ಪಾಕ್ ಆಕ್ರಮಿತ ಕಾಶ್ಮೀರದ ವಾಸ್ತವ ಸ್ಥಿತಿ ಬಯಲು ಮಾಡಿದ ಪಾಕಿಸ್ತಾನದ ಪ್ರಧಾನಿಯ ವಿಶ್ವಸಂಸ್ಥೆಯ ಭಾಷಣ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) 81ನೇ ಅಧಿವೇಶನದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರು ಎಂದಿನಂತೆ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಗುರಿಯಾಗಿಸಲು ಯತ್ನಿಸಿದರು. ಕಾಶ್ಮೀರಿ ಜನರ ಮಾನವ ಹಕ್ಕುಗಳು ಮತ್ತು ಸ್ವರಾಜ್ಯದ ಬಗ್ಗೆ ಶರೀಫ್ ಮಾತನಾಡಿದರಾದರೂ, ಈ ಭಾಷಣವು ಅವರದ್ದೇ ಆಡಳಿತದಲ್ಲಿರುವ ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ಭುಗಿಲೆದ್ದಿರುವ ತೀವ್ರ ದಂಗೆ ಮತ್ತು ಅಸಮಾಧಾನವನ್ನು ಜಾಗತಿಕ ಮಟ್ಟದಲ್ಲಿ ಬೆಳಕಿಗೆ ತಂದಿದೆ.

ನ್ಯೂಯಾರ್ಕ್, ಅಕ್ಟೋಬರ್ 1: ಇತ್ತೀಚೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) 81ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್, ಎಂದಿನಂತೆ ತಮ್ಮ ಹಳೆಯ ರಾಗವನ್ನು ಮುಂದುವರಿಸುತ್ತಾ ಕಾಶ್ಮೀರ ವಿಷಯವನ್ನು ಜಾಗತಿಕ ವೇದಿಕೆಯ ಕೇಂದ್ರಬಿಂದುವನ್ನಾಗಿ ಮಾಡಲು ಯತ್ನಿಸಿದರು. ಕಾಶ್ಮೀರವನ್ನು ಅಂತಾರಾಷ್ಟ್ರೀಯ ಬಿಕ್ಕಟ್ಟು ಎಂದು ಬಿಂಬಿಸಿದ ಅವರು, ತಾವೇ ಕಾಶ್ಮೀರಿ ಜನರ ಧ್ವನಿ ಹಾಗೂ ಇಸ್ಲಾಮಾಬಾದ್ ಅನ್ನು ಮಾನವ ಹಕ್ಕುಗಳ ರಕ್ಷಕ ಎಂಬಂತೆ ಬಿಂಬಿಸಲು ಸಕಲ ಯತ್ನ ನಡೆಸಿದರು.
ಸ್ಥಳೀಯ ಜನರ ಆಕ್ರೋಶ:
ರಾವಲ್ಕೋಟ್, ಮುಜಫರಾಬಾದ್ ಸೇರಿದಂತೆ ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಕಳೆದ ಹಲವು ತಿಂಗಳುಗಳಿಂದ ಭಾರಿ ಪ್ರಮಾಣದ ಸಾರ್ವಜನಿಕ ಪ್ರತಿಭಟನೆಗಳು ನಡೆಯುತ್ತಿವೆ. ತೀವ್ರ ವಿದ್ಯುತ್ ದರ ಏರಿಕೆ, ಭಾರೀ ತೆರಿಗೆ, ಆಹಾರ ಧಾನ್ಯಗಳ ಅಭಾವ, ನಿರುದ್ಯೋಗ ಹಾಗೂ ಆಡಳಿತಾತ್ಮಕ ಭ್ರಷ್ಟಾಚಾರದ ವಿರುದ್ಧ ಜನರು ಬೀದಿಗಿಳಿದಿದ್ದಾರೆ.
ಇದನ್ನೂ ಓದಿ: ನೀರಿನ ಹಕ್ಕು ಕಸಿದರೆ ಸುಮ್ಮನಿರಲ್ಲ: ಭಾರತದ ವಿರುದ್ಧ ಮತ್ತೆ ವಿಷ ಕಾರಿದ ಶೆಹಬಾಜ್ ಷರೀಫ್
ಪಾಕಿಸ್ತಾನ ಸರ್ಕಾರ ಈ ರಾಜಕೀಯ ಮತ್ತು ಆರ್ಥಿಕ ಪ್ರತಿಭಟನೆಗಳನ್ನು ಹತೋಟಿಗೆ ತರಲು ಭದ್ರತಾ ಪಡೆಗಳನ್ನು ನಿಯೋಜಿಸಿ, ಬಲಪ್ರಯೋಗ ಮತ್ತು ಲಾಠಿಚಾರ್ಜ್ ನಡೆಸಿದೆ. ಇದರಿಂದಾಗಿ ಸಂಘರ್ಷ ಉಂಟಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.
ಶೆಹಬಾಜ್ ಶರೀಫ್ ಅವರ ಭಾಷಣದ ನಂತರ ಜಾಗತಿಕ ಸಮುದಾಯವು, “ಪಾಕಿಸ್ತಾನವು ತನ್ನ ಅಕ್ರಮ ಆಕ್ರಮಣದಲ್ಲಿರುವ ಪಿಒಕೆ ಪ್ರದೇಶದ ಜನರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಮತ್ತು ಅವರ ಮೂಲಭೂತ ಹಕ್ಕುಗಳನ್ನು ಹೇಗೆ ಕಸಿಯುತ್ತಿದೆ?” ಎಂದು ಪ್ರಶ್ನಿಸುವಂತಾಗಿದೆ.
ವಿಶ್ವಸಂಸ್ಥೆಯಲ್ಲಿ ಶೆಹಬಾಜ್ ಶರೀಫ್ ಕಾಶ್ಮೀರಿಗಳಿಗೆ “ಸ್ವಯಂ ನಿರ್ಣಯದ ಹಕ್ಕು” ಸಿಗಬೇಕು ಎಂದು ವಾದಿಸಿದರು. ಆದರೆ, ಪಾಕಿಸ್ತಾನದ ವಶದಲ್ಲಿರುವ ಪಿಒಕೆಯ ಜನರು ಸ್ವತಃ ಪಾಕಿಸ್ತಾನ ಸರ್ಕಾರದ ರಾಜಕೀಯ ದಮನ, ಹಕ್ಕುಗಳ ಹರಣ ಮತ್ತು ಅಕ್ರಮ ಆಕ್ರಮಣದ ವಿರುದ್ಧ ಸ್ವಯಂ ನಿರ್ಣಯ ಹಾಗೂ ರಾಜಕೀಯ ಆಡಳಿತದ ಹಕ್ಕನ್ನು ಆಗ್ರಹಿಸುತ್ತಿದ್ದಾರೆ. ಆದರೆ, ಶರೀಫ್ ಅವರ ಈ ಅಂತಾರಾಷ್ಟ್ರೀಯ ರಾಜತಾಂತ್ರಿಕ ಭಾಷಣದ ಹಿಂದೆ ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರದಲ್ಲಿ ಭುಗಿಲೆದ್ದಿರುವ ತೀವ್ರ ಸಾರ್ವಜನಿಕ ಅಸಮಾಧಾನ ಮತ್ತು ರಾಜಕೀಯ ಅಸ್ಥಿರತೆಯ ಕಹಿ ಸತ್ಯ ಸಂಪೂರ್ಣವಾಗಿ ಬಹಿರಂಗಗೊಂಡಿದೆ.
ಇದನ್ನೂ ಓದಿ: ‘ಕಾಶ್ಮೀರ ಪಾಕಿಸ್ತಾನದ ಜೀವನಾಡಿ, ಸಿಂಧೂ ನದಿ ನೀರು ತಡೆದರೆ ಯುದ್ಧ ಖಚಿತ’; ಭಾರತಕ್ಕೆ ಶೆಹಬಾಜ್ ಶರೀಫ್ ಬೆದರಿಕೆ
ಶೆಹಬಾಜ್ ಶರೀಫ್ ನ್ಯೂಯಾರ್ಕ್‌ನಲ್ಲಿ ಕಾಶ್ಮೀರಿಗಳ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದಾಗ, ತಮ್ಮ ಸ್ವಂತ ಆಕ್ರಮಿತ ಪ್ರದೇಶವಾದ POJK ಯಲ್ಲಿ ಇಸ್ಲಾಮಾಬಾದ್ ನಡೆಸುತ್ತಿರುವ ರಾಜಕೀಯ ದಮನ, ಬೆಲೆ ಏರಿಕೆ ಮತ್ತು ಆಡಳಿತ ವೈಫಲ್ಯದ ವಿರುದ್ಧ ಜನರು ಬೀದಿಗಿಳಿದು ಹೋರಾಡುತ್ತಿದ್ದರು. ಮುಂಬೈ ಹಾಗೂ ಮುಜಫರಾಬಾದ್, ರಾವಲಕೋಟ್ ಸೇರಿದಂತೆ ಪಿಒಕೆಯಾದ್ಯಂತ ಕಳೆದ ಹಲವು ತಿಂಗಳುಗಳಿಂದ ಅಭೂತಪೂರ್ವ ಪ್ರತಿಭಟನೆಗಳು ನಡೆಯುತ್ತಿವೆ.
ತೀವ್ರ ವಿದ್ಯುತ್ ದರ ಏರಿಕೆ, ಭಾರೀ ತೆರಿಗೆ, ಆಹಾರ ಧಾನ್ಯಗಳ ಬೆಲೆ ಏರಿಕೆ, ನಿರುದ್ಯೋಗ ಮತ್ತು ಆಡಳಿತಾತ್ಮಕ ಭ್ರಷ್ಟಾಚಾರದ ವಿರುದ್ಧ ಜನರು ಪಾಕಿಸ್ತಾನ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ಪಿಒಕೆ ಹೊರಗಿನ ರಾಜಕೀಯ ಹಿತಾಸಕ್ತಿಗಳ ಪ್ರಭಾವ ಮತ್ತು ಮೀಸಲು ಶಾಸನಸಭಾ ಸೀಟುಗಳ ವ್ಯವಸ್ಥೆಯ ಬಗ್ಗೆ ಅಲ್ಲಿನ ಜನರು ನಿರಂತರವಾಗಿ ಪ್ರಶ್ನೆ ಎತ್ತುತ್ತಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




