AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದೆ ‘ಮಿಷನ್ ಇಂಪಾಸಿಬಲ್’? ಸಿನಿಮಾ ನೋಡಿ ಶಾಕ್ ಆದ ನೆಟ್ಟಿಗರು

Mission Impossible the final reckoning: ಟಾಮ್ ಕ್ರೂಸ್ ನಟನೆಯ ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರಿಕನಿಂಗ್’ ಸಿನಿಮಾ ಇಂದು (ಮೇ 17) ಭಾರತದಾದ್ಯಂತ ಬಿಡುಗಡೆ ಆಗಿದೆ. ಮಿಷನ್ ಇಂಪಾಸಿಬಲ್ ಸರಣಿಯ ಎಂಟನೇ ಸಿನಿಮಾ ಇದಾಗಿದೆ. ಸಿನಿಮಾ ನೋಡಿದ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನೆಟ್ಟಿಗರ ಪ್ರಕಾರ ಸಿನಿಮಾ ಹೇಗಿದೆ? ಇಲ್ಲಿದೆ ಮಾಹಿತಿ...

ಹೇಗಿದೆ ‘ಮಿಷನ್ ಇಂಪಾಸಿಬಲ್’? ಸಿನಿಮಾ ನೋಡಿ ಶಾಕ್ ಆದ ನೆಟ್ಟಿಗರು
Mission Imposible
ಮಂಜುನಾಥ ಸಿ.
|

Updated on: May 17, 2025 | 3:58 PM

Share

‘ಮಿಷನ್ ಇಂಪಾಸಿಬಲ್’ (Mission Imposible) ಸಿನಿಮಾ ಸರಣಿಯ ಎಂಟನೇ ಸಿನಿಮಾ ಇದೀಗ ಬಿಡುಗಡೆ ಆಗಿದೆ. ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ಇಂದು (ಮೇ 17) ಭಾರತದಲ್ಲಿ ಬಿಡುಗಡೆ ಆಗಿದ್ದು, ವಿಶೇಷವೆಂದರೆ ಇಡೀ ವಿಶ್ವದಲ್ಲಿ ಮೊದಲು ಭಾರತದಲ್ಲಿಯೇ ಈ ಸಿನಿಮಾ ತೆರೆಗೆ ಬಂದಿದೆ. ಬೆಂಗಳೂರು ಸೇರಿದಂತೆ ಹಲವು ಕಡೆ ಮುಂಜಾನೆಯಿಂದಲೇ ಈ ಸಿನಿಮಾದ ಶೋಗಳು ಆರಂಭವಾಗಿದ್ದವು. ಕೆಲ ಮಲ್ಟಿಪ್ಲೆಕ್ಸ್​ಗಳು ಸಹ ಬೆಳಿಗ್ಗೆ 6 ಗಂಟೆಗೆ ಶೋ ಪ್ರದರ್ಶಿಸಿದವು. ಸಿನಿಮಾ ನೋಡಿದ ಮಂದಿ ಸಿನಿಮಾ ಬಗ್ಗೆ ಟ್ವಿಟ್ಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ವಿಮರ್ಶೆ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ಸಿನಿಮಾದ ಟ್ವಿಟ್ಟರ್ ವಿಮರ್ಶೆ…

ಹಾಲಿವುಡ್ ಹ್ಯಾಂಡಲ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಮಾಡಿರುವ ಟ್ವೀಟ್​ನಂತೆ, ‘ಮಿಷನ್ ಇಂಪಾಸಿಬಲ್: ಫೈನಲ್ ರಿಕನಿಂಗ್ ಸಿನಿಮಾ ಈ ವರೆಗಿನ ಅತ್ಯದ್ಭುತ ಆಕ್ಷನ್ ಸಿನಿಮಾ ಅಂತೆ. ದೃಶ್ಯಗಳಲ್ಲಿ ಬರುವ ಟೆನ್ಷನ್, ಆಕ್ಷನ್, ಟೆನ್ಷನ್, ಚೇಸ್, ಸಿನಿಮಾದ ಎಡಿಟಿಂಗ್ ಎಲ್ಲವೂ ಸಹ ಅತ್ಯದ್ಭುತವಾಗಿದೆ. ಇದಕ್ಕಿಂತಲೂ ಚೆನ್ನಾಗಿ ಯಾರೂ ಮಾಡಲಾರರು ಎಂಬಂತೆ ಇದೆ. ಟಾಮ್ ಕ್ರೂಸ್ ತಮ್ಮ ಅತ್ಯುತ್ತಮವನ್ನು ಇದಕ್ಕೆ ನೀಡಿದ್ದಾ. ‘ಮಿಷನ್ ಇಂಪಾಸಿಬಲ್’ನಲ್ಲಿ ಎಲ್ಲವನ್ನೂ ನೋಡಿದ್ದಾಗಿದೆ ಎಂದು ನೀವು ಅಂದುಕೊಂಡಿದ್ದರೆ, ‘ಫೈನಲ್ ರೆಕನಿಂಗ್’ ನಿಮಗೆ ಇನ್ನಷ್ಟು ಉಣಬಡಿಸಲಿದೆ’ ಎಂದಿದ್ದಾರೆ.

ಎರಿಕ್ ಹಾರ್ಡ್​ಮ್ಯಾನ್ ಎಂಬುವರು ಟ್ವೀಟ್ ಮಾಡಿ, ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರಿಕನಿಂಗ್’ ಸಿನಿಮಾ ಬಹಳ ಸಂಕೀರ್ಣವಾಗಿದೆ. ಈ ಸಿನಿಮಾದಲ್ಲಿ ಹೆಚ್ಚು ಪ್ರಮಾಣದಲ್ಲಿ ಆಕ್ಷನ್ ಇಲ್ಲ ಆದರೆ ಸಾಕಷ್ಟು ತಿರುವುಗಳು ಇವೆ. ಆದರೆ ಇರುವ ಆಕ್ಷನ್ ದೃಶ್ಯಗಳೆಲ್ಲವೂ ಅತ್ಯದ್ಭುತವಾಗಿವೆ. ನೋಡಿದರೆ ನೋಡುತ್ತಲೇ ಇರುವಂತಿವೆ. ಕೆಲವು ದೃಶ್ಯಗಳಂತೂ ಶಾಕ್ ನೀಡುತ್ತವೆ ಆದರೆ ಇನ್ನು ಕೆಲ ದೃಶ್ಯಗಳು ಸಾಮಾನ್ಯವಾಗಿವೆಯಷ್ಟೆ’ ಎಂದಿದ್ದಾರೆ.

ರೇಚನ್ ರಿವ್ಯೂಸ್ ಎಂಬ ಖಾತೆಯಿಂದ ಮಾಡಲಾದ ಟ್ವೀಟ್​ನ ಅನುಸಾರ, ‘ಮಿಷನ್ ಇಂಪಾಸಿಬಲ್: ಫೈನಲ್ ರೆಕನಿಂಗ್’ ಸಿನಿಮಾ ಸಾಧಾರಣಕ್ಕಿಂತಲೂ ತುಸು ಚೆನ್ನಾಗಿದೆ. ಮೊದಲಾರ್ಧ ಅಷ್ಟೇನೂ ಗ್ರಿಪ್ಪಿಂಗ್ ಎನಿಸುವುದಿಲ್ಲ. ಮೊದಲಾರ್ಧದಲ್ಲಿ ಭಾಷಣಗಳು, ವಿವರಣೆಗಳೇ ಹೆಚ್ಚಾಗಿವೆ ಆದರೆ ಎರಡನೇ ಅರ್ಧದಲ್ಲಿ ಅದರಲ್ಲೂ ಆಕ್ಷನ್ ಪಾರ್ಟ್​ ಪ್ರಾರಂಭ ಆದ ಬಳಿಕ ಸಿನಿಮಾ ಬೇರೆಯದೇ ತಿರುವು ತೆಗೆದುಕೊಳ್ಳುತ್ತದೆ’ ಎಂದಿದ್ದಾರೆ.

ಲಾಸ್ ಏಂಜಲಿಸ್​ನ ಮ್ಯಾಗಿ ಎನ್ನುವರು ಟ್ವೀಟ್ ಮಾಡಿ, ‘ಮಿಷನ್ ಇಂಪಾಸಿಬಲ್ ಸಿನಿಮಾ ಸರಣಿಗೆ ಇದು ಅದ್ಭುತವಾದ ಅಂತ್ಯ (ಅಂತ್ಯ ಆದರೆ) ಸಿನಿಮಾ ನೋಡುವಾಗ ಈ ಸಿನಿಮಾ ಸರಣಿಯ ಹಲವು ಹಳೆಯ ನೆನಪುಗಳು ಬಂದವು. ನಾಯಕ ಈಥನ್ ಹಂಟ್​ನ ಕಾರ್ಯವೈಖರಿ, ಆತನ ಉದ್ದೇಶ, 30 ವರ್ಷಗಳ ಬಳಿಕ ಈಥನ್ ಹಂಟ್ ಈಗಲೂ ಅಷ್ಟೇ ವೇಗವಾಗಿ ಓಡುತ್ತಾನೆ. ಈ ಸಿನಿಮಾದ ಆಕ್ಷನ್ ಅದ್ಭುತವಾಗಿದೆ. ಸಿನಿಮಾದ ಕೊನೆಯ ಭಾಗವಂತೂ ಅತ್ಯದ್ಭುತ. ಆದರೆ ಕೊನೆಯ ಭಾಗದ ವರೆಗೆ ಬರುವವರೆಗೆ ತುಸು ತಾಳ್ಮೆ ಇರಬೇಕು. ‘ಮಿಷನ್ ಇಂಪಾಸಿಬಲ್’ ಸಿನಿಮಾ ಸರಣಿಗಾಗಿ ಟಾಮ್ ಕ್ರೂಸ್ ಸಾಕಷ್ಟು ಮಾಡಿದ್ದಾರೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ