Oscar 2023 Winners List: ಈ ವರ್ಷ ಆಸ್ಕರ್ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ

‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ‘ಅತ್ಯುತ್ತಮ ಒರಿಜಿನಲ್ ಸಾಂಗ್​’ ವಿಭಾಗದಲ್ಲಿ ಆಸ್ಕರ್ ಅವಾರ್ಡ್ ಪಡೆಯಿತು. ಇನ್ನು, ‘ದಿ ಎಲಿಫಂಟ್ ವಿಸ್ಪರರ್ಸ್​’ಗೆ ಬೆಸ್ಟ್​ ಡಾಕ್ಯುಮೆಂಟರಿ ಶಾರ್ಟ್​ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ.

Oscar 2023 Winners List: ಈ ವರ್ಷ ಆಸ್ಕರ್ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ
ಆಸ್ಕರ್ ವಿನ್ನರ್ಸ್

Updated on: Mar 13, 2023 | 10:37 AM

2023ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮ ಪೂರ್ಣಗೊಂಡಿದೆ. ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಅನೇಕ ಸಿನಿ, ಕಲಾವಿದರು ಈ ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಭಾರತಕ್ಕೆ ಈ ಬಾರಿ ಎರಡು ಆಸ್ಕರ್​ ಅವಾರ್ಡ್ ಬಂದಿದೆ ಅನ್ನೋದು ವಿಶೇಷ. ‘ದಿ ಎಲಿಫಂಟ್ ವಿಸ್ಪರರ್ಸ್​’  ಡಾಕ್ಯುಮೆಂಟರಿ ಹಾಗೂ ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು (Naatu Naatu Song) ಪ್ರಶಸ್ತಿ ಗೆದ್ದಿವೆ. ಈ ಬಾರಿ ಅವಾರ್ಡ್​ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ.

ಭಾರತಕ್ಕೆ ಎರಡು ಪ್ರಶಸ್ತಿ

‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ‘ಅತ್ಯುತ್ತಮ ಒರಿಜಿನಲ್ ಸಾಂಗ್​’ ವಿಭಾಗದಲ್ಲಿ ಆಸ್ಕರ್ ಅವಾರ್ಡ್ ಪಡೆಯಿತು. ಇನ್ನು, ‘ದಿ ಎಲಿಫಂಟ್ ವಿಸ್ಪರರ್ಸ್​’ಗೆ ಬೆಸ್ಟ್​ ಡಾಕ್ಯುಮೆಂಟರಿ ಶಾರ್ಟ್​ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ನಮ್ಮ ದೇಶಕ್ಕೆ ಈ ಬಾರಿ ಎರಡು ಆಸ್ಕರ್ ಅವಾರ್ಡ್​ ಸಿಕ್ಕಿದೆ.

ಅತ್ಯುತ್ತಮ ಸಿನಿಮಾ

ಡ್ಯಾನಿಯಲ್ ಕ್ವಾನ್ ಹಾಗೂ ಡ್ಯಾನಿಯಲ್ ಶೈನರ್ಟ್​ ನಿರ್ದೇಶನದ ‘ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​’

ಅತ್ಯುತ್ತಮ ನಿರ್ದೇಶನ

ವಿನ್ನರ್: ಡ್ಯಾನಿಯಲ್ ಕ್ವಾನ್ ಹಾಗೂ ಡ್ಯಾನಿಯಲ್ ಶೈನರ್ಟ್​ – ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​

ಅತ್ಯುತ್ತಮ ನಟ

ವಿನ್ನರ್: ಬ್ರೆಂಡನ್ ಫ್ರೆಸರ್- ದಿ ವೇಲ್​

ಅತ್ಯುತ್ತಮ ನಟಿ

ವಿನ್ನರ್: ಮಿಶೆಲ್ ಯೋ- ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​ ಸಿನಿಮಾ

ಅತ್ಯುತ್ತಮ ಪೋಷಕ ನಟ

ವಿನ್ನರ್: ಕಿ ಹು ಕ್ವಾನ್- ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​

ಅತ್ಯುತ್ತಮ ಪೋಷಕ ನಟಿ

ವಿನ್ನರ್: ಜೇಮಿ ಲೀ ಕರ್ಟಿಸ್- ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​

ಅತ್ಯುತ್ತಮ ಛಾಯಾಗ್ರಹಣ

ವಿನ್ನರ್: ಜೇಮ್ಸ್ ಫ್ರೆಂಡ್- ಆಲ್​ ಕ್ವಾಯ್ಟ್​ ಆನ್​ ದಿ ವೆಸ್ಟರ್ನ್ ಫ್ರಂಟ್​

ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಸಿನಿಮಾ

ವಿನ್ನರ್: ಆಲ್​ ಕ್ವಾಯ್ಟ್​ ಆನ್​ ದಿ ವೆಸ್ಟರ್ನ್ ಫ್ರಂಟ್

ಬೆಸ್ಟ್ ಡಾಕ್ಯುಮೆಂಟರಿ ಫೀಚರ್

ವಿನ್ನರ್: ನವಾಲ್ನಿ

ಅತ್ಯುತ್ತಮ ಸಂಕಲನ

ವಿನ್ನರ್: ಪೌಲ್ ರೋಜರ್ಸ್​- ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್

ವಿನ್ನರ್: ಬೆಸ್ಟ್ ವಿಶ್ಯುವಲ್ ಎಫೆಕ್ಟ್ಸ್

ಅವತಾರ್: ದಿ ವೇ ಆಫ್ ವಾಟರ್

ಅತ್ಯುತ್ತಮ ವಸ್ತ್ರವಿನ್ಯಾಸ

ವಿನ್ನರ್: ರುತ್ ಕಾರ್ಟರ್​- ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:47 am, Mon, 13 March 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us