Avatar: ಮತ್ತೆ ರಿಲೀಸ್​ ಆಗುತ್ತಿದೆ ‘ಅವತಾರ್​’ ಸಿನಿಮಾ; ಈ ಬಾರಿ 2 ವಾರ ಮಾತ್ರ ಪ್ರದರ್ಶನ

Avatar movie re release: ಸೆಪ್ಟೆಂಬರ್​ 23ರಂದು ‘ಅವತಾರ್​’ ರಿ-ರಿಲೀಸ್​ ಆಗುತ್ತದೆ. ಆದರೆ ಒಂದು ಷರತ್ತು ಕೂಡ ಇದೆ. ಈ ಬಾರಿ ಈ ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವುದು ಕೇವಲ 2 ವಾರ ಮಾತ್ರ!

Avatar: ಮತ್ತೆ ರಿಲೀಸ್​ ಆಗುತ್ತಿದೆ ‘ಅವತಾರ್​’ ಸಿನಿಮಾ; ಈ ಬಾರಿ 2 ವಾರ ಮಾತ್ರ ಪ್ರದರ್ಶನ
‘ಅವತಾರ್’ ಪೋಸ್ಟರ್​
Follow us
| Updated By: ಮದನ್​ ಕುಮಾರ್​

Updated on:Aug 24, 2022 | 11:57 AM

2009ರಲ್ಲಿ ಬಂದ ‘ಅವತಾರ್​’ (Avatar) ಸಿನಿಮಾ ವಿಶ್ವಾದ್ಯಂತ ಧೂಳೆಬ್ಬಿಸಿತ್ತು. ಪ್ರತಿ ಬಾರಿ ಮರು ಬಿಡುಗಡೆ ಆದಾಗಲೂ ಈ ಹಾಲಿವುಡ್​ (Hollywood News) ಸಿನಿಮಾವನ್ನು ಜನರು ಮುಗಿಬಿದ್ದು ನೋಡಿದ ಉದಾಹರಣೆ ಇದೆ. ಈಗ ಮತ್ತೊಮ್ಮೆ ಈ ಚಿತ್ರವನ್ನು ಥಿಯೇಟರ್​ನಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತಿದೆ. ಸೆಪ್ಟೆಂಬರ್​ 23ರಂದು ರೀ-ರಿಲೀಸ್​ ಮಾಡಲು ಪ್ಲ್ಯಾನ್​ ಮಾಡಿಕೊಳ್ಳಲಾಗಿದೆ. ಜೇಮ್ಸ್ ಕ್ಯಾಮೆರಾನ್​ (James Cameron) ನಿರ್ದೇಶನದ ‘ಅವತಾರ್​’ ಸಿನಿಮಾದ ಪ್ರತಿ ದೃಶ್ಯ ಕೂಡ ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಎಲ್ಲ ವಯೋಮಾನದ ಪ್ರೇಕ್ಷಕರೂ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಈಗ ಇನ್ನೊಮ್ಮೆ ಚಿತ್ರಮಂದಿರದಲ್ಲಿ ಈ ಸಿನಿಮಾ ರಾರಾಜಿಸಲಿದೆ. ಜಗತ್ತಿನಾದ್ಯಂತ ಇರುವ ಸಿನಿಪ್ರಿಯರು ಸೆಪ್ಟೆಂಬರ್​ 23ಕ್ಕಾಗಿ ಕಾಯುತ್ತಿದ್ದಾರೆ. ಅಷ್ಟಕ್ಕೂ ಈಗ ಈ ಸಿನಿಮಾವನ್ನು ಮರು ಬಿಡುಗಡೆ ಮಾಡುತ್ತಿರುವುದು ಯಾಕೆ? ಅದಕ್ಕೂ ಮುಖ್ಯವಾದ ಕಾರಣ ಇದೆ. ಆ ಕುರಿತು ಇಲ್ಲಿದೆ ವಿವರ..

‘ಅವತಾರ್​’ ಸಿನಿಮಾದ ಮುಂದುವರಿದ ಕಥೆ ಬಗ್ಗೆ ತಿಳಿದುಕೊಳ್ಳಬೇಕು ಎಂಬುದು ಸಿನಿಪ್ರಿಯರ ಆಸೆ. ಅದಕ್ಕಾಗಿ ಈ ಚಿತ್ರದ ಸೀಕ್ವೆಲ್​ ಬರಬೇಕು ಎಂದು ಎಲ್ಲರೂ ಬಯಸುತ್ತಿದ್ದರು. ನಿರ್ದೇಶಕ ಜೇಮ್ಸ್​ ಕ್ಯಾಮೆರಾನ್​ ಅವರು ಈ ಚಿತ್ರದ ಎರಡನೇ ಪಾರ್ಟ್​ ಸಿದ್ಧ ಪಡಿಸುತ್ತಿದ್ದಾರೆ. ಅದಕ್ಕೆ ‘ಅವತಾರ್​: ದಿ ವೇ ಆಫ್​ ವಾಟರ್​’ ಎಂದು ಹೆಸರು ಇಡಲಾಗಿದೆ. ಈ ವರ್ಷವೇ ಆ ಚಿತ್ರ ರಿಲೀಸ್​ ಆಗಲಿದೆ. ಅದಕ್ಕೂ ಮುನ್ನ ಜನರನ್ನು ಮತ್ತೆ ಅವತಾರ್​ ಲೋಕಕ್ಕೆ ಕೊಂಡೊಯ್ಯಲು ಮೊದಲ ಪಾರ್ಟ್​​ ಅನ್ನು ರೀ-ರಿಲೀಸ್​ ಮಾಡಲಾಗುತ್ತಿದೆ.

ಇದನ್ನೂ ಓದಿ
Image
Titanic Movie: ಹೊಸ ಅವತಾರದಲ್ಲಿ ರಿಲೀಸ್ ಆಗುತ್ತಿದೆ ‘ಟೈಟಾನಿಕ್​’ ಸಿನಿಮಾ; ಇಲ್ಲಿದೆ ವಿವರ
Image
ಆಮಿರ್​ ಖಾನ್​ರನ್ನು ‘ಟೈಟಾನಿಕ್’​ ನಿರ್ದೇಶಕನಿಗೆ ಹೋಲಿಸಿದ ಹಾಲಿವುಡ್​ ದಿಗ್ಗಜ; ಇಲ್ಲಿದೆ ಅಚ್ಚರಿ ವಿಚಾರ
Image
ಭಾರತದ ಬಾಕ್ಸ್​ ಆಫೀಸ್​ನಲ್ಲಿ ಮೊದಲ ವಾರ 100 ಕೋಟಿ ರೂಪಾಯಿ ಗಳಿಸಿದ ‘ಸ್ಪೈಡರ್​ ಮ್ಯಾನ್​’  
Image
ಹಾಲಿವುಡ್​ ಆಫರ್​ ಬಗ್ಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ

‘ಅವತಾರ್​’ ಸಿನಿಮಾಗೆ ಈಗ ಒಂದಷ್ಟು ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. 4ಕೆ ರೆಸಲ್ಯೂಷನ್​ನಲ್ಲಿ ಸಿನಿಮಾ ಬಿತ್ತರ ಆಗಲಿದೆ. ಇದು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಬರೋಬ್ಬರಿ 13 ವರ್ಷಗಳ ಹಿಂದಿನ ಈ ಸಿನಿಮಾವನ್ನು ಈ ಕಾಲದ ತಂತ್ರಜ್ಞಾನಕ್ಕೆ ಅಪ್​ಗ್ರೇಡ್​ ಮಾಡಲು ಪ್ರಯತ್ನಿಸಲಾಗಿದೆ. ಈ ಸಿನಿಮಾದ ಗ್ರಾಫಿಕ್ಸ್​ ದೃಶ್ಯಗಳನ್ನು ನೋಡುವುದೇ ಒಂದು ಅದ್ಭುತ ಅನುಭವ.

View this post on Instagram

A post shared by Avatar (@avatar)

ಸೆಪ್ಟೆಂಬರ್​ 23ರಂದು ‘ಅವತಾರ್​’ ರಿ-ರಿಲೀಸ್​ ಆಗುತ್ತದೆ. ಹಾಗಂತ ನಿಧಾನವಾಗಿ ಯಾವಾಗ ಬೇಕಿದ್ದರೂ ನೋಡಿಕೊಳ್ಳೋಣ ಎಂದು ಆಲಸ್ಯ ತೋರಿಸುವಂತಿಲ್ಲ. ಯಾಕೆಂದರೆ ಈ ಬಾರಿ ಈ ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವುದು ಕೇವಲ 2 ವಾರ ಮಾತ್ರ! ಅಷ್ಟರೊಳಗೆ ನೋಡಬೇಕಷ್ಟೇ. ಇದನ್ನು ತಿಳಿಸುವ ಸಲುವಾಗಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟರ್​ಗಳನ್ನು ಹಂಚಿಕೊಂಡಿದೆ ಚಿತ್ರತಂಡ. ಅಲ್ಲದೇ, ರೀ-ರಿಲೀಸ್​ ಪ್ರಯುಕ್ತ ಹೊಸ ಟ್ರೇಲರ್​ ಕೂಡ ಬಿಡುಗಡೆ ಮಾಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:48 am, Wed, 24 August 22

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ