ಬೆಂಗಳೂರು: ಕಷ್ಟಪಟ್ಟು ಕೋಟ್ಯಾಂತರ ಹಣ ಹಾಕಿ ನಿರ್ಮಿಸುವ ಸಿನಿಮಾವನ್ನು ಪೈರಸಿ ಮಾಡುವುದರಿಂದ ಚಿತ್ರರಂಗಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಪೈರಸಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಬೆಂಗಳೂರಿನಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಕೋಟಿಗೊಬ್ಬ 3 ಸಿನಿಮಾ ನಿರ್ಮಾಪಕರು ಮಧ್ಯಾಹ್ನ ಪೈರಸಿ ಕೃತ್ಯದ ಬಗ್ಗೆ ತಿಳಿಸಿ ಪೈರಸಿಯನ್ನು ನಿಲ್ಲಿಸುವಂತೆ ಮನವಿ ಕೊಟ್ಟಿದ್ದಾರೆ. ಇದೊಂದು ರೀತಿಯಲ್ಲಿ ಉದ್ದೇಶಿತ ಅಪರಾಧದಂತೆ ಭಾಸವಾಗುತ್ತದೆ. ಚಲನಚಿತ್ರರಂಗಕ್ಕೆ ಹೊಡೆತ ಕೊಡುವ ಪೈರಸಿಯನ್ನು ತಡೆಗಟ್ಟಲು ಎಲ್ಲ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದೇನೆ ಎಂದು ಅವರು ತಿಳಿಸಿದರು.
ಕೋಟಿಗೊಬ್ಬ 3 ಪೈರಸಿಯಾಗದಂತೆ ಕ್ರಮ
ಪೈರಸಿ ಬೆದರಿಕೆ ಸಂಬಂಧ ಪೊಲೀಸ್ ಕಮೀಷನರ್ಗೆ ದೂರು ನೀಡಿದ್ದೇವೆ. ನಮಗೆ ಬಂದ ಬೆದರಿಕೆ ಕುರಿತಂತೆ ಎಲ್ಲಾ ದಾಖಲೆ ನೀಡಲಾಗಿದೆ. 10 ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಪೈರಸಿ ಮಾಡುವುದಾಗಿ ಬೆದರಿಕೆ ಹಾಕಿರುವ ಮೇಸೆಜ್ಗಳು ಬಂದಿದ್ದವು. ಈ ಸಂಬಂಧ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ಗೆ ಕ್ರಮ ಕೈಗೊಳ್ಳುವಂತೆ ಆಯುಕ್ತರಿಂದ ಶಿಫಾರಸ್ಸು ಮಾಡಲಾಗಿದೆ. ತ್ವರಿತವಾಗಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಬುಧವಾರ ಕೋಟಿಗೊಬ್ಬ-3 ನಿರ್ಮಾಪಕ ಸೂರಪ್ಪಬಾಬು ತಿಳಿಸಿದ್ದರು.ಕೋಟಿಗೊಬ್ಬ 3 ಸಿನಿಮಾವನ್ನು ಪೈರಸಿಯಾಗದಂತೆ ಉಳಿಸಿಕೊಳ್ಳೋಕೆ ಏನು ಬೇಕೋ ಅದನ್ನು ಮಾಡುವಂತೆ ಸುದೀಪ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
‘ಕೋಟಿಗೊಬ್ಬ 3’ ರಿಲೀಸ್ಗೂ ಮೊದಲೇ ಪೈರಸಿ ಕಾಪಿಯ ಸಂದೇಶವೊಂದು ಟೆಲಿಗ್ರಾಮ್ನಲ್ಲಿ ಹರಿದಾಡುತ್ತಿದೆ. ‘ನೀವು ‘ಕೋಟಿಗೊಬ್ಬ 3’ ಸಿನಿಮಾ ಡೌನ್ಲೋಡ್ ಮಾಡಲು ನಮ್ಮ ಚಾನೆಲ್ಗೆ ಜಾಯಿನ್ ಆಗಿ’ ಎಂಬಿತ್ಯಾದಿ ಸಂದೇಶ ಹರಿದಾಡುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ‘ಕೋಟಿಗೊಬ್ಬ 3’ ನಿರ್ಮಾಪಕ ಸೂರಪ್ಪಬಾಬು ಅವರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ, ಪೈರಸಿ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:
ಪೈರಸಿ ಮಾಡುವವರಿಗೆ ‘ಕೋಟಿಗೊಬ್ಬ 3’ ತಂಡದಿಂದ ಖಡಕ್ ಎಚ್ಚರಿಕೆ
‘ಕೋಟಿಗೊಬ್ಬ 3’ ರಿಲೀಸ್ಗೂ ಮೊದಲೇ ಪೈರಸಿ ಮಾಡಲು ಕಿಡಿಗೇಡಿಗಳ ಪ್ಲ್ಯಾನ್; ಇಲ್ಲಿದೆ ಸಾಕ್ಷಿ