33ನೇ ವಯಸ್ಸಿಗೆ ಕ್ಯಾನ್ಸರ್​ನಿಂದ ಖ್ಯಾತ ಸಿಂಗರ್​ ನಿಧನ; ಸಂತಾಪ ಸೂಚಿಸಿದ ಯುವರಾಜ್​ ಸಿಂಗ್

| Updated By: ರಾಜೇಶ್ ದುಗ್ಗುಮನೆ

Updated on: Apr 01, 2022 | 10:48 AM

ಟಾಮ್​ಗೆ ಮಿದುಳಿನಲ್ಲಿ ಟ್ಯೂಮರ್ ಇರುವ ವಿಚಾರ 2020ರಲ್ಲಿ ತಿಳಿದಿತ್ತು. ಈ ವಿಚಾರವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಕ್ಯಾನ್ಸರ್​ ಪತ್ತೆ ಆದ ನಂತರದಲ್ಲಿ ಅವರು ಸಾಕಷ್ಟು ಕುಗ್ಗಿದ್ದರು.

33ನೇ ವಯಸ್ಸಿಗೆ ಕ್ಯಾನ್ಸರ್​ನಿಂದ ಖ್ಯಾತ ಸಿಂಗರ್​ ನಿಧನ; ಸಂತಾಪ ಸೂಚಿಸಿದ ಯುವರಾಜ್​ ಸಿಂಗ್
Follow us on

ಬ್ರಿಟಿಷ್-ಐರಿಶ್ ಬ್ಯಾಂಡ್​ ‘ದಿ ವಾಂಟೆಡ್​’ನ (The Wanted) ಸದಸ್ಯನಾಗಿದ್ದ ಖ್ಯಾತ ಗಾಯಕ ಟಾಮ್​ ಪಾರ್ಕರ್ (Tom Parker)​ ಅವರು ಮಿದುಳು ಕ್ಯಾನ್ಸರ್​ನಿಂದ ನಿಧನ ಹೊಂದಿದ್ದಾರೆ. ಅವರಿಗೆ ಕೇವಲ 33 ವರ್ಷ ವಯಸ್ಸಾಗಿತ್ತು. ಟಾಮ್​ಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದರು. ಅವರು ನಿಧನ ಹೊಂದಿರುವ ವಿಚಾರವನ್ನು ‘ದಿ ವಾಂಟೆಡ್​’ ಬ್ಯಾಂಡ್ ಘೋಷಣೆ ಮಾಡಿದ್ದು, ಸಾಕಷ್ಟು ದುಃಖ ವ್ಯಕ್ತಪಡಿಸಿದೆ. ಅವರನ್ನು ಕಳೆದುಕೊಂಡಿದ್ದಕ್ಕೆ ಅಭಿಮಾನಿಗಳು ಕೂಡ ಸಂತಾಪ ಸೂಚಿಸಿದ್ದಾರೆ. ಟಾಮ್ ಪಾರ್ಕರ್​ ನಿಧನಕ್ಕೆ ವಿಶ್ವದ ನಾನಾ ಕಡೆಗಳಿಂದ ಸೋಶಿಯಲ್​ ಮೀಡಿಯಾದಲ್ಲಿ ಸಂತಾಪ ಸೂಚಿಸಲಾಗುತ್ತಿದೆ.  ಟೀಂ ಇಂಡಿಯಾ ಮಾಜಿ ಆಟಗಾರ​ ಯುವರಾಜ್​ ಸಿಂಗ್ (Yuvraj Singh ) ಕೂಡ ಈ ಬಗ್ಗೆ ಸಂತಾಪ ಸೂಚಿಸಿದ್ದಾರೆ.

ಟಾಮ್​ಗೆ ಮಿದುಳಿನಲ್ಲಿ ಟ್ಯೂಮರ್ ಇರುವ ವಿಚಾರ 2020ರಲ್ಲಿ ತಿಳಿದಿತ್ತು. ಈ ವಿಚಾರವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಕ್ಯಾನ್ಸರ್​ ಪತ್ತೆ ಆದ ನಂತರದಲ್ಲಿ ಅವರು ಸಾಕಷ್ಟು ಕುಗ್ಗಿದ್ದರು. ವಿಶ್ವದ ಪ್ರತಿಷ್ಠಿತ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಕೆಮೋಥೆರಪಿಗೆ ಒಳಗಾಗಿದ್ದರು. ಆದರೆ, ಕ್ಯಾನ್ಸರ್​ನ ಗುಣಮಾಡಲು ಸಾಧ್ಯವಾಗಲೇ ಇಲ್ಲ. ‘ನಮ್ಮ ಹೃದಯ ಒಡೆದು ಹೋಗಿದೆ. ಟಾಮ್ ನನ್ನ ಜಗತ್ತೇ ಆಗಿದ್ದರು. ಅವರಿಲ್ಲದೆ ನಾವು ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ’ ಎಂದು ಟಾಮ್ ಪತ್ನಿ ಕೆಲ್ಸಿ ಹಾರ್ಡ್ವಿಕ್ ದುಃಖ ಹೊರಹಾಕಿದ್ದಾರೆ.

ಕೆಲ್ಸಿ ಹಾಗೂ ಟಾಮ್​ 2018ರಲ್ಲಿ ಮದುವೆ ಆದರು. ಇವರಿಗೆ ಇಬ್ಬರು ಮಕ್ಕಳು. ಕುಟುಂಬದವರು ಹಾಗೂ ಬ್ಯಾಂಡ್​ನ ಸದಸ್ಯರು ಸಮೀಪದಲ್ಲಿರುವಾಗಲೇ ಟಾಮ್​ ಕೊನೆಯುಸಿರು ಎಳೆದಿದ್ದಾರೆ. ಅವರ ಫೋಟೋಗಳನನ್ನು ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಲಾಗುತ್ತಿದೆ.

2009ರಲ್ಲಿ ‘ದಿ ವಾಂಟೆಡ್​’ ಬ್ಯಾಂಡ್​ ಆರಂಭಗೊಂಡಿತು. ಟಾಮ್​ ಪಾರ್ಜರ್​ ಸೇರಿ ಐದು ಮಂದಿ ಇದನ್ನು ಆರಂಭಿಸಿದರು.  ಇತ್ತೀಚೆಗೆ ತಮ್ಮ ಬ್ಯಾಂಡ್​ ಸದಸ್ಯರ ಜತೆ ಫೋಟೋ ಹಾಕಿದ್ದ ಪಾರ್ಕರ್​, ‘ಕನಸಿನ ತಂಡ’ ಎಂದು ಕ್ಯಾಪ್ಶನ್​ ನೀಡಿದ್ದರು. ಈಗ ಆ ಕನಸಿನ ತಂಡದಿಂದ ಅವರು ದೂರವಾಗಿದ್ದಾರೆ.

ಇದನ್ನೂ ಓದಿ: ತೆರೆಗೆ ಬಂದ ಸಂಚಾರಿ ವಿಜಯ್ ನಟನೆಯ ಕೊನೆಯ ಸಿನಿಮಾ ‘ತಲೆದಂಡ’

ಹೆಲಿಕಾಪ್ಟರ್ ಮೂಲಕ ವಿಜಯ್ ದೇವರಕೊಂಡ ಮಾಸ್​ ಎಂಟ್ರಿ; ಇಲ್ಲಿದೆ ವಿಡಿಯೋ

Published On - 9:17 am, Fri, 1 April 22