AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಕ್ಕೇ ಬಿಟ್ಟ ಹೊಸ ‘ಜೇಮ್ಸ್ ಬಾಂಡ್’ ಯಾರು ಈ ಜಾಕ್ ಲೋಡನ್

Who is next James Bond: ಜೇಮ್ಸ್ ಬಾಂಡ್ ವಿಶ್ವದ ಬಲು ಜನಪ್ರಿಯ ಆಕ್ಷನ್ ಸಿನಿಮಾ ಸರಣಿ. ಕಳೆದ 50 ವರ್ಷಕ್ಕೂ ಹೆಚ್ಚು ಸಮಯದಿಂದ ಜೇಮ್ಸ್ ಬಾಂಡ್ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿವೆ ಮತ್ತು ಸೂಪರ್ ಹಿಟ್ ಆಗುತ್ತಿದೆ. ಈ ವರೆಗೆ ಆರು ಮಂದಿ ಮಾತ್ರ ಜೇಮ್ಸ್ ಬಾಂಡ್ ಪಾತ್ರದಲ್ಲಿ ನಟಿಸಿದ್ದು, ಇದೀಗ ಏಳನೇ ನಟನ ಆಯ್ಕೆ ಅಂತಿಮಗೊಂಡಿದೆ ಎನ್ನಲಾಗುತ್ತಿದೆ. ಯಾರು ಹೊಸ ಜೇಮ್ಸ್ ಬಾಂಡ್?

ಸಿಕ್ಕೇ ಬಿಟ್ಟ ಹೊಸ ‘ಜೇಮ್ಸ್ ಬಾಂಡ್’ ಯಾರು ಈ ಜಾಕ್ ಲೋಡನ್
Jack Lawden
ಮಂಜುನಾಥ ಸಿ.
|

Updated on: Sep 09, 2026 | 5:06 PM

Share

ಮುಖ್ಯಾಂಶಗಳು

  • 50ಕ್ಕೂ ಹೆಚ್ಚು ವರ್ಷದಿಂದ ಬಿಡುಗಡೆ ಆಗುತ್ತಿರುವ ಸಿನಿಮಾ ಸರಣಿ ಜೇಮ್ಸ್ ಬಾಂಡ್
  • ಜೇಮ್ಸ್ ಬಾಂಡ್ ಪಾತ್ರಧಾರಿ ಡ್ಯಾನಿಯಲ್ ಕ್ರೇಗ್ ನಿವೃತ್ತಿ ಘೋಷಿಸಿದ್ದಾರೆ.
  • ಈಗ ಹೊಸ ಜೇಮ್ಸ್ ಬಾಂಡ್ ಹುಡುಕಲಾಗಿದೆ. ಯಾರಾತ?

‘ಜೇಮ್ಸ್ ಬಾಂಡ್’ ವಿಶ್ವ ಸಿನಿಮಾನಲ್ಲಿ ಭಾರಿ ಜನಪ್ರಿಯತೆ ಉಳ್ಳ ಸಿನಿಮಾ ಸರಣಿ. ಬ್ರಿಟೀಷ್ ಸಿನಿಮಾ ಸರಣಿಯಾದ ‘ಜೇಮ್ಸ್ ಬಾಂಡ್’ ಸುಮಾರು 50 ವರ್ಷಗಳಿಂದಲೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬರುತ್ತಿದೆ. 1962 ರಲ್ಲಿ ಮೊದಲ ಜೇಮ್ಸ್ ಬಾಂಡ್ ಸಿನಿಮಾ ಬಿಡುಗಡೆ ಆಗಿತ್ತು. ಆಗಿನಿಂದ ಈಗಿನ ವರೆಗೆ 6 ಮಂದಿಯಷ್ಟೆ ಅಧಿಕೃತವಾಗಿ ಜೇಮ್ಸ್ ಬಾಂಡ್ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಜೇಮ್ಸ್ ಬಾಂಡ್ ಪಾತ್ರಕ್ಕೆ ನಟರನ್ನು ಆಯ್ಕೆ ಮಾಡಬೇಕಾದರೆ ನಿರ್ಮಾಣ ಸಂಸ್ಥೆ ಮತ್ತು ಸ್ಟುಡಿಯೋ ಸಾಕಷ್ಟು ಅಂಶಗಳನ್ನು ಗಮನಿಸುತ್ತದೆ. ಇದೀಗ ಅಮೆಜಾನ್ ಎಂಜಿಎಂ ಸಂಸ್ಥೆಯು ಹೊಸ ಜೇಮ್ಸ್ ಬಾಂಡ್ ಅನ್ನು ಆಯ್ಕೆ ಮಾಡಿದೆ.

ಡ್ಯಾನಿಯಲ್ ಕ್ರೇಗ್, ಜೇಮ್ಸ್ ಬಾಂಡ್ ಸರಣಿಯ ಅತ್ಯಂತ ಯಶಸ್ವಿ ಮತ್ತು ಜನಪ್ರಿಯ ಬಾಂಡ್ ಆಗಿದ್ದರು. 2006 ರಿಂದ 2021 ರ ವರೆಗೆ ಬಾಂಡ್ ಪಾತ್ರಗಳಲ್ಲಿ ನಟಿಸಿದ ಡ್ಯಾನಿಯಲ್ ಬಾಂಡ್ ಪಾತ್ರಕ್ಕೆ ನಿವೃತ್ತಿ ಘೋಷಣೆ ಮಾಡಿದರು. ಹಾಗಾಗಿ ಸ್ಟುಡಿಯೋ ಹೊಸ ಬಾಂಡ್ ಹುಡುಕಾಟದಲ್ಲಿ ತೊಡಗಿತ್ತು. ಹಾಲಿವುಡ್​​ನ ಹಲವಾರು ನಟರನ್ನು ಆಡಿಷನ್ ಮಾಡಿದ ಬಳಿಕ ಇದೀಗ ಕೊನೆಗೂ ಜೇಮ್ಸ್ ಬಾಂಡ್ ಅನ್ನು ಆಯ್ಕೆ ಮಾಡಲಾಗಿದೆ.

ಮೂಲಗಳ ಪ್ರಕಾರ ನಟ ಜಾಕ್ ಲೋಡೆನ್ ಅವರು ಮುಂದಿನ ಜೇಮ್ಸ್ ಬಾಂಡ್ ಆಗಲಿದ್ದಾರೆ. ಸ್ಕಾಟ್​​ಲೆಂಡ್​​ನ ಈ ನಟ ಹಲವು ಸಿನಿಮಾಗಳು ಹಾಗೂ ಟಿವಿ ಶೋಗಳಲ್ಲಿ ನಟನೆ ಮಾಡಿದ್ದಾರೆ. 2010 ರಿಂದಲೂ ಟಿವಿ ಶೋ ಮತ್ತು ಸಿನಿಮಾಗಳಲ್ಲಿ ಜಾಕ್ ಲೋಡೆನ್ ನಟನೆ ಮಾಡುತ್ತಿದ್ದು, ಎರಡು ಬಾರಿ ಗೋಲ್ಡನ್ ಗ್ಲೋಬ್​​ಗೆ ನಾಮಿನೇಟ್ ಸಹ ಆಗಿದ್ದಾರೆ.

ಇದನ್ನೂ ಓದಿ:ಯಶ್ ಶ್ರಮ ಕೊಂಡಾಡಿದ ಹಾಲಿವುಡ್ ಆಕ್ಷನ್ ನಿರ್ದೇಶಕ ಜೆಜೆ ಪೆರ್ರಿ

ಹೊಸ ಜೇಮ್ಸ್ ಬಾಂಡ್ ಸಿನಿಮಾದ ಚಿತ್ರಕತೆ ಈಗಾಗಲೇ ರೆಡಿಯಾಗಿದ್ದು, ಸಿನಿಮಾದ ಚಿತ್ರೀಕರಣ ಶುರುವಾಗಬೇಕಿದೆ. ಸ್ಟುಡಿಯೋವು, ಹೊಸ ಜೇಮ್ಸ್ ಬಾಂಡ್ ಆಯ್ಕೆಯನ್ನು ಗೌಪ್ಯವಾಗಿ ಇರಿಸುವ ಪ್ರಯತ್ನದಲ್ಲಿದ್ದು, ದೊಡ್ಡ ವೇದಿಕೆ ಮೇಲೆ ಹೊಸ ಬಾಂಡ್​ ಅನ್ನು ಪರಿಚಯಿಸುವ ಉಮೇದಿನಲ್ಲಿದೆ. ಜೇಮ್ಸ್ ಬಾಂಡ್ ಸಿನಿಮಾಕ್ಕೆ ಸಂಬಂಧಿಸಿದ ನಟ ಗ್ಯಾರಿ ಓಲ್ಡ್​ ಮ್ಯಾನ್ ಹೇಳಿರುವಂತೆ, ‘ನಿರ್ಮಾಪಕರು ಹೊಸ ಜೇಮ್ಸ್ ಬಾಂಡ್ ಅನ್ನು ಹುಡುಕಿದ್ದಾಗಿದೆ’ ಎಂದಿದ್ದಾರೆ.

ಜೇಮ್ಸ್ ಬಾಂಡ್ ಸಿನಿಮಾಗಳ ಚಿತ್ರಕತೆ ತಂಡದ ಪ್ರಮುಖರಾಗಿರುವ ಸ್ಟಿವನ್ ನೈಟ್ ಹೇಳಿರುವಂತೆ, ‘ನಾನು ಹೊಸ ಸಿನಿಮಾದ ಚಿತ್ರಕತೆ ರಚಿಸಿದ್ದೇನೆ. ನಾನು ನನ್ನ ಕೆಲಸವನ್ನು ಅಂತಿಮಗೊಳಿಸಿದ್ದೇನೆ. ನಿರ್ಮಾಪಕರು, ಸ್ಟುಡಿಯೋ, ಹೊಸ ಜೇಮ್ಸ್ ಬಾಂಡ್ ವಿಷಯವಾಗಿ ಯಾವ ನಿರ್ಣಯ ತೆಗೆದುಕೊಳ್ಳುತ್ತದೆಯೋ ನೋಡಬೇಕಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ