ಪಾಪ್ ಸಿಂಗರ್ ನಿಕ್ ಜೋನಸ್ (Nick Jonas) ಹಾಗೂ ನಟಿ ಪ್ರಿಯಾಂಕಾ ಚೋಪ್ರಾ ಅವರು ಕೆಲ ವರ್ಷಗಳ ಹಿಂದೆ ವಿವಾಹ ಆಗಿದ್ದರು. ಪ್ರಿಯಾಂಕಾ (Priyanka Chopra) ಮದುವೆ ಆದ ನಂತರದಲ್ಲಿ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಈ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದಾರೆ. ಮಗುವಿನ ಆರೈಕೆಯಲ್ಲಿ ಪ್ರಿಯಾಂಕಾ ಬ್ಯುಸಿ ಇದ್ದಾರೆ. ಈಗ ಅವರು ಮಗಳ ಜತೆ ಮೊದಲ ದೀಪಾವಳಿ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಿಯಾಂಕಾ ಇಲ್ಲಿಯೂ ಮಗಳ ಮುಖ ರಿವೀಲ್ ಮಾಡಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದಲ್ಲೇ ಉದ್ಯಮ ಆರಂಭಿಸಿದ್ದಾರೆ. ನ್ಯೂಯಾರ್ಕ್ನಲ್ಲಿ ಹೋಟೆಲ್ ಶುರು ಮಾಡಿದ್ದಾರೆ. ಇದರ ಜತೆಗೆ ಹಲವು ಹಾಲಿವುಡ್ ಸಿನಿಮಾ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಆದಾಗ್ಯೂ ಅವರು ಭಾರತದ ಸಂಸ್ಕೃತಿಯನ್ನು ಮರೆತಿಲ್ಲ. ಪ್ರತಿ ವರ್ಷ ಪತಿಯ ಜತೆ ದೀಪಾವಳಿ ಆಚರಿಸುತ್ತಾರೆ. ಈ ವರ್ಷವೂ ಅದು ಮುಂದುವರಿದಿದೆ.
ಪ್ರಿಯಾಂಕಾ ಹಾಗೂ ನಿಕ್ ಒಟ್ಟಾಗಿ ಹಬ್ಬ ಆಚರಿಸಿದ್ದಾರೆ. ಅವರ ಜತೆ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಸ್ ಕೂಡ ಇದ್ದಾಳೆ. ಪ್ರಿಯಾಂಕಾಗೆ ಇದು ಮಗಳ ಜತೆ ಮೊದಲ ದೀಪಾವಳಿ. ಹೀಗಾಗಿ ಸಂಭ್ರಮ ಕೊಂಚ ಜೋರಾಗಿಯೇ ಇದೆ. ಪ್ರಿಯಾಂಕಾ ಹಾಗೂ ನಿಕ್ ಒಂದೇ ಬಣ್ಣದ ಬಟ್ಟೆ ಧರಿಸಿದ್ದಾರೆ. ನಟಿ ಹಣೆಗೆ ಬಿಂದಿ ಇಟ್ಟಿದ್ದು ಎಲ್ಲರ ಗಮನ ಸೆಳೆದಿದೆ. ನಿಕ್ ಅವರು ಈ ಫೋಟೋ ಪೋಸ್ಟ್ ಮಾಡಿ, ‘ದೀಪಾವಳಿ ಹಬ್ಬದ ಶುಭಾಶಯ. ಎಲ್ಲರ ಬಾಳಿನಲ್ಲಿ ಸಂತೋಷ ಹಾಗೂ ಬೆಳಕು ಸಿಗಲಿ ಎಂದು ಹಾರೈಸುತ್ತೇನೆ’ ಎಂಬುದಾಗಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಫೋಟೋ ಒಂದು ವೈರಲ್ ಆಗಿತ್ತು. ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಹಾಗೂ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಅವರು ರೆಸ್ಟೋರೆಂಟ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಕೆಲ ಅಭಿಮಾನಿಗಳು ಈ ಫೋಟೋಗಳನ್ನು ವೈರಲ್ ಮಾಡಿದ್ದರು.
ಇದನ್ನೂ ಓದಿ: Priyanka Chopra: ಮಗುವಿನ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ; ಅಭಿಮಾನಿಗಳು ಹೇಳಿದ್ದೇನು?
ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್ ತೊರೆದು ಹಲವು ವರ್ಷ ಕಳೆದಿದೆ. ಸದ್ಯ ಅವರು ಹಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ಮತ್ತೆ ಅವರು ಹಿಂದಿ ಚಿತ್ರರಂಗಕ್ಕೆ ಮರಳಲಿ ಎಂಬುದು ಅನೇಕರ ಕೋರಿಕೆ. ಆದರೆ, ಅದು ಸದ್ಯಕ್ಕಂತೂ ನೆರವೇರುವುದು ಅನುಮಾನವೇ. ‘ಡಾನ್ 3’ ಸಿನಿಮಾ ಸಿದ್ಧಗೊಳ್ಳುತ್ತಿದೆ. ಈ ಮೊದಲಿನ ಸೀರಿಸ್ಗಳಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದರು. ‘ಡಾನ್ 3’ನಲ್ಲಿ ಅವರು ನಟಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
Published On - 9:07 am, Wed, 26 October 22