AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Met Gala: ಪ್ರಿಯಾಂಕಾ ಚೋಪ್ರಾ ಧರಿಸಿದ್ದ ನೆಕ್​ಲೆಸ್ ಬೆಲೆ 204 ಕೋಟಿ! ಏನಿದರ ವಿಶೇಷತೆ?

Met Gala 2023: ಮೆಟ್ ಗಾಲಾ 2023ಯಲ್ಲಿ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ವಜ್ರದ ಆಭರಣದ ಬೆಲೆ 204 ಕೋಟಿ! ಈ ವಜ್ರಕ್ಕೆ ಇಷ್ಟೋಂದು ಬೆಲೆ ಏಕೆ?

Met Gala: ಪ್ರಿಯಾಂಕಾ ಚೋಪ್ರಾ ಧರಿಸಿದ್ದ ನೆಕ್​ಲೆಸ್ ಬೆಲೆ 204 ಕೋಟಿ! ಏನಿದರ ವಿಶೇಷತೆ?
ಪ್ರಿಯಾಂಕಾ ಚೋಪ್ರಾ
ಮಂಜುನಾಥ ಸಿ.
|

Updated on:May 02, 2023 | 10:02 PM

Share

ಸಿನಿಮಾ ನಟಿಯರು ಭಾರಿ ದುಬಾರಿ ಉಡುಗೆಗಳನ್ನು ಧರಿಸುವುದು ಸಾಮಾನ್ಯ. ನಟಿಯರು ತೊಡುವ ಬಟ್ಟೆಗಳು, ಆಭರಣಗಳು ಅವುಗಳ ಬೆಲೆಗಳು ಆಗಾಗ್ಗೆ ಸದ್ದು ಮಾಡುತ್ತಿರುತ್ತವೆ. ಯಾವುದೇ ನಟಿಯರು ತೊಡುವ ಬಟ್ಟೆ, ಆಭರಣಗಳ ಬೆಲೆ ಹೆಚ್ಚೆಂದ್ರೆ ಕೋಟಿ, ಎರಡು ಕೋಟಿ ತೀರ ಹೆಚ್ಚೆಂದರೆ ಹತ್ತು ಕೋಟಿ ಇರಬಹುದು ಆದರೆ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಬರೋಬ್ಬರಿ 204 ಕೋಟಿ ರುಪಾಯಿ ಬೆಲೆಯ ಆಭರಣವನ್ನು ಧರಿಸಿದ್ದರು. ಅಷ್ಟು ದುಬಾರಿ ಮೊತ್ತದ ಈ ಆಭರಣದ ವಿಶೇಷತೆಯೇನು?

ನಟಿ ಪ್ರಿಯಾಂಕಾ ಚೋಪ್ರಾ, ಇತ್ತೀಚೆಗಷ್ಟೆ ನಡೆದ ಮೆಟ್ ಗಾಲಾ 2023 (Met Gala 2023) ಫ್ಯಾಷನ್ ಕಾರ್ಯಕ್ರಮದಲ್ಲಿ ಪತಿ ನಿಕ್ ಜೋನಸ್ (Nick Jonas)​ ಜೊತೆಗೆ ಭಾಗವಹಿಸಿದ್ದರು. ಕಪ್ಪು ಬಣ್ಣದ ಗೌನ್ ಮಾದರಿಯ ಗ್ಲಾಮರಸ್ ಉಡುಗೆ ತೊಟ್ಟಿದ್ದ ಪ್ರಿಯಾಂಕಾ, ಕೈಗೆ ಬಿಳಿಯ ಬಣ್ಣದ ಗವಸು ಧರಿಸಿದ್ದರು. ಆದರೆ ಅತಿ ಹೆಚ್ಚು ಗಮನ ಸೆಳೆದಿದ್ದು ಪ್ರಿಯಾಂಕಾ ಕೊರಳಲ್ಲಿದ್ದ ಧರಿಸಿದ್ದ ಹೊಳೆಯುವ ನೆಕ್​ಲೆಸ್. ಬಿಳಿ ಬಣ್ಣದ ಆದರೆ ಅಂಚಿನಲ್ಲಿ ತಿಳಿ ನೀಲಿ ಬಣ್ಣದಲ್ಲಿ ಹೊಳೆಯುತ್ತಿದ್ದ ವಜ್ರದ ನೆಕ್​ಲೆಸ್ ಧರಿಸಿದ್ದರು ಪ್ರಿಯಾಂಕಾ ಚೋಪ್ರಾ, ಈ ನೆಕ್​ಲೆಸ್ ಬೆಲೆ ಬರೋಬ್ಬರಿ 204 ಕೋಟಿ ರುಪಾಯಿಗಳು. ನೆಕ್​ಲೆಸ್​ಗೆ ಇಷ್ಟು ದುಬಾರಿ ಮೌಲ್ಯ ಬರುವುದಕ್ಕೆ ಆ ತಿಳಿ ನೀಲಿ ಬಣ್ಣದ ವಜ್ರವೇ ಕಾರಣ.

ಪ್ರಿಯಾಂಕಾ ಧರಿಸಿರುವ ಇಡೀಯ ನೆಕ್​ಲೆಸ್ ವಜ್ರದ್ದೇ ಆದರೂ ನೆಕ್​ಲೆಸ್​ನ ತುದಿಯಲ್ಲಿ ತೂಗುತ್ತಿರುವ ತಿಳಿ ನೀಲಿ ಬಣ್ಣದ ವಜ್ರದ ತುಣುಕಿಗೆ ಭಾರಿ ದೊಡ್ಡ ಬೆಲೆ. ಇದು ಬಲ್ಗರಿಯನ್ ಲಗೂನಾ ಬ್ಲೂ ಡೈಮೆಂಡ್. ವಿಶ್ವದಲ್ಲಿಯೇ ಅತಿ ಹೆಚ್ಚು ಬೆಲೆಗೆ ಹರಾಜಾದ ವಜ್ರದ ತುಣುಕುಗಳಲ್ಲಿ ಇದೂ ಒಂದು. 11.6 ಕ್ಯಾರೆಟ್​ನ ಈ ವಜ್ರ ನೈಸರ್ಗಿಕ ತಿಳಿ ನೀಲಿ ಬಣ್ಣವನ್ನು ಹೊಂದಿದೆ, ಇದು ಅಪರೂಪದಲ್ಲಿ ಅಪರೂಪ. ಈ ಬಣ್ಣಕ್ಕೆ ಫ್ಯಾನ್ಸಿ ವಿವಿದ್ ಬ್ಲೂ ಎನ್ನಲಾಗುತ್ತದೆ ಜೊತೆಗೆ ಲಗೂನಾ ಬ್ಲೂ ಎಂದೂ ಕರೆಯಲಾಗುತ್ತದೆ.

1970 ರಲ್ಲಿ ಮೊದಲ ಬಾರಿಗೆ ಇಟ್ಯಾಲಿಯನ್ ಫ್ಯಾಷನ್ ಹೌಸ್ ಬಲ್ಗರಿ, ಲಗೂನ್ ಬ್ಲೂ ವಜ್ರವನ್ನು ಮಾರಾಟ ಮಾಡಿತ್ತು, ಆಗಿನ ಕಾಲಕ್ಕೆ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಬಲ್ಗರಿ ಆಭರಣ ಎಂಬ ಖ್ಯಾತಿಗೆ ಈ ವಜ್ರದ ತುಣುಕು ಪಡೆದುಕೊಂಡಿತ್ತು. ಎಲ್ಲ ವಜ್ರಗಳಲ್ಲಂತ ಈ ಲಗೂನ್ ಬ್ಲೂ. ಭೂಮಿಯ ಬಹು ಆಳದಲ್ಲಿ ಈ ನೀಲಿ ಬಣ್ಣದ (ಅಥವ ಇನ್ಯಾವುದೇ ಬಣ್ಣದ) ವಜ್ರಗಳು ದೊರಕುತ್ತವೆ. ಅತಿಯಾದ ಒತ್ತಡದಿಂದಾಗಿ ಇವುಗಳ ಬಣ್ಣ ಬದಲಾಗಿರುತ್ತದೆ. ಇವುಗಳ ಸಂರಚನೆಯಲ್ಲಿಯೂ (ಕಾರ್ಬನ್ ಸ್ಟ್ರಕ್ಚರ್) ಸಣ್ಣ ವ್ಯತ್ಯಾಸವಿರುತ್ತದೆ. ಸಾಮಾನ್ಯ ಬಿಳಿ ವಜ್ರಗಳಿಗೆ ಹೋಲಿಸಿದರೆ ನೀಲಿ ವಜ್ರಗಳು ಅಪರೂಪದ. ಅದರಲ್ಲಿಯೂ 10 ಕ್ಕಿಂತಲೂ ಹೆಚ್ಚಿನ ಕ್ಯಾರೆಟ್ ಹೊಂದಿರುವ ವಜ್ರಗಳು ಸಿಗುವುದು ವಿರಳದಲ್ಲಿ ವಿರಳ.

ಇದನ್ನೂ ಓದಿ:Met Gala 2023: ಕೋಟಿ ಕೋಟಿ ಬೆಲೆ ಬಾಳುವ ಬಟ್ಟೆಯಲ್ಲಿ ಅಂಬಾನಿ ಏಕೈಕ ಪುತ್ರಿ, ಈ ಉಡುಪಿನ ವಿಶೇಷತೆ ಇಲ್ಲಿದೆ ನೋಡಿ

ಈ ಹಿಂದೆ ದೊರಕಿದ್ದ 15.6 ಕ್ಯಾರೆಟ್​ನ ‘ದಿ ಡಿ ಬೀರ್ಸ್ ಬ್ಲೂ’ ವಜ್ರವು 458 ಕೋಟಿಗೆ ಮಾರಾಟವಾಗಿತ್ತು, 12.03 ಕ್ಯಾರೆಟ್ ಇದ್ದ ಬ್ಲೂ ಮೂನ್ ಆಫ್ ಜೋಸೆಫೈನ್ ವಜ್ರವು 392 ಕೋಟಿ ರುಪಾಯಿಗಳಿಗೆ ಮಾರಾಟವಾಗಿತ್ತು. 1970 ರಲ್ಲಿ ಬಲ್ಗರಿಯು ಭಾರಿ ಶ್ರೀಮಂತ ಕುಟುಂಬವೊಂದಕ್ಕೆ ಈ ವಜ್ರವನ್ನು ಉಂಗುರ ರೂಪದಲ್ಲಿ ಮಾರಾಟ ಮಾಡಿತ್ತು. ಹಲವು ವರ್ಷಗಳ ಕಾಲ ಅದೇ ಕುಟುಂಬದಲ್ಲಿ ಇದ್ದ ಈ ವಜ್ರ ಇದೀಗ ಮೆಟ್ ಗಾಲಾನಲ್ಲಿ ಮತ್ತೆ ಪ್ರದರ್ಶಿತಗೊಂಡಿದೆ ಅದೂ ಪ್ರಿಯಾಂಕಾ ಚೋಪ್ರಾರ ಕೊರಳಿನಲ್ಲಿ ತೂಗಿ. ಮೆಟ್ ಗಾಲಾನಲ್ಲಿ ಈ ವಜ್ರವನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಮೆಟ್ ಗಾಲಾ ಬಳಿಕ ಇದು ಮತ್ತೆ ಹರಾಜಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:43 pm, Tue, 2 May 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್