ್ಮೀಸ್ 2025 ಪ್ರಶಸ್ತಿ ಗೆದ್ದವರ ಪೂರ್ಣ ಪಟ್ಟಿ ಇಲ್ಲಿದೆ...

ಒಟಿಟಿ ಮತ್ತು ಟಿವಿಗಳಲ್ಲಿ (OTT and Tv) ಬಿಡುಗಡೆ ಆಗುವ ಅತ್ಯುತ್ತಮ ಶೋ, ಸಿನಿಮಾಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಎಮ್ಮಿ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಸಿನಿಮಾಗಳಿಗೆ ಆಸ್ಕರ್ ಇದ್ದಂತೆ, ಟಿವಿ, ಒಟಿಟಿಗಳ ಶೋ, ಸಿನಿಮಾಗಳಿಗೆ ಎಮ್ಮೀಸ್ ಸಹ ಆಸ್ಕರ್. ಈ ಸಾಲಿನ ಎಮ್ಮಿ ಪ್ರಶಸ್ತಿ ಘೋಷಣೆ ಆಗಿದೆ. ಅತ್ಯುತ್ತಮ ನಟ ವಿಭಾಗದಲ್ಲಿ ಭಾರತದ ನಟ ದಿಲ್ಜೀತ್ ದೊಸ್ಸಾಂಜ್ ಸಹ ಇದ್ದರು. ಆದರೆ ಅವರಿಗೆ ಪ್ರಶಸ್ತಿ ಕೈತಪ್ಪಿದೆ. ‘ಚಮ್ಕೀಲ’ ಸಿನಿಮಾದ ನಟನೆಗೆ ದಿಲ್ಜೀತ್ ದೊಸ್ಸಾಂಜ್ ಅವರು ಅಂತಿಮ ಹಂತಕ್ಕೆ ಆಯ್ಕೆ ಆಗಿದ್ದರು. ಮಾತ್ರವಲ್ಲದೆ ಅತ್ಯುತ್ತಮ ಟಿವಿ/ಒಟಿಟಿ ಸಿನಿಮಾ ವಿಭಾಗದಲ್ಲಿ ಅಮರ್ಸಿಂಗ್ ಚಮ್ಕೀಲ ಸಿನಿಮಾ ಅಂತಿಮ ಹಂತಕ್ಕೆ ಆಯ್ಕೆ ಆಗಿತ್ತು. ಆದರೆ ಸಿನಿಮಾಕ್ಕೂ ಸಹ ಪ್ರಶಸ್ತಿ ಕೈತಪ್ಪಿದೆ. ಎಮ್ಮೀಸ್ 2025 ಪ್ರಶಸ್ತಿ ಗೆದ್ದವರ ಪೂರ್ಣ ಪಟ್ಟಿ ಇಲ್ಲಿದೆ…
ಎಮ್ಮಿ 2025 ಪ್ರಶಸ್ತಿ ಗೆದ್ದವರ ಪಟ್ಟಿ
ಅತ್ಯುತ್ತಮ ಆರ್ಟ್ ಪ್ರೋಗ್ರಾಮಿಂಗ್- ರುಯಿಚಿ ಸಕಮೋಟೊ (ಜಪಾನ್)
ಅತ್ಯುತ್ತಮ ನಟ- ಒರಿಯೊಲ್ ಪ್ಲಾ ಇನ್ ಯೊ (ಸ್ಪೇನ್)
ಅತ್ಯುತ್ತಮ ನಟಿ- ಅನ್ನಾ ಮ್ಯಾಕ್ಸ್ವೆಲ್ ಮಾರ್ಟಿನ್ (ಅಂಟಿಲ್ ಐ ಕಿಲ್ ಯು-ಬ್ರಿಟನ್)
ಅತ್ಯುತ್ತಮ ಹಾಸ್ಯ ಶೋ-ಲುಡ್ವಿಗ್ (ಯುಕೆ)
ಕರೆಂಟ್ ಅಫೇರ್ಸ್-ಡಿಸ್ಪಾಚಸ್ ಕಿಲ್ ಜೋನ್ ಇನ್ಸೈಡ್ ಗಾಜಾ (ಯುಕೆ)
ಅತ್ಯುತ್ತಮ ಡಾಕ್ಯುಮೆಂಟರಿ- ಹೆಲ್ ಜಂಪರ್ (ಯುಕೆ)
ಅತ್ಯುತ್ತಮ ಡ್ರಾಮಾ ಸೀರೀಸ್- ರೈವಲ್ಸ್ (ಯುಕೆ)
ಮಕ್ಕಳ ಅನಿಮೇಷನ್ ಚಿತ್ರ- ಬ್ಲೂಯೆ (ಆಸ್ಟ್ರೇಲಿಯಾ)
ಮಕ್ಕಳ ಮನೊರಂಜನೆ ಚಿತ್ರ- ಔಫ್ ಫ್ರಿಟ್ಜೀಸ್ ಸ್ಪುರೆನ್ (ಜೆರ್ಮನಿ)
ಮಕ್ಕಳ ಲೈವ್ ಆಕ್ಷನ್ ಚಿತ್ರ- ಫಾಲೆನ್ (ಯುಕೆ)
ಅತ್ಯುತ್ತಮ ಸುದ್ದಿ ಬಿತ್ತರಣೆ- ಗಾಜಾ-ಸರ್ಚಿಂಗ್ ಫಾರ್ ಲೈಫ್ (ಕತಾರ್)
ಮನೊರಂಜನಾತ್ಮಕ ರಿಯಾಲಿಟಿ ಶೋ-ಶಾವೊಲಿನ್ ಹೀರೋಸ್ (ಡೆನ್ಮಾರ್ಕ್)
ಅತ್ಯುತ್ತಮ ಕಿರು ಚಿತ್ರ ಸರಣಿ- ಲಾ ಮೀಡಿಯಾಟ್ರಿಕ್ (ಕೆನಡಾ)
ಅತ್ಯುತ್ತಮ ಕ್ರೀಡಾ ಡಾಕ್ಯುಮೆಂಟರಿ- ಇಟ್ಸ್ ಆಲ್ ಓವರ್: ಕಿಸ್ ದಟ್ ಚೇಂಜಡ್ಸ್ ಸ್ಪ್ಯಾನಿಷ್ ಫುಟ್ಬಾಲ್ (ಸ್ಪೇನ್)
ಅತ್ಯುತ್ತಮ ಟೆಲಿ ನೋವೆಲ್-ದೇಹಾ (ಟರ್ಕಿ)
ಅತ್ಯುತ್ತಮ ಟಿವಿ/ಒಟಿಟಿ ಸಿನಿಮಾ-ಲಾಸ್ಟ್ ಬಾಯ್ಸ್ ಆಂಡ್ ಫೇರೀಸ್ (ಯುಕೆ)
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




