ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಈಗ ಭಾರತದಲ್ಲಿ ಇಲ್ಲ. ಗಾಯಕ ನಿಕ್ ಜೋನಸ್ ಅವರನ್ನು ಮದುವೆ ಆದ ನಂತರ ಅವರು ಅಮೆರಿಕದಲ್ಲಿ ವಾಸವಾಗಿದ್ದಾರೆ. ದೇಶ ಬಿಟ್ಟು ಹೋದರೂ ಅವರು ಸಂಸ್ಕೃತಿ ಮರೆತಿಲ್ಲ. ಅದಕ್ಕೆ ಆಗಾಗ ಸಾಕ್ಷಿ ಸಿಗುತ್ತಲೇ ಇದೆ. ಈಗ ಪ್ರಿಯಾಂಕಾ ಚೋಪ್ರಾ ಅವರು ಹೊಸ ಸಿನಿಮಾದ (Priyanka Chopra New Movie) ಕೆಲಸ ಆರಂಭಿಸಿದ್ದಾರೆ. ಈ ಸಿನಿಮಾದ ಸ್ಕ್ರಿಪ್ಟ್ನ ಮೊದಲ ಪುಟದ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಏನೆಂದರೆ, ಸ್ಕ್ರಿಪ್ಟ್ನ ಆರಂಭದಲ್ಲಿ ಅವರು ಓಂ (Om) ಎಂದು ಬರೆದಿದ್ದಾರೆ! ಇದು ಎಲ್ಲರ ಗಮನ ಸೆಳೆದಿದೆ.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಅವರದ್ದು ಅಂತರ್ ಧರ್ಮೀಯ ವಿವಾಹ. ಹಾಗಿದ್ದರೂ ಕೂಡ ಪ್ರಿಯಾಂಕಾ ಚೋಪ್ರಾ ಅವರು ಹಿಂದೂ ಧರ್ಮದ ಆಚರಣೆಗಳನ್ನು ನಿಲ್ಲಿಸಿಲ್ಲ. ಪ್ರತಿ ವರ್ಷ ಅವರು ಹೋಳಿ, ದೀಪಾವಳಿ, ಗಣೇಶ ಚತುರ್ಥಿ ಮುಂತಾದ ಹಬ್ಬಗಳನ್ನು ಆಚರಿಸುತ್ತಾರೆ. ಆ ಕಾರಣದಿಂದ ಭಾರತದಲ್ಲಿನ ಅಭಿಮಾನಿಗಳಿಗೆ ಅವರು ಇಷ್ಟ ಆಗುತ್ತಾರೆ.
ಇದನ್ನೂ ಓದಿ: ವಿಜಯ್ ಜತೆ ಸಿನಿಮಾ ಮಾಡಲ್ಲ ಅಂತ ಕಣ್ಣೀರು ಹಾಕಿದ್ದ ಪ್ರಿಯಾಂಕಾ ಚೋಪ್ರಾ
ಯಾವುದೇ ಹೊಸ ಕಾರ್ಯ ಆರಂಭಿಸುವಾಗ ಅಥವಾ ಹೊಸ ಬರವಣಿಗೆ ಶುರು ಮಾಡುವಾಗ ಮೊದಲು ‘ಓಂ’ ಎಂದು ಬರೆಯುವ ಅಭ್ಯಾಸ ಭಾರತದಲ್ಲಿದೆ. ಬಹುತೇಕ ಸಿನಿಮಾದವರ ಸ್ಕ್ರಿಪ್ಟ್ನಲ್ಲಿ ಇದು ಕಾಣಿಸುತ್ತದೆ. ಪ್ರಿಯಾಂಕಾ ಚೋಪ್ರಾ ಅವರು ಮಾಡುತ್ತಿರುವುದು ಹಾಲಿವುಡ್ ಸಿನಿಮಾ ಆಗಿದ್ದರೂ ಕೂಡ ಅವರು ತಮ್ಮ ಪರಂಪರೆಯನ್ನು ಬಿಟ್ಟಿಲ್ಲ. ‘ದ ಬ್ಲಫ್’ ಸಿನಿಮಾದ ಸ್ಕ್ರಿಪ್ಟ್ ಮೇಲೆ ಓಂ ಎಂದು ಅವರು ಬರೆದಿದ್ದಾರೆ.
ಪ್ರಿಯಾಂಕಾ ಚೋಪ್ರಾ ನಟನೆಯ ಹೊಸ ಸಿನಿಮಾ ‘ದ ಬ್ಲಫ್’ ಚಿತ್ರೀಕರಣ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ‘ಅಮೇಜಾನ್ ಪ್ರೈಂ ವಿಡಿಯೋ’ ಒಟಿಟಿಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ‘ದಿ ಸಿಟಾಡೆಲ್’ ವೆಬ್ ಸಿರೀಸ್ ಬಳಿಕ ಪ್ರಿಯಾಂಕಾ ಚೋಪ್ರಾ ಅವರು ಎರಡನೇ ಬಾರಿಗೆ ಅಮೇಜಾನ್ ಪ್ರೈಂ ವಿಡಿಯೋ ಜೊತೆ ಕೈ ಜೋಡಿಸಿದ್ದಾರೆ. ‘ದ ಬ್ಲಫ್’ ಸಿನಿಮಾದಲ್ಲಿ ರೆಟ್ರೋ ಕಾಲದ ಕಹಾನಿ ಇರಲಿದೆ. ಈ ಸಿನಿಮಾ ಮೇಲೆ ಪ್ರಿಯಾಂಕಾ ಅವರ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಇದರ ಜೊತೆಗೆ ಅವರು ಹಿಂದಿ ಸಿನಿಮಾಗಳನ್ನು ಕೂಡ ಒಪ್ಪಿಕೊಳ್ಳಲಿ ಎಂಬುದು ಅಭಿಮಾನಿಗಳ ಆಸೆ. ಆದರೆ ಅದು ಸದ್ಯಕ್ಕಂತೂ ಈಡೇರುವ ರೀತಿ ಕಾಣುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.