ಮೂನ್ ವಾಕ್​ ಮೈಕಲ್ ಜಾಕ್ಸನ್ ಬಯೋಪಿಕ್; ಟೀಸರ್ ಹೇಗಿದೆ ನೋಡಿ

ಮೈಕಲ್ ಜಾಕ್ಸನ್ ಅವರ ಜೀವನ ಆಧರಿಸಿದ 'ಮೈಕಲ್' ಬಯೋಪಿಕ್ ಟೀಸರ್ 10 ಕೋಟಿ ವೀಕ್ಷಣೆ ಗಳಿಸಿ ಗಮನ ಸೆಳೆದಿದೆ. ಅವರ ಮೂನ್‌ವಾಕ್, ವಿಶಿಷ್ಟ ಡ್ಯಾನ್ಸ್, ಅದ್ಭುತ ಸಂಗೀತದ ಮೂಲಕ ವಿಶ್ವವನ್ನು ಬೆರಗುಗೊಳಿಸಿದವರು ಎಂಜೆ. ಅವರ ಯಶಸ್ಸಿನ ಪಯಣ, 'ಜಾಕ್ಸನ್ ಬ್ರದರ್ಸ್' ತಂಡದಿಂದ ಆರಂಭಗೊಂಡು ವೈಯಕ್ತಿಕ ಜೀವನದ ಸಂಕಷ್ಟಗಳವರೆಗಿನ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ.

ಮೂನ್ ವಾಕ್​ ಮೈಕಲ್ ಜಾಕ್ಸನ್ ಬಯೋಪಿಕ್; ಟೀಸರ್ ಹೇಗಿದೆ ನೋಡಿ
ಮೈಕಲ್

Updated on: Nov 10, 2025 | 2:59 PM

ಮೂನ್​ವಾಕ್ ಮೂಲಕ ಎಲ್ಲರನ್ನೂ ಬೆರಗುಗೊಳಿಸುವಂತೆ ಮಾಡುತ್ತಿದ್ದ ಮೈಕಲ್ ಜಾಕ್ಸನ್ (Michael Jackson) ಅವರು ನಿಧನ ಹೊಂದಿ 16 ವರ್ಷಗಳ ಮೇಲಾಗಿದೆ. 2009ರಲ್ಲಿ ಅವರು ಲಾಸ್​ ಏಂಜಲೀಸ್​​ನಲ್ಲಿ ಕೇವಲ 50ನೇ ವಯಸ್ಸಿಗೆ ನಿಧನ ಹೊಂದಿದರು. ಈಗ ‘ಮೈಕಲ್’ ಹೆಸರಿನ ಬಯೋಪಿಕ್ ಸಿದ್ಧವಾಗಿದ್ದು, ಇದರ ಟೀಸರ ರಿಲೀಸ್ ಆಗಿದೆ. ಈ ಟೀಸರ್​ನ ಒಟ್ಟಾರೆ ವೀಕ್ಷಣೆ 10 ಕೋಟಿಗೂ ಅಧಿಕವಾಗಿದೆ. ಈ ಸಿನಿಮಾ 2026ರಲ್ಲಿ ತೆರೆಗೆ ಬರಲಿದೆ.

ಮೈಕಲ್ ಜಾಕ್ಸನ್ ಡ್ಯಾನ್ಸ್ ಸ್ಟೆಪ್​ಗಳನ್ನು ಕಾಪಿ ಮಾಡೋದು ಅಷ್ಟು ಸುಲಭವಾಗಿರಲಿಲ್ಲ. ಅವರು ಹಾಕುತ್ತಿದ್ದ ಸ್ಟೆಪ್​ಗಳು ಆ ರೀತಿ ಇರುತ್ತಿದ್ದವು. ಇನ್ನು, ಅವರು ಸಿಂಗರ್ ಕೂಡ ಹೌದು. ಡ್ಯಾನ್ಸ್ ಮಾಡುತ್ತಾ, ಅವರೇ ಹಾಡು ಕೂಡ ಹೇಳುತ್ತಿದ್ದರು. ಅವರು ಹಾಡುಗಳನ್ನು ರಚನೆ ಕೂಡ ಮಾಡುತ್ತಿದ್ದರು. ಅಮೆರಿಕದಲ್ಲಿ ಹುಟ್ಟಿ ಬೆಳೆದ ಅವರ ಜೀವನ ಆಧರಿಸಿ ಯೂನಿವರ್ಸಲ್ ಪಿಕ್ಚರ್ಸ್ ಸಿನಿಮಾ ಮಾಡುತ್ತಿದೆ.

ಮೈಕಲ್ ಜಾಕ್ಸನ್ ಬೆಳೆಯುತ್ತಾ ಇದ್ದಂತೆ ತಮ್ಮ ಸೋದರರ ಜೊತೆಸೇರಿ ಒಂದು ‘ಜ್ಯಾಕ್ಸನ್ ಬ್ರದರ್ಸ್’ ಹೆಸರಿನ ತಂಡವನ್ನು ಕಟ್ಟಿಕೊಂಡರು. ಸಣ್ಣದಾಗಿ ಪ್ರಾರಂಭಿಸಿದ ಈ ತಂಡ ‘ಬ್ರೇಕ್ ಡ್ಯಾನ್ಸ್,’ ‘ಪಾಪ್ ಸಂಗೀತ’ದ ಮೂಲಕ ತಮ್ಮ ಜೀವನದಲ್ಲಿ ಯಶಸ್ಸಿನ ನಡಿಗೆ ಆರಂಭಿಸಿತು. ಇದನ್ನು ಸಿನಿಮಾದಲ್ಲಿ ತೋರಿಸಲಾಗುತ್ತಿದೆ.

ಜಫರ್ ಜಾಕ್ಸನ್ ಅವರು ಮೈಕಲ್ ಜಾಕ್ಸನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಯಾ ಲಾಂಗ್ ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಆಂಟೊಯಿನ್ ಫುಕ್ವಾ ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಸಾಮಾನ್ಯ ವ್ಯಕ್ತಿ ಮೈಕಲ್ ಜಾಕ್ಸನ್ ಆಗಿ ಬದಲಾಗಿದ್ದು ಹೇಗೆ ಎಂಬ ಕಥೆಯನ್ನು ಇಲ್ಲಿ ಕಟ್ಟಿಕೊಡುವ ಪ್ರಯತ್ನ ನಡೆಯಲಿದೆ.

ಇದನ್ನೂ ಓದಿ:ಮೈಕಲ್ ಜಾಕ್ಸನ್ ಸಾಯುವಾಗ ಇತ್ತು ಬರೋಬ್ಬರಿ 3,700 ಕೋಟಿ ರೂಪಾಯಿ ಸಾಲ 

ಮೈಕಲ್ ಜಾಕ್ಸನ್ ಅವರು ಎರಡು ಮದುವೆ ಆಗಿದ್ದರು. ಅವರಿಗೆ ಮೂವರು ಮಕ್ಕಳು. ಅವರು ಸಾಯುವುದಕ್ಕೂ ಮೊದಲು ನಿದ್ದೆ ಮಾತ್ರೆ ಸೇವಿಸಿದ್ದರು. ಇದು ಅತಿಯಾಗಿದ್ದರಿಂದ ಅವರು ನಿಧನ ಹೊಂದಿದರು ಎನ್ನಲಾಗಿದೆ. ಈ ಟ್ಯಾಬ್ಲೆಟ್ ನೀಡಿದ ಡಾ.ಮುರ್ರೆ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಆಯಿತು. ವೈಯಕ್ತಿಕ ಜೀವನದ ಬಗ್ಗೆ ಸಿನಿಮಾದಲ್ಲಿ ಇರಲಿದೆಯೇ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.