‘ಮಿಷನ್ ಇಂಪಾಸಿಬಲ್’ ನಟ ಟಾಮ್ ಕ್ರೂಸ್ಗೆ ಬಾಲಿವುಡ್ ಸಿನಿಮಾ ಮಾಡುವಾಸೆ
ಟಾಮ್ ಕ್ರೂಸ್ ಅಭಿಮಾನಿಗಳು ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತದಲ್ಲಿರುವ ಅಭಿಮಾನಿಗಳಿಗೆ ಟಾಮ್ ಕ್ರೂಸ್ ಅವರು ಸಿಹಿ ಸುದ್ದಿ ನೀಡಿದ್ದಾರೆ. ತಮಗೆ ಬಾಲಿವುಡ್ ಶೈಲಿಯ ಸಿನಿಮಾ ಮಾಡುವ ಆಸೆ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.

ಹಾಲಿವುಡ್ ಟಾಮ್ ಕ್ರೂಸ್ (Tom Cruise) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ‘ಮಿಷನ್ ಇಂಪಾಸಿಬಲ್’, ‘ಟಾಪ್ ಗನ್’ ಮುಂತಾದ ಸಿನಿಮಾಗಳ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಸಿನಿಮಾಗಳು ಎಲ್ಲ ದೇಶಗಳಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತವೆ. ಭಾರತದಲ್ಲಿ ಕೂಡ ಅವರನ್ನು ಇಷ್ಟಪಡುವ ಕೋಟ್ಯಂತರ ಮಂದಿ ಇದ್ದಾರೆ. ಈಗ ಟಾಮ್ ಕ್ರೂಸ್ ನಟನೆಯ ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ (Mission Impossible The Final Reckoning) ಸಿನಿಮಾ ಬಿಡುಗಡೆ ಆಗಿದೆ. ಈ ಸಂದರ್ಭದಲ್ಲಿ ಅವರು ಬಾಲಿವುಡ್ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ತಮಗೂ ಬಾಲಿವುಡ್ (Bollywood) ಶೈಲಿಯಲ್ಲಿ ಸಿನಿಮಾ ಮಾಡುವ ಆಸೆ ಇದೆ ಎಂದು ಹೇಳಿದ್ದಾರೆ. ಟಾಮ್ ಕ್ರೂಸ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
‘ನನಗೆ ಬಾಲಿವುಡ್ ಸಿನಿಮಾಗಳು ತುಂಬ ಇಷ್ಟ. ಬೇರೆ ಬೇರೆ ಸಂಸ್ಕೃತಿಯ ಜೊತೆ ಕೆಲಸ ಮಾಡುವುದು ನನಗೆ ಇಷ್ಟ. ಡ್ರಾಮಾ, ಕಾಮಿಡಿ ನಡುವೆ ತಕ್ಷಣಕ್ಕೆ ಬರುವ ಹಾಡುಗಳನ್ನು ನಾನು ಇಷ್ಟಪಡುತ್ತೇನೆ. ನಾನು ಸಂಗೀತಮಯ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. ಡ್ರಾಮಾ ಕೂಡ ಇಷ್ಟಪಡುತ್ತೇನೆ. ನಿಮ್ಮ ಸಂಸ್ಕೃತಿ ಕೂಡ ಅದೇ ರೀತಿ ಇದೆ. ಅದನ್ನೇ ನಾನು ಮಾಡಬೇಕು. ಆ ರೀತಿಯ ಸಿನಿಮಾ ಮಾಡಬೇಕು ಎನ್ನುವ ಬಯಕೆ ನನಗೆ ಇದೆ’ ಎಂದು ಟಾಮ್ ಕ್ರೂಸ್ ಅವರು ಹೇಳಿದ್ದಾರೆ.
‘ಭಾರತ ಒಂದು ಅದ್ಭತ ರಾಷ್ಟ್ರ. ನಾನು ತಾಜ್ ಮಹಲ್ಗೆ ತೆರಳಿದ್ದು, ಮುಂಬೈನಲ್ಲಿ ಪ್ರೀಮಿಯರ್ ಆಗಿದ್ದು ಎಲ್ಲವೂ ಸ್ಮರಣೀಯ ಕ್ಷಣಗಳಾಗಿವೆ’ ಎಂದಿದ್ದಾರೆ ಟಾಮ್ ಕ್ರೂಸ್. ವೈರಲ್ ಆಗಿರುವ ಈ ಸಂದರ್ಶನದಲ್ಲಿ ಅವರು ಹಿಂದಿ ಡೈಲಾಗ್ ಹೇಳುವ ಮೂಲಕ ಭಾರತದ ಅಭಿಮಾನಿಗಳನ್ನು ಇಂಪ್ರೆಸ್ ಮಾಡಿದ್ದಾರೆ. ಸದ್ಯ ಭಾರತದಲ್ಲಿ ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ.
#MissionImpossible Watch @TomCruise in a never seen before avatar (speaking Hindi) To India Tom Cruise says – “मैं आपसे बहुत प्यार करता हूं,मुझ पर भरोसा करो एक आखिरी बार।” Well, if I can speak on behalf of entire India,”India loves you too.” pic.twitter.com/PyA2EW4C2Z
— Aishwarya Paliwal (@AishPaliwal) May 17, 2025
ಭಾರತದಲ್ಲಿ ಟಾಮ್ ಕ್ರೂಸ್ ಅವರಿಗೆ ಸಾಕಷ್ಟು ಸ್ನೇಹಿತರು ಇದ್ದಾರೆ. ಹಾಗಾಗಿ ಮತ್ತೆ ಭಾರತಕ್ಕೆ ಭೇಟಿ ನೀಡಲು ತಾವು ಕಾಯುತ್ತಿರುವುದಾಗಿ ಹೇಳಿದ್ದಾರೆ. ಟಾಮ್ ಕ್ರೂಸ್ ಸಿನಿಮಾಗಳಲ್ಲಿ ಮೈ ನವಿರೇಳಿಸುವ ಸಾಹಸ ದೃಶ್ಯಗಳು ಇರುತ್ತವೆ. ರಿಯಲ್ ಆಗಿ ಸ್ಟಂಟ್ಸ್ ಮಾಡುವ ಮೂಲಕ ಅವರು ಎಲ್ಲರ ಗಮನ ಸೆಳೆಯುತ್ತಾರೆ. ಒಂದು ವೇಳೆ ಅವರು ಬಾಲಿವುಡ್ ಸಿನಿಮಾ ಮಾಡಿದರೆ ಹೇಗಿರುತ್ತದೆ ಎಂಬ ಕೌತುಕ ಮೂಡಿದೆ.
ಇದನ್ನೂ ಓದಿ: ಹೇಗಿದೆ ‘ಮಿಷನ್ ಇಂಪಾಸಿಬಲ್’? ಸಿನಿಮಾ ನೋಡಿ ಶಾಕ್ ಆದ ನೆಟ್ಟಿಗರು
ಮೇ 17ರಂದು ‘ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಸಿನಿಮಾ ಬಿಡುಗಡೆ ಆಗಿದೆ. ಭಾರತದಲ್ಲಿ ಹಿಂದಿ, ಇಂಗ್ಲಿಷ್, ತಮಿಳು ಹಾಗು ತೆಲುಗು ವರ್ಷಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಟಾಮ್ ಕ್ರೂಸ್ ಅವರ ಅಭಿಮಾನಿಗಳು ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








