AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಬಾಕ್ಸ್ ಆಫೀಸ್​ನಲ್ಲಿ ದಾಖಲೆ ಬರೆದ ಹಾಲಿವುಡ್ ಸಿನಿಮಾ ಮಿಷನ್ ಇಂಪಾಸಿಬಲ್

Mission impossible: ವಿಶ್ವ ವಿಖ್ಯಾತ ನಟ ಟಾಮ್ ಕ್ರೂಸ್ ಅವರ ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ನಿನ್ನೆಯಷ್ಟೆ ಭಾರತದಲ್ಲಿ ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಮಂದಿ ಬಹಳ ಇಷ್ಟಪಟ್ಟಿದ್ದಾರೆ. ಮೊದಲ ದಿನ ಭಾರತದ ಬಾಕ್ಸ್ ಆಫೀಸ್​ನಲ್ಲಿ ಗಳಿಕೆಯಲ್ಲಿ ಭರ್ಜರಿ ದಾಖಲೆಯನ್ನೇ ಬರೆದಿದೆ ಈ ಸಿನಿಮಾ.

ಭಾರತದ ಬಾಕ್ಸ್ ಆಫೀಸ್​ನಲ್ಲಿ ದಾಖಲೆ ಬರೆದ ಹಾಲಿವುಡ್ ಸಿನಿಮಾ ಮಿಷನ್ ಇಂಪಾಸಿಬಲ್
Mission Impossible
ಮಂಜುನಾಥ ಸಿ.
|

Updated on: May 18, 2025 | 2:38 PM

Share

ಭಾರತದ ಸಿನಿಮಾ ಮಾರುಕಟ್ಟೆ ಭಾರಿ ದೊಡ್ಡದು. ವರ್ಷಕ್ಕೆ ಸಾವಿರಾರು ಕೋಟಿ ವ್ಯವಹಾರ ಭಾರತದ ಬಾಕ್ಸ್ ಆಫೀಸ್​ನಲ್ಲಿ (Box Office) ಆಗುತ್ತದೆ. ಆದರೆ ಬಾಕ್ಸ್ ಆಫೀಸ್​ನಲ್ಲಿ ನೂರಾರು, ಸಾವಿರಾರು ಕೋಟಿ ಗಳಿಕೆ ಮಾಡುವ ತಾಕತ್ತಿರುವ ನಟರು, ನಿರ್ದೇಶಕರು ಬೆರಳೆಣಿಕೆಯಷ್ಟು ಮಾತ್ರ. ಮೊದಲ ದಿನವೇ ಹತ್ತಾರು ಕೋಟಿ ಕಲೆಕ್ಷನ್ ಮಾಡುವ ತಾಕತ್ತಿರುವ ನಟರು ಕಡಿಮೆಯೇ ಇದ್ದಾರೆ. ಆದರೆ ನಿನ್ನೆ ಬಿಡುಗಡೆ ಆದ ಹಾಲಿವುಡ್ ಸಿನಿಮಾ ಒಂದು ಭಾರತದ ಬಾಕ್ಸ್ ಆಫೀಸ್​ನಲ್ಲಿ ದಾಖಲೆ ಬರೆದಿದೆ.

ವಿಶ್ವದ ನಂಬರ್ 1 ಜನಪ್ರಿಯ ನಟ ಟಾಮ್ ಕ್ರೂಸ್ ನಟನೆಯ ‘ಮಿಷನ್ ಇಂಪಾಸಿಬಲ್: ಫೈನಲ್ ರೆಕನಿಂಗ್’ ಸಿನಿಮಾ ನಿನ್ನೆ (ಮೇ 17) ಭಾರತದಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು. ಅದಕ್ಕೆ ತಕ್ಕಂತೆ ‘ಮಿಷನ್ ಇಂಪಾಸಿಬಲ್’ ಸಿನಿಮಾ ಮೊದಲ ದಿನ ಭರ್ಜರಿ ಗಳಿಕೆ ಮಾಡಿದೆ. ಮಾತ್ರವಲ್ಲದೆ, ಭಾರತದಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಮಾತ್ರವಾಗಿದೆ.

‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ಮೊದಲ ದಿನ ಭಾರತದ ಬಾಕ್ಸ್ ಆಫೀಸ್​ನಲ್ಲಿ 17.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ನೆನಪಿರಲಿ ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ಮೆಟ್ರೊ ಸಿಟಿ, ಟೈರ್ 1 ಸಿಟಿಗಳಲ್ಲಿ ಮಾತ್ರವೇ ಬಿಡುಗಡೆ ಆಗಿದೆ. ಅದರಲ್ಲೂ ಮಲ್ಟಿಪ್ಲೆಕ್ಸ್​ ಚೈನ್​ಗಳಲ್ಲಿ ಮಾತ್ರವೇ ಬಿಡುಗಡೆ ಆದರೂ ಸಹ ಭಾರಿ ಮೊತ್ತವನ್ನು ಈ ಸಿನಿಮಾ ಕಲೆ ಹಾಕಿದೆ. ‘ಅವತಾರ್ 2’ ಸಿನಿಮಾ ಸಹ ಭಾರತದಲ್ಲಿ ಮೊದಲ ದಿನ ಇಷ್ಟು ದೊಡ್ಡ ಮೊತ್ತ ಕಲೆ ಹಾಕಿರಲಿಲ್ಲ.

ಇದನ್ನೂ ಓದಿ:‘ಮಿಷನ್ ಇಂಪಾಸಿಬಲ್’ ನಟ ಟಾಮ್​ ಕ್ರೂಸ್​ಗೆ ಬಾಲಿವುಡ್ ಸಿನಿಮಾ ಮಾಡುವಾಸೆ

‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ಬಿಡುಗಡೆಗೆ ಒಂದು ದಿನ ಮುಂಚೆ ಬಿಡುಗಡೆ ಆಗಿದ್ದ ಜನಪ್ರಿಯ ಹಾಲಿವುಡ್ ಸಿನಿಮಾ ‘ಫೈನಲ್ ಡೆಸ್ಟಿನೇಷನ್’ 4.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕೆಲ ವಾರಗಳ ಮುಂಚೆ ಬಿಡುಗಡೆ ಆಗಿದ್ದ ಮಾರ್ವೆಲ್​ನ ‘ಥಂಡರ್​ಬೋಲ್ಟ್’ ಸಿನಿಮಾ ಮೊದಲ ದಿನ 3.50 ಕೋಟಿ ಗಳಿಕೆ ಮಾಡಿತ್ತು. ಬಾಲಿವುಡ್​ನ ಸ್ಟಾರ್ ನಟ ಅಕ್ಷಯ್ ಕುಮಾರ್ ನಟನೆಯ ‘ಕೇಸರಿ 2’ ಸಿನಿಮಾ ಮೊದಲ ದಿನ ಗಳಿಸಿದ್ದು 7.80 ಕೋಟಿ ರೂಪಾಯಿಗಳು. ಅಜಯ್ ದೇವಗನ್ ನಟನೆಯ ‘ರೈಡ್ 2’ ಸಿನಿಮಾ ಮೊದಲ ದಿನ 18 ಕೋಟಿ ಗಳಿಸಿತ್ತು. ಇದಕ್ಕೆಲ್ಲ ಹೋಲಿಕೆ ಮಾಡಿದರೆ ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾದ ಗಳಿಕೆ ದೊಡ್ಡ ಮಟ್ಟದಲ್ಲಿಯೇ ಇದೆ.

‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ಮಿಷನ್ ಇಂಪಾಸಿಬಲ್ ಸರಣಿಯ ಎಂಟನೇ ಸಿನಿಮಾ ಆಗಿದ್ದು, ಇದು ಈ ಸರಣಿಯ ಕೊನೆ ಸಿನಿಮಾ ಎನ್ನಲಾಗುತ್ತಿದೆ. 2023 ರಲ್ಲಿ ಬಿಡುಗಡೆ ಆಗಿದ್ದ ಮಿಷನ್ ಇಂಪಾಸಿಬಲ್ ಸರಣಿಯ ಎರಡನೇ ಭಾಗ ಇದಾಗಿದ್ದು, ಸಿನಿಮಾ ನೋಡಿದವರು ಆಕ್ಷನ್ ದೃಶ್ಯಗಳನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಭಾರತದಲ್ಲಿ ಈ ಸಿನಿಮಾ 100 ಕೋಟಿ ಗಳಿಸುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ