AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಖಲ್ ಜಾಕ್ಸನ್ ಕಾಲು ಚೀಲ ಹರಾಜು, ಬೆಲೆ ಎಷ್ಟು ಗೊತ್ತೆ?

Michael Jackson: ಮೈಖಲ್ ಜಾಕ್ಸನ್ ಧರಿಸುವ ಬಟ್ಟೆ, ಅವರ ಹ್ಯಾಟು, ಅವರ ಡ್ಯಾನ್ಸ್​ ಮೂವ್​ಗಳಂತೂ ಇಂದಿಗೂ ಐಕಾನಿಕ್. ಮೈಖಲ್ ಜಾಕ್ಸನ್ 2009 ರಲ್ಲಿ ನಿಧನ ಹೊಂದಿದರು. ಅದಾದ ಬಳಿಕ ಅವರಿಗೆ ಸೇರಿದ ವಸ್ತುಗಳನ್ನು ಆಕ್ಷನ್ ಮಾಡುತ್ತಾ ಬರಲಾಗುತ್ತಿದೆ. ಇದೀಗ ಅವರು ಕಾರ್ಯಕ್ರಮವೊಂದರಲ್ಲಿ ಧರಿಸಿದ್ದ ಕಾಲುಚೀಲವನ್ನು ಹರಾಜು ಹಾಕಲಾಗಿದ್ದು, ಕೋಟ್ಯಂತರ ರೂಪಾಯಿಗೆ ಅದು ಮಾರಾಟವಾಗಿದೆ.

ಮೈಖಲ್ ಜಾಕ್ಸನ್ ಕಾಲು ಚೀಲ ಹರಾಜು, ಬೆಲೆ ಎಷ್ಟು ಗೊತ್ತೆ?
Michel Jackson
ಮಂಜುನಾಥ ಸಿ.
|

Updated on: Aug 01, 2025 | 11:17 AM

Share

ಮೈಖಲ್ ಜಾಕ್ಸನ್ (michael jackson) ವಿಶ್ವದ ನಂಬರ್ 1 ಮ್ಯೂಸಿಕ್ ಸ್ಟಾರ್. ಮೈಖಲ್ ನಿಧನ ಹೊಂದಿ ವರ್ಷಗಳೇ ಆಗಿದ್ದರು ಇಂದಿಗೂ ಸಹ ಅವರ ಜನಪ್ರಿಯತೆ ತುಸು ಸಹ ತಗ್ಗಿಲ್ಲ. ಮೈಖಲ್ ಬದುಕಿದ್ದಾಗ ಅವರು ಮಾಡಿದ್ದೆಲ್ಲವೂ ಸ್ಟೈಲ್, ಟ್ರೆಂಡ್ ಆಗುತ್ತಿತ್ತು. ಮೈಖಲ್ ಧರಿಸುವ ಬಟ್ಟೆ, ಅವರ ಹ್ಯಾಟು, ಅವರ ಡ್ಯಾನ್ಸ್​ ಮೂವ್​ಗಳಂತೂ ಇಂದಿಗೂ ಐಕಾನಿಕ್. ಮೈಖಲ್ ಜಾಕ್ಸನ್ 2009 ರಲ್ಲಿ ನಿಧನ ಹೊಂದಿದರು. ಅದಾದ ಬಳಿಕ ಅವರಿಗೆ ಸೇರಿದ ವಸ್ತುಗಳನ್ನು ಆಕ್ಷನ್ ಮಾಡುತ್ತಾ ಬರಲಾಗುತ್ತಿದೆ. ಇದೀಗ ಅವರು ಕಾರ್ಯಕ್ರಮವೊಂದರಲ್ಲಿ ಧರಿಸಿದ್ದ ಕಾಲುಚೀಲವನ್ನು ಹರಾಜು ಹಾಕಲಾಗಿದ್ದು, ಕೋಟ್ಯಂತರ ರೂಪಾಯಿಗೆ ಅದು ಮಾರಾಟವಾಗಿದೆ.

ಮೈಖಲ್ ಜಾಕ್ಸನ್ 1997 ರಲ್ಲಿ ನಡೆಸಿದ್ದ ಕಾನ್ಸರ್ಟ್ ಒಂದು ಭಾರಿ ಯಶಸ್ಸು ಗಳಿಸಿತ್ತು. ಕಾನ್ಸರ್ಟ್​​ನಲ್ಲಿ ಹೊಳೆಯುವ ಕಾಲು ಚೀಲಗಳನ್ನು ಮೈಖಲ್ ಜಾಕ್ಸನ್ ಧರಿಸಿದ್ದರು. ಆ ಹೊಳೆಯುವ ಕಾಲು ಚೀಲ ಆಗ ಬಲು ಜನಪ್ರಿಯವಾಗಿತ್ತು. ಫ್ರ್ಯಾನ್ಸ್​ ನಿಮೆನ್ ನಗರದಲ್ಲಿ ಕಾನ್ಸರ್ಟ್​ ನಡೆದಾಗ ಕಾರ್ಯಕ್ರಮದ ಬಳಿಕ​ ಮೈಖಲ್ ಜಾಕ್ಸನ್ ಅವರ ಡ್ರೆಸ್ಸಿಂಗ್ ಕೋಣೆಯ ಬಳಿ ಅವರದ್ದೇ ತಂಡದಲ್ಲಿದ್ದ ವ್ಯಕ್ತಿಯೊಬ್ಬನಿಗೆ ಜಾಕ್ಸನ್ ಅವರ ಕಾಲು ಚೀಲ ದೊರೆತಿತ್ತಂತೆ. ಅದನ್ನು ಆತ ಇಷ್ಟು ವರ್ಷ ಸಂಗ್ರಹಿಸಿ ಇಟ್ಟುಕೊಂಡಿದ್ದ.

ಇದೀಗ ಆ ಹೊಳೆಯುವ ಕಾಲು ಚೀಲಗಳನ್ನು ಫ್ರ್ಯಾನ್ಸ್​ನಲ್ಲಿ ಹರಾಜು ಹಾಕಲಾಗಿದೆ. ಕಾಲಾಂತರದಲ್ಲಿ ಬಿಳಿಯ ಬಣ್ಣದ ಕಾಲು ಚೀಲ ತುಸು ಹಳದಿ ಆಗಿದೆ, ಅದರ ಅಲಂಕಾರಕ್ಕೆ ಬಳಸಲಾಗಿರುವ ಹರಳುಗಳು ಸಹ ತುಸು ಮಬ್ಬಾಗಿವೆ. ಆದರೂ ಸಹ ಕಾಲು ಚೀಲ ಭಾರತೀಯ ರೂಪಾಯಿ ಲೆಕ್ಕದಲ್ಲಿ 7.70 ಲಕ್ಷ ರೂಪಾಯಿಗೆ ಹರಾಜಾಗಿದೆ. ಮೈಖಲ್ ಅವರ ಇತರೆ ವಸ್ತುಗಳ ಹರಾಜಿಗೆ ಹೋಲಿಸಿದರೆ ಇದು ಕಡಿಮೆ ಮೊತ್ತವೇ ಆಗಿದೆ.

ಇದನ್ನೂ ಓದಿ:ಕನ್ನಡ ಹಾಡಿಗೆ ಮೈಖಲ್ ಜಾಕ್ಸನ್ ಸ್ಟೆಪ್ಪು, ಕಿಶನ್ ಡ್ಯಾನ್ಸ್ ನೋಡಿ

ಅದೇ ಕಾರ್ಯಕ್ರಮದಲ್ಲಿ ಮೈಖಲ್ ಧರಿಸಿದ್ದ ಟೋಪಿಯನ್ನು 2023 ರಲ್ಲಿ ಪ್ಯಾರಿಸ್​​ನಲ್ಲಿ ಹರಾಜು ಹಾಕಿದ್ದಾಗ ಅದು ಬರೋಬ್ಬರಿ 70 ಲಕ್ಷಕ್ಕೆ ಹರಾಜಾಗಿತ್ತು. ಮೈಖಲ್ ಜಾಕ್ಸನ್ ಧರಿಸಿದ್ದ ಕೈಗವುಸು 2009 ರಲ್ಲಿ ಹರಾಜಾಗಿದ್ದಾಗ 3 ಕೋಟಿಗೂ ಹೆಚ್ಚು ಬೆಲೆ ತೆತ್ತು ಖರೀದಿ ಮಾಡಲಾಗಿತ್ತು.

ಮೈಖಲ್ ಜಾಕ್ಸನ್​ ವಿಶ್ವದ ನಂಬರ್ 1 ಪಾಪ್ ತಾರೆಯರಾಗಿದ್ದರು. ಅವರ ಹಾಡು ಮತ್ತು ಡ್ಯಾನ್ಸ್ ವಿಡಿಯೋಗಳು ಇಂದಿಗೂ ಟ್ರೆಂಡಿಂಗ್​ನಲ್ಲಿರುತ್ತವೆ. ಭಾರಿ ಸಂಖ್ಯೆಯ ಅಭಿಮಾನಿಗಳು ಇಂದಿಗೂ ಅವರಿಗೆ ಇದ್ದಾರೆ. ಜೂನ್ 25, 2009 ರಲ್ಲಿ ತಮ್ಮ 50ನೇ ವಯಸ್ಸಿಗೆ ಮೈಖಲ್ ಜಾಕ್ಸನ್ ನಿಧನ ಹೊಂದಿದರು. ಜಾಕ್ಸನ್ ಕೆಲವು ದೈಹಿಕ ಮತ್ತು ಮಾನಸಿಕ ಖಾಯಿಲೆಗಳಿಂದ ಬಳಲುತ್ತಿದ್ದರು. ಜೂನ್ 25 ರಂದು ಅವರಿಗೆ ಹೃದಯಾಘಾತವಾಗಿತ್ತು. ನಿದ್ದೆ ಮಾತ್ರೆಯ ಓವರ್​ಡೋಸ್​ನಿಂದಾಗಿ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ