Avatar 2: ಬೇರೆ ಭಾಷೆಗೆ ಕೊಟ್ಟ ಗೌರವವನ್ನು ಕನ್ನಡಕ್ಕೆ ಕೊಡಲಿಲ್ಲ ‘ಅವತಾರ್​ 2’ ಚಿತ್ರ; ಸಿಡಿದೆದ್ದ ಕನ್ನಡಿಗರು

| Updated By: ಮದನ್​ ಕುಮಾರ್​

Updated on: Nov 04, 2022 | 8:33 AM

Avatar 2 in Kannada: ‘ಅವತಾರ್​ 2’ ಚಿತ್ರ ಡಿಸೆಂಬರ್​ 16ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಆದರೆ ಇದನ್ನು ಕನ್ನಡದಲ್ಲಿ ನೋಡುವ ಅವಕಾಶ ಇಲ್ಲ ಎಂಬುದು ಹಲವರಿಗೆ ಬೇಸರ ತರಿಸಿದೆ.

Avatar 2: ಬೇರೆ ಭಾಷೆಗೆ ಕೊಟ್ಟ ಗೌರವವನ್ನು ಕನ್ನಡಕ್ಕೆ ಕೊಡಲಿಲ್ಲ ‘ಅವತಾರ್​ 2’ ಚಿತ್ರ; ಸಿಡಿದೆದ್ದ ಕನ್ನಡಿಗರು
‘ಅವತಾರ್ 2’
Follow us on

ಕನ್ನಡದ ಸಿನಿಮಾಗಳು ಇಂದು ಜಾಗತಿಕ ಮಟ್ಟದಲ್ಲಿ ಹವಾ ಮಾಡಿವೆ. ಆದರೂ ಕೂಡ ಕೆಲವರು ಕನ್ನಡವನ್ನು ಕಡೆಗಣಿಸುವ ಕೆಲಸ ಮಾಡುತ್ತಲೇ ಇದ್ದಾರೆ. ಅದಕ್ಕೆ ಹೊಸ ಉದಾಹರಣೆ ಎಂದರೆ ‘ಅವತಾರ್​ 2’ (Avatar: The Way of Water) ಚಿತ್ರದಿಂದ ಆಗಿರುವ ಒಂದು ಲೋಪ. ಬಹುನಿರೀಕ್ಷಿತ ಈ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಭಾರತದಲ್ಲಿ ಇಂಗ್ಲಿಷ್​ ಜೊತೆಗೆ ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಿಗೆ ಡಬ್​ ಆಗಿ ಈ ಚಿತ್ರ ರಿಲೀಸ್​ ಆಗಲಿದೆ. ಆದರೆ ಕನ್ನಡಕ್ಕೆ ಡಬ್​ ಆಗಿಲ್ಲ. ಈ ಬಗ್ಗೆ ಪ್ರೇಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ನಿರ್ಮಾಣ ಸಂಸ್ಥೆಯಾದ ‘20th Century Fox’ ಕಡೆಯಿಂದ ಯಾವ ರೀತಿ ಪ್ರತಿಕ್ರಿಯೆ ಬರಲಿದೆ ಎಂಬ ಕೌತುಕ ನಿರ್ಮಾಣ ಆಗಿದೆ. ಜೇಮ್ಸ್​ ಕ್ಯಾಮೆರಾನ್​ ನಿರ್ದೇಶನದ ‘ಅವತಾರ್​ 2’ (Avatar 2) ಚಿತ್ರ ಡಿಸೆಂಬರ್​ 16ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

ಎಲ್ಲಾ ಸಿನಿಮಾಗಳು ಕನ್ನಡಕ್ಕೆ ಡಬ್​ ಆಗಲೇಬೇಕು ಎಂಬ ನಿಯಮವೇನೂ ಇಲ್ಲ. ಆದರೆ ‘ಅವತಾರ್​ 2’ ಚಿತ್ರ ಒಂದು ಲೋಪ ಎಸಗಿದೆ. ಈ ಹಿಂದೆ ಬಿಡುಗಡೆ ಮಾಡಿದ್ದ ಪೋಸ್ಟರ್​ನಲ್ಲಿ ಕನ್ನಡದ ಹೆಸರನ್ನೂ ಸೇರಿಸಲಾಗಿತ್ತು. ಅಲ್ಲದೇ, ಕೆಲವೇ ತಿಂಗಳ ಹಿಂದೆ ಕನ್ನಡ ವರ್ಷನ್​ನಲ್ಲಿ ಟೀಸರ್​ ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಚಿತ್ರದ ಟ್ರೇಲರ್​ ರಿಲೀಸ್​ ಆಗಿದ್ದು, ಅದು ಕನ್ನಡಕ್ಕೆ ಡಬ್​ ಆಗಿಲ್ಲ. ಅಲ್ಲದೇ, ಪೋಸ್ಟರ್​ನಲ್ಲಿ ಇದ್ದ ಕನ್ನಡ ಕೂಡ ಮಾಯ ಆಗಿದೆ. ನಿರ್ಮಾಣ ಸಂಸ್ಥೆಯ ಯೂಟ್ಯೂಬ್​ ಖಾತೆಯಲ್ಲಿ ಈ ಮೊದಲು ಇದ್ದ ಕನ್ನಡ ಟೀಸರ್​ ಸಹ ಈಗ ಕಾಣಿಸುತ್ತಿಲ್ಲ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಇದನ್ನೂ ಓದಿ
Michael Jackson Children: ಮೈಕೆಲ್​ ಜಾಕ್ಸನ್​ ಮಕ್ಕಳು ಈಗ ಹೇಗಿದ್ದಾರೆ? ಪ್ಯಾರಿಸ್​, ಪ್ರಿನ್ಸ್​ ಕಂಡು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ ಫ್ಯಾನ್ಸ್​
Justin Bieber: ವೈರಸ್​ನಿಂದ ಜಸ್ಟಿನ್​ ಬೀಬರ್​ ಮುಖಕ್ಕೆ ಪಾರ್ಶ್ವವಾಯು; ಖ್ಯಾತ ಗಾಯಕನಿಗೆ ಕಾಡುತ್ತಿದೆ ಗಂಭೀರ ಸಮಸ್ಯೆ
ಆಮಿರ್​ ಖಾನ್​ರನ್ನು ‘ಟೈಟಾನಿಕ್’​ ನಿರ್ದೇಶಕನಿಗೆ ಹೋಲಿಸಿದ ಹಾಲಿವುಡ್​ ದಿಗ್ಗಜ; ಇಲ್ಲಿದೆ ಅಚ್ಚರಿ ವಿಚಾರ
Priyanka Chopra: ಪ್ರಿಯಾಂಕಾ ಚೋಪ್ರಾ ರಕ್ತಸಿಕ್ತ ಮುಖ ನೋಡಿ ಗಾಬರಿಯಾದ ಫ್ಯಾನ್ಸ್; ಗಾಯಗಳ ಬಗ್ಗೆ ನಟಿ ಹೇಳಿದ್ದೇನು?

ಕನ್ನಡಿಗರು ಮೂಲ ಭಾಷೆಯಲ್ಲಿಯೇ ಎಲ್ಲ ಸಿನಿಮಾವನ್ನು ನೋಡುತ್ತಾರೆ ಎಂಬ ವಾದ ಇದೆ. ಅದನ್ನೇ ನಂಬಿಕೊಂಡು ಪರಭಾಷೆಯ ಕೆಲವು ನಿರ್ಮಾಣ ಸಂಸ್ಥೆಗಳು ತಮ್ಮ ಚಿತ್ರವನ್ನು ಕನ್ನಡಕ್ಕೆ ಡಬ್​ ಮಾಡುವುದಿಲ್ಲ. ಮಾರ್ಕೆಟ್​ ದೃಷ್ಟಿಯಿಂದ ‘ಅವತಾರ್​ 2’ ಚಿತ್ರದ ನಿರ್ಮಾಪಕರು ಕೂಡ ಹಾಗೆಯೇ ಮಾಡಿದ್ದರೆ ಅದು ಕನ್ನಡದ ಪ್ರೇಕ್ಷಕರಿಗೆ ತೋರಿದ ಅಗೌರವ ಆಗುತ್ತದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಜೋರಾಗಿದೆ. Avatar2InKannada ಎಂಬುದು ಟ್ರೆಂಡ್​ ಆಗಿದೆ. 2009ರಲ್ಲಿ ‘ಅವತಾರ’ ಸಿನಿಮಾ ಬಿಡುಗಡೆಯಾಗಿ ವಿಶ್ವಾದ್ಯಂತ ದಾಖಲೆ ಬರೆದಿತ್ತು. ಈಗ ಆ ಚಿತ್ರಕ್ಕೆ ಸೀಕ್ವೆಲ್​ ಬರುತ್ತಿದೆ. ಆದರೆ ಕನ್ನಡದಲ್ಲಿ ನೋಡುವ ಅವಕಾಶ ಇಲ್ಲ ಎಂಬುದು ಹಲವರಿಗೆ ಬೇಸರ ತರಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:33 am, Fri, 4 November 22