AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಶ್ರಮ ಕೊಂಡಾಡಿದ ಹಾಲಿವುಡ್ ಆಕ್ಷನ್ ನಿರ್ದೇಶಕ ಜೆಜೆ ಪೆರ್ರಿ

Toxic movie: ‘ಟಾಕ್ಸಿಕ್’ ಸಿನಿಮಾದ ಆಕ್ಷನ್ ದೃಶ್ಯಗಳು ಸಖತ್ ಸದ್ದು ಮಾಡುತ್ತಿವೆ. ಬಲು ಅದ್ಧೂರಿಯಾದ ಮತ್ತು ಬಹಳ ವಿಭಿನ್ನವಾದ ಆಕ್ಷನ್ ದೃಶ್ಯಗಳನ್ನು ‘ಟಾಕ್ಸಿಕ್’ ಸಿನಿಮಾ ಒಳಗೊಂಡಿದೆ. ‘ಟಾಕ್ಸಿಕ್’ ಸಿನಿಮಾಕ್ಕೆ ಹಾಲಿವುಡ್​​ನ ಸ್ಟಾರ್ ಆಕ್ಷನ್ ಕೊರಿಯೋಗ್ರಾಫರ್ ಜೆಜೆ ಪೆರ್ರಿ ನಿರ್ದೇಶನ ಮಾಡಿದ್ದಾರೆ. ಇದೀಗ ಕೆವಿಎನ್ ಬಿಡುಗಡೆ ಮಾಡಿರುವ ವಿಡಿಯೋನಲ್ಲಿ ಜೆಜೆ ಪೆರ್ರಿ ಯಶ್ ಬಗ್ಗೆ ಮಾತನಾಡಿದ್ದಾರೆ.

ಯಶ್ ಶ್ರಮ ಕೊಂಡಾಡಿದ ಹಾಲಿವುಡ್ ಆಕ್ಷನ್ ನಿರ್ದೇಶಕ ಜೆಜೆ ಪೆರ್ರಿ
Yash Toxic
ಮಂಜುನಾಥ ಸಿ.
|

Updated on:Aug 29, 2026 | 7:47 PM

Share

‘ಟಾಕ್ಸಿಕ್’ (Toxic) ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದವರು ಸಿನಿಮಾದ ಮೇಕಿಂಗ್, ಯಶ್ ಅವರ ಅದ್ಭುತ ನಟನೆ, ಕ್ಲೈಮ್ಯಾಕ್ಸ್​​ನಲ್ಲಿ ಬರುವ ಟ್ವಿಸ್ಟಿಗೆ ಮನಸೋತಿದ್ದಾರೆ. ವಿಶೇಷವಾಗಿ ಸಿನಿಮಾದ ಆಕ್ಷನ್ ಬಹುವಾಗಿ ಗಮನ ಸೆಳೆದಿದೆ. ಸಿನಿಮಾನಲ್ಲಿ ಹಲವು ಆಕ್ಷನ್ ಪೀಸ್​​ಗಳಿವೆ. ಬಂದೂಕಿನ ಜೊತೆಗೆ ಹರಿತವಾದ ಅಸ್ತ್ರಗಳನ್ನು ಹಿಡಿದು ಯಶ್ ಫೈಟ್ ಮಾಡಿದ್ದಾರೆ. ಪ್ರತಿ ಫೈಟ್​​ಗಳು ಸಖತ್ ಭಿನ್ನವಾಗಿದೆ. ಅಂದಹಾಗೆ ‘ಟಾಕ್ಸಿಕ್’ ಸಿನಿಮಾಕ್ಕೆ ಆಕ್ಷನ್ ನಿರ್ದೇಶನ ಮಾಡಿರುವುದು ಹಾಲಿವುಡ್​​ನ ಜನಪ್ರಿಯ ಆಕ್ಷನ್ ಕೊರಿಯೋಗ್ರಾಫರ್ ಜೆಜೆ ಪೆರ್ರಿ. ಇದೀಗ ಕೆವಿಎನ್, ಆಕ್ಷನ್ ಸೀನ್​​ಗಳ ಚಿತ್ರೀಕರಣದ ವಿಡಿಯೋ ಹಂಚಿಕೊಂಡಿದ್ದು ಜೆಜೆ ಪೆರ್ರಿ ನಟ ಯಶ್ ಹಾಗೂ ನಿರ್ದೇಶಕಿ ಗೀತೂ ಮೋಹನ್​​ದಾಸ್ ಬಗ್ಗೆ ಮಾತನಾಡಿದ್ದಾರೆ.

ವಿಶೇಷವಾಗಿ ಸರ್ಕಸ್​​ ಕ್ಯಾಂಪ್​​ನಲ್ಲಿ ನಡೆಯುವ ಫೈಟ್ ದೃಶ್ಯದ ಬಗ್ಗೆ ಮಾತನಾಡಿರುವ ಜೆಜೆ ಪೆರ್ರಿ, ‘ಅದು ಬಹಳ ಭಿನ್ನವಾದ ಚಾಲೆಂಜ್ ಆಗಿತ್ತು. ಸಾಮಾನ್ಯವಾಗಿ ನಾನು ವಿಶೇಷ ಆಯುಧಗಳನ್ನು ಬಳಸದೆ, ಫೈಟ್ ನಡೆಯುವ ಲೊಕೇಶನ್​​ನಲ್ಲಿ ಸಿಗುವ ವಸ್ತುಗಳನ್ನೇ ಆಯುಧಗಳನ್ನೇ ಬಳಸುವುದು ನನಗೆ ಹೆಚ್ಚು ಇಷ್ಟ. ಈಗ ಸರ್ಕಸ್​​ ಕ್ಯಾಂಪಿನಲ್ಲಿ ಫೈಟ್ ಎಂದರೆ ನಾನಂತೂ ಪ್ರಾಪರ್ಟಿಗಳ ವಿಷಯದಲ್ಲಿ ಬಹಳ ಉತ್ಸುಕನಾಗಿದ್ದೆ’ ಎಂದಿದ್ದಾರೆ ಜೆಜೆ ಪೆರ್ರಿ.

ಇದನ್ನೂ ಓದಿ:200 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಟಾಕ್ಸಿಕ್’; ಮುಂದೆ ದೊಡ್ಡ ಪರೀಕ್ಷೆ

‘ಆಕ್ಷನ್ ಪೀಸ್​​ಗಳಲ್ಲಿ ಸಿನಿಮಾದ ನಿರ್ದೇಶಕರು ತಲೆ ಹಾಕುವುದಿಲ್ಲ. ಆದರೆ ಗೀತೂ ಮೋಹನ್​​ದಾಸ್ ಹಾಗಿರಲಿಲ್ಲ. ಅವರು ಪ್ರತಿ ವಿಷಯದಲ್ಲೂ ನಮ್ಮೊಟ್ಟಿಗೆ ಚರ್ಚೆಯಲ್ಲಿದ್ದರು. ನಮಗೆ ಸ್ವಾತಂತ್ರ್ಯ ನೀಡಿದರು. ಆಕ್ಷನ್ ಸೀನ್​​ಗಳು ಹೇಗಿರಬೇಕೆಂಬ ದಿಕ್ಕು ನೀಡಿದರು. ಯಶ್ ಹಾಗೂ ಗೀತೂ ಅವರು ಒಂದು ತಂಡವಾಗಿ ಕೆಲಸ ಮಾಡಿದರು. ಅವರಿಬ್ಬರೂ ಒಟ್ಟಿಗೆ ಒಂದು ಅದ್ಭುತವಾದ ಟೀಂ. ಅವರೊಟ್ಟಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವ’ ಎಂದಿದ್ದಾರೆ ಜೆಜೆ ಪೆರ್ರಿ.

ಯಶ್ ಬಗ್ಗೆ ವಿಶೇಷವಾಗಿ ಮಾತನಾಡಿದ ಜೆಜೆ ಪೆರ್ರಿ, ‘ಯಶ್ ಒಬ್ಬ ಅದ್ಭುತವಾದ ಕಲಾವಿದರ. ಅವರು ಕೇವಲ ಮೂವಿ ಸ್ಟಾರ್ ಮಾತ್ರವೇ ಅಲ್ಲ. ಸಿನಿಮಾ ಬಗ್ಗೆ ಆಸಕ್ತಿ ಇರುವ ವ್ಯಕ್ತಿ. ಒಳ್ಳೆಯ ಟ್ಯಾಲೆಂಟ್. ಅವರು ನಟಿಸುವುದು ಮಾತ್ರವೇ ಅಲ್ಲದೆ, ಹಲವು ಹೊಸ ಹೊಸ ಐಡಿಯಾಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಬಹಳ ಡೆಡಿಕೇಟೆಡ್ ಆಗಿ ಕೆಲಸ ಮಾಡುತ್ತಾರೆ. ಅವರ ನಡಿಗೆಯಲ್ಲಿ, ಅವರ ನಿಲುವಿನಲ್ಲಿ ಒಂದು ಅದ್ಭುತವಾದ ಸ್ವಾಗ್ ಇದೆ. ಫೈಟ್​​ಗಳಿಗಾಗಿ ಅವರು ತಮ್ಮನ್ನು ತಾವು ತಯಾರು ಮಾಡಿಕೊಳ್ಳುತ್ತಿದ್ದ ರೀತಿ ಅದ್ಭುತ, ಅವರಿಗೆ ಒಳ್ಳೆಯ ಬಾಡಿಯ ಜೊತೆಗೆ ಒಳ್ಳೆಯ ಸ್ಟ್ರೆಂತ್ ಸಹ ಇದೆ’ ಎಂದಿದ್ದಾರೆ. ‘ಲೇಡೀಸ್ ಆಂಡ್ ಲೇಡೀಸ್’ ಫೈಟ್​​ನಲ್ಲಿ ಕಾಣಿಸಿಕೊಳ್ಳುವ ವಿದೇಶಿ ಫೈಟರ್​​ಗಳು ಸಹ ಯಶ್ ಬಗ್ಗೆ ವಿಡಿಯೋನಲ್ಲಿ ಮಾತನಾಡಿದ್ದು, ‘ಯಶ್ ಆಸಮ್’, ‘ಯಶ್ ಸೂಪರ್’ ಎಂದೆಲ್ಲ ಗುಣಗಾನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:12 pm, Sat, 29 August 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ