ಹಾಡುವಾಗ ನಿಕ್ ಜೋನಸ್ ಕಡೆ ಬ್ರಾ ಎಸೆದ ಮಹಿಳೆ; ಪ್ರಿಯಾಂಕಾ ಚೋಪ್ರಾ ಪತಿಯ ರಿಯಾಕ್ಷನ್ ಏನು?

ನಿಕ್ ಜೋನಸ್ ಕುಟುಂಬ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದೆ. ಇತ್ತೀಚೆಗೆ ನಿಕ್ ಹಾಗೂ ಅವರ ಸಹೋದರರಾದ ಕೆವಿನ್ ಜೋನಸ್ ಹಾಗೂ ಜೋ ಜೋನಸ್ ನ್ಯೂಯಾರ್ಕ್​ನಲ್ಲಿ ಕಾರ್ಯಕ್ರಮವೊಂದನ್ನು ನೀಡಿದ್ದಾರೆ. ಈ ವೇಳೆ ನಿಕ್ ಕಡೆ ಬ್ರಾ ಒಂದು ಬಂದು ಬಿದ್ದಿದೆ. ಈ ವಿಡಿಯೋ ವೈರಲ್ ಆಗಿದೆ,.

ಹಾಡುವಾಗ ನಿಕ್ ಜೋನಸ್ ಕಡೆ ಬ್ರಾ ಎಸೆದ ಮಹಿಳೆ; ಪ್ರಿಯಾಂಕಾ ಚೋಪ್ರಾ ಪತಿಯ ರಿಯಾಕ್ಷನ್ ಏನು?
ನಿಕ್ ಜೋನಸ್
Updated By: ರಾಜೇಶ್ ದುಗ್ಗುಮನೆ

Updated on: Aug 15, 2023 | 12:34 PM

ಸಾರ್ವಜನಿಕ ವೇದಿಕೆಗಳಲ್ಲಿ ಸಿಂಗರ್​ಗಳು ಹಾಡುವಾಗ ಸಾಕಷ್ಟು ಎಚ್ಚರಿಕೆ ಬೇಕು. ಅಭಿಮಾನಿಗಳು ಖುಷಿಯಲ್ಲಿ ವೇದಿಕೆಯತ್ತ ಕೈಗೆ ಸಿಕ್ಕಿದ್ದೆಲ್ಲ ಎಸೆಯುತ್ತಾರೆ. ಈಗ ನಿಕ್ ಜೋನಸ್​ಗೂ (Nick Jonas) ಇದೇ ರೀತಿಯ ಅನುಭವ ಆಗಿದೆ. ಅವರು ನ್ಯೂಯಾರ್ಕ್​​ನಲ್ಲಿ ಸಾರ್ವಜನಿಕ ವೇದಿಕೆ ಮೇಲೆ ಹಾಡುತ್ತಿದ್ದರು. ಈ ವೇಳೆ ಮಹಿಳಾ ಅಭಿಮಾಯೊಬ್ಬರು ತಮ್ಮ ಒಳ ಉಡುಪನ್ನು ಕಿತ್ತು ವೇದಿಕೆಯತ್ತ ಎಸೆದಿದ್ದಾರೆ. ಈ ವೇಳೆ ನಿಕ್ ಜೋನಸ್ ನೀಡಿದ ಎಕ್ಸ್​ಪ್ರೆಷನ್ ಅನೇಕರಿಗೆ ಅಚ್ಚರಿ ಮೂಡಿಸಿದೆ.

ನಿಕ್ ಜೋನಸ್ ಕುಟುಂಬ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದೆ. ಇತ್ತೀಚೆಗೆ ನಿಕ್ ಹಾಗೂ ಅವರ ಸಹೋದರರಾದ ಕೆವಿನ್ ಜೋನಸ್ ಹಾಗೂ ಜೋ ಜೋನಸ್ ನ್ಯೂಯಾರ್ಕ್​ನಲ್ಲಿ ಕಾರ್ಯಕ್ರಮವೊಂದನ್ನು ನೀಡಿದ್ದಾರೆ. ಈ ವೇಳೆ ನಿಕ್ ಕಡೆ ಬ್ರಾ ಒಂದು ಬಂದು ಬಿದ್ದಿದೆ. ಇದನ್ನು ನೋಡಿ ಅವರಿಗೆ ಒಮ್ಮೆ ಅಚ್ಚರಿ ಆಗಿದೆ. ಅವರು ವಿಚಲಿತಗೊಳ್ಳದೆ ಹಾಡನ್ನು ಮುಂದುವರಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

ಈ ವಿಡಿಯೋನ ಅಭಿಮಾನಿಗಳು ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಬಗೆಬಗೆಯ ಕಮೆಂಟ್​ಗಳು ಬರುತ್ತಿವೆ. ಅನೇಕರು ನಿಕ್ ಜೋನಸ್ ಅವರು ಈ ಘಟನೆಯಿಂದ ವಿಚಲಿತರಾಗದೇ ಇರುವುದನ್ನು ಮೆಚ್ಚಿಕೊಂಡಿದ್ದಾರೆ.

ನಿಕ್ ಜೋನಸ್ ಅವರಿಗೂ ಭಾರತದ ಜೊತೆ ನಂಟು ಬೆಳೆದಿದೆ. ಪ್ರಿಯಾಂಕಾ ಚೋಪ್ರಾ ಅವರನ್ನು ಮದುವೆ ಆದ ಬಳಿಕ ಅವರು ಭಾರತದ ಆಚಾರ-ವಿಚಾರಗಳನ್ನು ಪಾಲಿಸುತ್ತಿದ್ದಾರೆ. ಗಣೇಶ ಚತುರ್ಥಿ ಮೊದಲಾದ ಹಬ್ಬಗಳನ್ನು ನಿಕ್ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟವಾಗಿದ್ದಾರೆ.

ಇದನ್ನೂ ಓದಿ: ಸಿನಿಮಾ ರೀತಿ ಇತ್ತು ಪ್ರಿಯಾಂಕಾ ಚೋಪ್ರಾ ಪ್ರವಾಸ; ಫೋಟೋ ಮೂಲಕ ವಿವರಿಸಿದ ನಿಕ್ ಜೋನಸ್

ವಯಸ್ಸಿನಲ್ಲಿ ನಿಕ್ ಅವರಿಗಿಂತ ಪ್ರಿಯಾಂಕಾ ದೊಡ್ಡವರು. ಇಬ್ಬರೂ ಮದುವೆ ಆಗಿ ಹಲವು ವರ್ಷ ಕಳೆದಿದೆ. ಇವರು ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಆದರೆ, ಇದನ್ನು ಪ್ರಿಯಾಂಕಾ ಅಲ್ಲಗಳೆದರು. ಇಬ್ಬರೂ ಹಾಯಾಗಿ ಸುತ್ತಾಡಿಕೊಂಡಿದ್ದಾರೆ. ಜುಲೈನಲ್ಲಿ ಪ್ರಿಯಾಂಕಾ ಬರ್ತ್​ಡೇ ಇತ್ತು. ಪತಿ ಹಾಗೂ ಮಗಳು ಮಾಲ್ತಿ ಜೊತೆ ಇಬ್ಬರೂ ವಿದೇಶದಲ್ಲಿ ಸುತ್ತಾಟ ನಡೆಸಿ ಬಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ