- TV9 Kannada Kannada News Photos July was a movie Says Nick Jonas After He shares Photos with Priyanka Chopra And Malti
ಸಿನಿಮಾ ರೀತಿ ಇತ್ತು ಪ್ರಿಯಾಂಕಾ ಚೋಪ್ರಾ ಪ್ರವಾಸ; ಫೋಟೋ ಮೂಲಕ ವಿವರಿಸಿದ ನಿಕ್ ಜೋನಸ್
ಜುಲೈ 16 ಪ್ರಿಯಾಂಕಾ ಚೋಪ್ರಾ ಬರ್ತ್ಡೇ ಆಗಿತ್ತು. ಮಗಳು ಮಾಲ್ತಿ ಜೊತೆ ಇಡೀ ತಿಂಗಳು ನಿಕ್, ಪ್ರಿಯಾಂಕಾ ಪ್ರವಾಸ ತೆರಳಿದ್ದಾರೆ.
Updated on:Aug 02, 2023 | 9:42 AM

ಪ್ರಿಯಾಂಕಾ ಚೋಪ್ರಾ ಅವರು ಸದ್ಯ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಗಾಯಕ ನಿಕ್ ಜೋನಸ್ ಜೊತೆ ಅವರು ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.

ಜುಲೈ 16 ಪ್ರಿಯಾಂಕಾ ಚೋಪ್ರಾ ಬರ್ತ್ಡೇ ಆಗಿತ್ತು. ಆ ಪ್ರಯುಕ್ತ ಮಗಳು ಮಾಲ್ತಿ ಜೊತೆ ಇಡೀ ತಿಂಗಳು ನಿಕ್, ಪ್ರಿಯಾಂಕಾ ಪ್ರವಾಸ ತೆರಳಿದ್ದಾರೆ.

ಈ ಫೋಟೋಗಳನ್ನು ನಿಕ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂವರು ಹಾಯಾಗಿ ಸಮಯ ಕಳೆದಿದ್ದಾರೆ.

‘ಜುಲೈ ತಿಂಗಳು ಒಂದು ಸಿನಿಮಾ ರೀತಿ ಇತ್ತು’ ಎಂದು ನಿಕ್ ಜೋನಸ್ ಅವರು ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದೆ.

ಪ್ರಿಯಾಂಕಾ ಅವರು ಇತ್ತೀಚೆಗಷ್ಟೇ ಮಗಳು ಮಾಲ್ತಿ ಮುಖವನ್ನು ರಿವೀಲ್ ಮಾಡಿದ್ದರು. ಅವಧಿಗೂ ಮೊದಲೇ ಮಗು ಜನಿಸಿತ್ತು ಎಂದು ಈ ಮೊದಲು ಸುದ್ದಿ ಆಗಿತ್ತು.

ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಮಧ್ಯೆ ವಯಸ್ಸಿನ ಅಂತರ ಇದೆ. ಪ್ರಿಯಾಂಕಾಗಿಂತ ನಿಕ್ ಚಿಕ್ಕವರು. ಆದರೆ, ಇವರ ಸುಖ ದಾಂಪತ್ಯಕ್ಕೆ ಈ ವಯಸ್ಸಿನ ಅಂತರ ಅಡ್ಡಿ ಆಗಿಲ್ಲ.

ಬಿಕಿನಿಯಲ್ಲಿ ಮಿಂಚಿದ ಪ್ರಿಯಾಂಕಾ
Published On - 9:39 am, Wed, 2 August 23

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.
Read More



